logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

cabbage-head
ನಾಮವಾಚಕ
  • = cabbage(2).
  • (ಅಶಿಷ್ಟ) (ರೂಪಕವಾಗಿ) ದಡ್ಡ.

  • cabbage-palm
    ನಾಮವಾಚಕ
    ಕೋಸುತಾಳೆ; ತರಕಾರಿಯಾಗಿ ಬಳಸುವ, ಕೋಸಿನಂತೆ ಇರುವ ಎಲೆ ಸುಳಿ ಮೂಡುವ ತಾಳೆಮರ.

    cabbage-rose
    ನಾಮವಾಚಕ
    ಕೋಸುಗುಲಾಬಿ; ನೆಟ್ಟಗೆ ಮೇಲಕ್ಕೆ ಬೆಳೆವ ಕೊಂಬೆಗಳಿರುವ, ಗುಲಾಬಿಬಣ್ಣದ ಸುವಾಸನೆ ಹೂವುಬಿಡುವ, ಕೋಸಿನಾಕಾರದ, ದೊಡ್ಡ ದುಂಡು ಗುಲಾಬಿ.

    cabbage-tree
    ನಾಮವಾಚಕ
    = cabbage-palm.

    cabbagy
    ಗುಣವಾಚಕ
  • ಎಲೆಕೋಸಿನ ಬಣ್ಣ, ರುಚಿ ಯಾ ವಾಸನೆ ಇರುವ.
  • ಎಲೆಕೋಸಿನಂಥ.

  • cabby
    ನಾಮವಾಚಕ
    (ಆಡುಮಾತು) = cabman.

    caber
    ನಾಮವಾಚಕ
    ಒರಟು ತೊಲೆ, ದೂಲ; ಮುಖ್ಯವಾಗಿ ಸ್ಕಾಟ್ಲಂಡಿನಲ್ಲಿ tossing the caber ಎಂಬ ಆಟದಲ್ಲಿ ಎಸೆಯುವ, ಒರಟಾಗಿ ಕೆತ್ತಿದ, ಮರದ ಕಾಂಡ.

    cabin
    ನಾಮವಾಚಕ
  • ಜೋಪಡಿ; ಗುಡಿಸಲು; ಕುಟೀರ; ಗುಡಿ.
  • ಹಡಗು, ವಿಮಾನ ಯಾ ಆಕಾಶನೌಕೆಯಲ್ಲಿ ಪ್ರಯಾಣಿಕರಿಗೆ ಯಾ ಚಾಲಕವರ್ಗಕ್ಕೆ ನಿಗದಿಯಾದ ಕೋಣೆ.
  • ವಿಮಾನದಲ್ಲಿ ಸಾಮಾನಿನ–ಕೋಣೆ, ವಿಭಾಗ.
  • (ಹಡಗು, ವಿಮಾನ, ರೈಲು, ಮೊದಲಾದ ವಾಹನಗಳಲ್ಲಿ) ಚಾಲಕ ಕೋಣೆ; ನಡೆಸುವವನ ಕೋಣೆ.

  • cabin
    ಸಕರ್ಮಕ ಕ್ರಿಯಾಪದ
    (ಮುಖ್ಯವಾಗಿ ಭೂತಕೃದಂತದಲ್ಲಿ) ಇಕ್ಕಟ್ಟಿನಲ್ಲಿರಿಸು; ಕಿರಿದಾದ ಜಾಗದಲ್ಲಿ–ತುರುಕು, ಗಿಡಿ.

    cabin class
    ನಾಮವಾಚಕ
    (ಹಡಗಿನಲ್ಲಿ) ಕ್ಯಾಬಿನ್‍ ದರ್ಜೆ; ಮಧ್ಯಮ ದರ್ಜೆ; ಪ್ರಯಾಣದಲ್ಲಿ ಪ್ರಥಮ ತರಗತಿಗೂ ಕೊನೆಯದಕ್ಕೂ ನಡುವಣ ವರ್ಗದ ಸ್ಥಳಾವಕಾಶ.


    logo