logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

offhandedness
ನಾಮವಾಚಕ
  • ಪೂರ್ವ ಸಿದ್ಧತೆ ಯಾ ಯೋಜನೆ ಇಲ್ಲದಿರುವಿಕೆ.
  • ಸಂಪ್ರದಾಯವವನ್ನು ಅನುಸರಿಸದ, ಸಮಾಜ ಮರ್ಯಾದೆಯನ್ನು ಪಾಲಿಸದ–ಲಕ್ಷಣ ಯಾ ವರ್ತನೆ.

  • office
    ನಾಮವಾಚಕ ಪದಗುಚ್ಛ
  • ಕಚೇರಿ; ಆಹೀಸು; ಕಾರ್ಯಸ್ಥಾನ; ಕಾರ್ಯಾಲಯ; ಕೆಲಸದ ಸ್ಥಳವಾಗಿ, ಮುಖ್ಯವಾಗಿ ಗುಮಾಸ್ತೆಯ ಯಾ ಆಡಳಿತದ ಕೆಲಸ ನಡೆಸಲು ಬಳಸುವ ಕೋಣೆ ಯಾ ಕಟ್ಟಡ.
  • ಕಚೇರಿ; ಒಂದು ನಿರ್ದಿಷ್ಟ ಕೆಲಸಕ್ಕಾಗಿ ಗೊತ್ತುಮಾಡಿರುವ ಕೊಠಡಿ ಯಾ ಇಲಾಖೆ ಯಾ ಕಟ್ಟಡ: booking office (ರೈಲ್ವೆ ಕಚೇರಿಯ) ಬುಕಿಂಗ್‍ ಆಹೀಸು. enquiry office ವಿಚಾರಣಾ ಕಚೇರಿ. ticket office ಟಿಕೆಟ್‍ ಕೊಡುವ ಕೊಠಡಿ. post office ಅಂಚೆಕಚೇರಿ.
  • (ಸ್ಥಳೀಯ) ಕಚೇರಿ; ಒಂದು ದೊಡ್ಡ ಸಂಸ್ಥೆಯ ಸ್ಥಳೀಯ ಶಾಖಾ ಕಚೇರಿ: our Bangalore office ನಮ್ಮ ಬೆಂಗಳೂರು ಶಾಖೆಯ ಕಚೇರಿ.
  • (ಅಮೆರಿಕನ್‍ ಪ್ರಯೋಗ) (ವೈದ್ಯ ಮೊದಲಾದ ವೃತ್ತಿನಿರತ ವ್ಯಕ್ತಿಯ) ಸಲಹಾ–ಕೋಣೆ, ರೂಮು, ಕೊಠಡಿ.
  • (ಮುಖ್ಯವಾಗಿ ಸಾರ್ವಜನಿಕ) ಹುದ್ದೆ; ಅಧಿಕಾರ ಸ್ಥಾನ; ಉದ್ಯೋಗ; ಪದವಿ; ಕರ್ತವ್ಯಗಳ ಜವಾಬ್ದಾರಿಯುಳ್ಳ ಕೆಲಸ, ಹುದ್ದೆ: was given an office under the government ಸರ್ಕಾರಿ ಹುದ್ದೆಯನ್ನು ಕೊಡಲಾಯಿತು.
  • (ಮುಖ್ಯವಾಗಿ ಸಚಿವನ ಯಾ ಅಧಿಕಾರದಲ್ಲಿರುವ ಪಕ್ಷದ) ಅಧಿಕಾರಾವಧಿ: take office ಅಧಿಕಾರ ವಹಿಸಿಕೊ. enter upon office ಅಧಿಕಾರಕ್ಕೆ ಬರು. hold office ಅಧಿಕಾರ ಪಡೆದಿರು; ಅಧಿಕಾರದಲ್ಲಿರು. out of office for 13 years ಹದಿಮೂರು ವರ್ಷ ಅಧಿಕಾರದಲ್ಲಿರಲಿಲ್ಲ.
  • (Office) ಕಚೇರಿ; ಕಾರ್ಯಾಲಯ:
    1. ಒಂದು ಸರ್ಕಾರಿ ಇಲಾಖೆಯ ಕಾರ್ಯಸ್ಥಾನ: Foreign Office ವಿದೇಶಾಂಗ ವ್ಯವಹಾರ (ಖಾತೆಯ) ಕಚೇರಿ.
