logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lap-strake
ನಾಮವಾಚಕ
ಹಲಗೆ ದೋಣಿ, ಹಲಗೆಗಳನ್ನು ಜೋಡಿಸಿ ಮಾಡಿದ ದೋಣಿ.

laparoscope
ನಾಮವಾಚಕ
(ಶಸ್ತ್ರವೈದ್ಯ) ಉದರದರ್ಶಕ; ಲ್ಯಾಪರಸ್ಕೋಪ್‍; ಕಿಬ್ಬೊಟ್ಟೆಯ ಅಂಗಗಳನ್ನು ನೋಡಿ ಪರಿಶೀಲಿಸಲು ಕಿಬ್ಬೊಟ್ಟೆಯ ಹೊರಪದರದೊಳಕ್ಕೆ ತೂರಿಸುವ ದರ್ಶಕ ತಂತು, ತಂತಿ.

laparoscopy
ನಾಮವಾಚಕ
(ಶಸ್ತ್ರವೈದ್ಯ) ಉದರದರ್ಶನ; ಕಿಬ್ಬೊಟ್ಟೆಯ ಭಿತ್ತಿಯ ಮೂಲಕ ಯಾ ಯೋನಿಯ ಮೂಲಕ ಉದರದರ್ಶಕವನ್ನು ತೂರಿಸಿ ಉದರಕುಹರದ ಒಳಭಾಗವನ್ನು ಕಣ್ಣಾರ ನೋಡಿ ಪರೀಕ್ಷಿಸುವುದು.

laparotomy
ನಾಮವಾಚಕ
ಕಿಬ್ಬೊಟ್ಟೆಯ (ಕೋಶ ಚರ್ಮಗಳ) ಶಸ್ತ್ರಚಿಕಿತ್ಸೆ, ಕೊಯ್ತ; ರೋಗ ನಿಧಾನಕ್ಕಾಗಿ ಉದರಕುಹರವನ್ನು ಕೊಯ್ಯುವುದು.

lapel
ನಾಮವಾಚಕ
ಲೇಪಲು; ಹಿಮ್ಮಡಿಚಿದ ಕೋಟಿನ ಎದೆಯ ಭಾಗ; ಆಚೆ ಈಚೆ ಮಡಿಸಿದ ಕೋಟಿನ ಎದೆಯ ಭಾಗ.

lapelled
ಗುಣವಾಚಕ
  • (ಅಂಗಿಯ ವಿಷಯದಲ್ಲಿ) ಎದೆಯ ಭಾಗ ಹಿಮ್ಮಡಿಚಿದ.
  • ಎದೆಯ ಭಾಗ ಹಿಮ್ಮಡಿಚಿದ ಅಂಗಿತೊಟ್ಟ.

  • lapful
    ನಾಮವಾಚಕ
    ಮಡಿಲು; ಮಡಿಲು ತುಂಬ; ಉಡಿ ಭರ್ತಿ.

    lapicide
    ನಾಮವಾಚಕ
  • ಕಲ್ಲುಕುಟಿಗ.
  • ಶಾಸನಶಿಲ್ಪಿ; ಕಲ್ಲಿನ ಮೇಲೆ ಶಾಸನ ಕೆತ್ತುವವನು.

  • lapidary
    ಗುಣವಾಚಕ
  • ಶಿಲಾಸಂಬಂಧಿ; ಕಲ್ಲುಗಳಿಗೆ ಸಂಬಂಧಿಸಿದ: lapidary bee ಕಲ್ಲುಜೇನು; ಕಲ್ಲಿನ ಗೋಡೆ ಮೊದಲಾದವುಗಳಲ್ಲಿ ಗೂಡು ಕಟ್ಟುವ ಜೇನುಹುಳು.
  • ಶಿಲಾಲಿಖಿತ; ಕಲ್ಲಿನ ಮೇಲೆ ಕೆತ್ತಿದ.
  • (ಬರೆಹದ ವಿಷಯದಲ್ಲಿ) ಶಾಸನಪ್ರಾಯ; ಶಾಸನಯೋಗ್ಯ; ಶಾಸನಗಳಲ್ಲಿ ಬರೆಯಲು ತಕ್ಕಂತೆ ಗಂಭೀರವೂ ಸಂಕ್ಷಿಪ್ತವೂ ಆದ.

  • lapidary
    ನಾಮವಾಚಕ
    ರತ್ನಕಾರ; ರತ್ನಶಿಲ್ಪಿ; ರತ್ನಗಳನ್ನು – ಕಡೆಯುವವನು, ಕೊರೆಯುವವನು, ಕೆತ್ತುವವನು, ಸಾಣೆ ಹಿಡಿಯುವವನು, ಅವಕ್ಕೆ ಮೆರಗು ಕೊಡುವವನು.


    logo