logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

azoic
ಗುಣವಾಚಕ
  • ಅಜೀವಕ; ಜೀವಪೂರ್ವದ; ಜೀವದ ಸೂಚನೆಯೇ ಇಲ್ಲದ.
  • (ಭೂವಿಜ್ಞಾನ) ನಿರ್ಜೀವ.

  • azote
    ನಾಮವಾಚಕ
    ನೈಟ್ರೊಜನ್‍ (ಅನಿಲಕ್ಕೆ ಹಿಂದೆ ಇದ್ದ ಹೆಸರು).

    azotic
    ಗುಣವಾಚಕ
    ನೈಟ್ರೊಜನ್‍ನಿಂದ ಕೂಡಿದ; ನೈಟ್ರೊಜನ್‍ನಂಥ.

    azotize
    ಸಕರ್ಮಕ ಕ್ರಿಯಾಪದ
  • ನೈಟ್ರೋಜನ್‍ ತುಂಬು.
  • ಜೀವ ಕಳೆ; ಪ್ರಾಣ ತೆಗೆ.

  • Aztec
    ನಾಮವಾಚಕ
    ಆಟೆಕ್‍:
  • ಮೆಕ್ಸಿಕೋವನ್ನು ಸ್ಪೇನಿನ ಕಾರ್ಟೆಸನು 1519ರಲ್ಲಿ ಗೆಲ್ಲುವುದಕ್ಕೆ ಮುಂಚೆ, ಅಲ್ಲಿ ಪ್ರಾಬಲ್ಯದಲ್ಲಿದ್ದ ಮೂಲಜನಾಂಗದವ.
  • ಆ ಜನಾಂಗದವರ ಭಾಷೆ.

  • Aztec
    ಗುಣವಾಚಕ
    ಆಟೆಕ್‍ ಜನಾಂಗದ ಯಾ ಭಾಷೆಯ.

    azure
    ನಾಮವಾಚಕ
  • ಆಕಾಶನೀಲಿ; ಬಾನ್ನೀಲಿ; ಅಸ್ಮಾನಿ.
  • (ವಂಶಲಾಂಛನ ವಿದ್ಯೆ) ನೀಲಿ; ಉಜ್ಜ್ವಲ ನೀಲವರ್ಣ.
  • ನಿರ್ಮಲಾಕಾಶ; ಮೋಡವಿಲ್ಲದ ಬಾನು.
  • ‘ಲೇಪಿಸ್‍ ಲ್ಯಾಸೂಲಿ’ ಎಂಬ ನೀಲರತ್ನ ಪಡಿ.

  • azure
    ಗುಣವಾಚಕ
  • ಬಾನ್ನೀಲದ.
  • (ವಂಶಲಾಂಛನ ವಿದ್ಯೆ) ನೀಲಿಯ.
  • (ರೂಪಕವಾಗಿ) ಸ್ವಚ್ಛ; ನಿರ್ಮಲ; ಪ್ರಶಾಂತ; ಮೋಡವಿಲ್ಲದ ಬಾನಿನಂತಿರುವ.

  • azure
    ಸಕರ್ಮಕ ಕ್ರಿಯಾಪದ
    ನೀಲವಾಗಿಸು; ನೀಲಿ ಬಣ್ಣ ಹಾಕು.

    azygous
    ನಾಮವಾಚಕ
    (ಅಂಗರಚನಾಶಾಸ್ತ್ರ) ಅಯುಗ್ಮ; ಅಯುಗ್ಮಾಂಗ; ಜೋಡಿಯಾಗಿಲ್ಲದೆ ಒಂಟಿಯಾಗಿರುವ ಅಂಗ, ರಚನೆ.


    logo