    2. ಒಂದು ಸರ್ಕಾರಿ ಇಲಾಖೆ ಯಾ ಇಲಾಖೆಯ ಸಿಬ್ಬಂದಿ, ಅಧಿಕಾರಿ ವರ್ಗ: the War Office ಯುದ್ಧ ಇಲಾಖೆಯ ಯಾ ಯುದ್ಧಖಾತೆ ಕಚೇರಿಯ ಅಧಿಕಾರಿವರ್ಗ. Post Office ಅಂಚೆ ಇಲಾಖೆ(ಯವರು).
    3. ಒಂದು ಸರ್ಕಾರಿ ಇಲಾಖೆಯ ಒಟ್ಟು ಅಧಿಕಾರ.
    1. ಒಬ್ಬನ ಹುದ್ದೆಗೆ, ಸ್ಥಾನಕ್ಕೆ ಸಂಬಂಧಿಸಿದ ಕರ್ತವ್ಯ: it is my office ಅದು ನನ್ನ ಕರ್ತವ್ಯ.
    2. ಮಾಡಬೇಕಾದ ಕೆಲಸ, ಕಾರ್ಯ: the office of the arteries ಧಮನಿಗಳ ಕೆಲಸ.
  • (ಸಾಮಾನ್ಯವಾಗಿ ಬಹುವಚನದಲ್ಲಿ)
    1. ದಯೆ (ತೋರಿಸುವುದು); ಮರ್ಯಾದೆ(ಯಿಂದ) ನೋಡುವುದು.
    2. ಉಪಕಾರ.
  • (ಚರ್ಚ್‍)
    1. ಅಧಿಕೃತ ಆರಾಧನ ಕ್ರಮ.
    2. (ರೋಮನ್‍ ಕ್ಯಾಥೊಲಿಕ್‍ ಚರ್ಚುಗಳಲ್ಲಿ ಗೊತ್ತು ಮಾಡಿರುವ ಪಾರಾಯಣ ಪುಸ್ತಕದ) ದಿನಚರಿ–ಪಠನ, ಪಾರಾಯಣ: say the office (ರೋಮನ್‍ ಕ್ಯಾಥೊಲಿಕ್‍) ದಿನಚರಿ ಪಾರಾಯಣ ಮಾಡು.
    3. (ಆಂಗ್ಲಿಕನ್‍ ಚರ್ಚ್‍) ಬೆಳಗಿನ ಮತ್ತು ಸಂಜೆಯ ಪ್ರಾರ್ಥನೆ; ಮಾಸ್‍ ಸಂಸ್ಕಾರಸಂಬಂಧವಾದ ಪ್ರಾರ್ಥನೆ, ಆರಾಧನೆ; ಸಂದರ್ಭಾನುಸಾರವಾದ ಇತರ ಪ್ರಾರ್ಥನೆ, ಮಾಸ್‍ ಸಂಸ್ಕಾರ, ಇತ್ಯಾದಿ.
  • ವಿಧಿವಿಹಿತ–ಕ್ರಿಯೆ, ಆಚರಣೆ, ಸಂಸ್ಕಾರ.
  • (ಬಹುವಚನದಲ್ಲಿ) (ಬ್ರಿಟಿಷ್‍ ಪ್ರಯೋಗ) (ಕೊಠಡಿಗಳು, ಔಟ್‍ ಹೌಸ್‍, ಮೊದಲಾದ) ಅಂಕಣಗಳು; ಗೃಹವಿಭಾಗಗಳು; ಮನೆಯ ಬೇರೆ ಬೇರೆ ಕೆಲಸಗಳಿಗೂ, ಉಗ್ರಾಣ ಮೊದಲಾದವುಗಳಿಗೂ ಬಳಸುವ ಮನೆಯ ಭಾಗಗಳು: three bedrooms, bathroom and compact offices ಮನೆಯ ಮೂರು ಮಲಗುವ ಮನೆಗಳು, ಸ್ನಾನದ ಮನೆ ಮತ್ತು ಅದಕ್ಕೆ ಅಡಕವಾದ ಬೇರೆ ಬೇರೆ ಅಂಕಣಗಳು.
  • (ಅಶಿಷ್ಟ) ತಿಳಿವಳಿಕೆ; ಸೂಚನೆ; ಸಂಜ್ಞೆ: give the office ತಿಳಿವಳಿಕೆ ಕೊಡು. take the office ಸೂಚನೆ ಪಡೆ.
  • ಲೆಕ್ಕದ ಮನೆ.
  • ಒಂದು ನಿರ್ದಿಷ್ಟ ಉದ್ದೇಶದ ಸಂಸ್ಥೆ, ಕಂಪನಿ: Insurance Office ವಿಮಾ ಕಚೇರಿ ಕಂಪನಿ.

  • office block
    ನಾಮವಾಚಕ
    ಕಚೇರಿ–ಕಟ್ಟಡ, ಸೌಧ; ವಾಣಿಜ್ಯ ಕಚೇರಿಗಳಿಗಾಗಿ ಕಟ್ಟಿದ ಬೃಹತ್ತಾದ ಕಟ್ಟಡ.

    office boy
    ನಾಮವಾಚಕ
    ಕಚೇರಿ ಹುಡುಗ; ವಾಣಿಜ್ಯ ಕಚೇರಿ, ಅಂಗಡಿ ಮುಂಗಟ್ಟುಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಸಿಕೊಳ್ಳಲು ನೇಮಿಸಿಕೊಂಡ ಯುವಕ.

    office girl
    ನಾಮವಾಚಕ
    ಕಚೇರಿ ಹುಡುಗಿ; ವಾಣಿಜ್ಯ ಕಚೇರಿ, ಅಂಗಡಿ ಮುಂಗಟ್ಟುಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ನೇಮಿಸಿಕೊಂಡ ಹುಡುಗಿ.

    office hours
    ನಾಮವಾಚಕ
    ಕಚೇರಿ ವೇಳೆ: (ವಾಣಿಜ್ಯ) ಕಚೇರಿಯಲ್ಲಿ ಕೆಲಸ ನಡೆಯುವ ಸಮಯ.

    office of arms
    ನಾಮವಾಚಕ
    ವಂಶಲಾಂಛನಾಗಾರ; ಬಿರುದಾವಳಿ ಕಚೇರಿ; ರಾಜವಂಶಗಳ ಹಾಗೂ ವರಿಷ್ಠ ವರ್ಗದವರ ವಂಶಗಳ ಬಿರುದು, ಲಾಂಛನ, ಮೊದಲಾದವುಗಳ ದಹ್ತರನ್ನು ಇಟ್ಟಿರುವ ಸಂಸ್ಥೆಯಾದ(ಬ್ರಿಟಿಷ್‍ ಪ್ರಯೋಗ) College of Arms ಯಾ ಇತರ ದೇಶದ ಅಂಥದೇ ಸಂಸ್ಥೆ.

    office-bearer
    ನಾಮವಾಚಕ
    ಅಧಿಕಾರಿ; ಹುದ್ದೇದಾರ.

    office-worker
    ನಾಮವಾಚಕ
    (ವಾಣಿಜ್ಯ) ಕಚೇರಿಯ ಕೆಲಸಗಾರ.

    officer
    ನಾಮವಾಚಕ ಪದಗುಚ್ಛ
  • ಅಧಿಕಾರಿ; ಹುದ್ದೇದಾರ; ಮುಖ್ಯವಾಗಿ ನೌಕಾಸೈನ್ಯ, ಭೂಸೈನ್ಯ, ವಾಯುಪಡೆ ಯಾ ವ್ಯಾಪಾರನೌಕೆ ಯಾ ಪ್ರಯಾಣಿಕರ ಹಡಗು, ಮೊದಲಾದವುಗಳಲ್ಲಿನ ಅಧಿಕಾರಿ (ಮುಖ್ಯವಾಗಿ ಸನ್ನದು ಪಡೆದಿರುವ ನೌಕಾಸೈನ್ಯಾಧಿಕಾರಿ, ಭೂಸೈನ್ಯಾಧಿಕಾರಿ).
  • ಪೊಲೀಸ್‍ ಪೇದೆ; ಕಾನ್‍ಸ್ಟೇಬಲ್‍ ಯಾ ಮಹಿಳಾ ಕಾನ್‍ಸ್ಟೇಬಲ್‍.
  • (ಒಂದು ಸಂಘದ) ಅಧಿಕಾರಿ; ಮುಖ್ಯವಾಗಿ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ, ಮೊದಲಾದವರು.
  • (ಸಾಮಾನ್ಯವಾಗಿ ವಿಶೇಷಣಗಳೊಡನೆ ಪ್ರಯೋಗ)
    1. (ಸಾರ್ವಜನಿಕ ಸಿವಿಲ್‍, ಯಾ ಧಾರ್ಮಿಕ ಸಂಸ್ಥೆಯ) ಅಧಿಕಾರಿ; ಹುದ್ದೇದಾರ: medical officer ವೈದ್ಯಾಧಿಕಾರಿ.
    2. ದೊರೆಯ ಸೇವಕ ಯಾ ಸಚಿವ: officer of the Household (ಇಂಗ್ಲೆಂಡಿನಲ್ಲಿ) ಅರಮನೆಯ ಅಧಿಕಾರಿ, ಬಕ್ಷಿ.
    3. ನಿಯಮಿತ ಯಾ ಚುನಾಯಿತ ಅಧಿಕಾರಿ: returning officer ಚುನಾವಣಾಧಿಕಾರಿ.
  • ಬೇಲಿಹ್‍; ಅಮೀನ; ದಂಡಾಧಿಕಾರಿ.
  • ಆಹಿಸರ್‍; ಆರ್ಡರ್‍ ಆಹ್‍ ದಿ ಬ್ರಿಟಿಷ್‍ ಎಂಪೈರ್‍ ಪ್ರಶಸ್ತಿಯ ನಾಲ್ಕನೆಯ ವರ್ಗಕ್ಕೆ ಸೇರಿದ ಸದಸ್ಯ.


  • logo