logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impart
ಸಕರ್ಮಕ ಕ್ರಿಯಾಪದ
  • (ಒಬ್ಬನಿಗೆ, ಒಂದರ) ಪಾಲು, ಭಾಗ – ಕೊಡು, ನೀಡು, ಹಂಚು.
  • (ಸುದ್ದಿ ಮೊದಲಾದವನ್ನು ಒಬ್ಬನಿಗೆ) ಮುಟ್ಟಿಸು; ತಲುಪಿಸು; ತಿಳಿಸು; ಹೇಳು; ಶ್ರುತಪಡಿಸು.

  • impartation
    ನಾಮವಾಚಕ
  • ನೀಡಿಕೆ; ಕೊಡುವುದು.
  • (ಸುದ್ದಿ ಮೊದಲಾದವನ್ನು) ತಲುಪಿಸುವಿಕೆ; ತಿಳಿಸುವಿಕೆ.

  • impartial
    ಗುಣವಾಚಕ
    ಪಕ್ಷಪಾತವಿಲ್ಲದ; ಪಕ್ಷಪಾತವಲ್ಲದ; ನಿಷ್ಪಕ್ಷಪಾತದ; ನಿಷ್ಪಾಕ್ಷಿಕ; ಸಮದರ್ಶಿತ್ವದ; ನ್ಯಾಯವಾದ; ಯಾವ ಕಡೆಗೂ ಒಲವಿಲ್ಲದ.

    impartiality
    ನಾಮವಾಚಕ
    ನಿಷ್ಪಕ್ಷಪಾತತೆ.

    impartially
    ಕ್ರಿಯಾವಿಶೇಷಣ
    ಪಕ್ಷಪಾತವಿಲ್ಲದೆ; ನಿಷ್ಪಕ್ಷಪಾತವಾಗಿ.

    impartible
    ಗುಣವಾಚಕ
    (ನ್ಯಾಯಶಾಸ್ತ್ರ) (ಆಸ್ತಿಯ ವಿಷಯದಲ್ಲಿ) ಅವಿಭಾಜ್ಯ; ಅಖಂಡ; ಒಡೆಯಲಾಗದ; ವಿಭಜಿಸಲಾಗದ; ಪಾಲು ಮಾಡಲಾಗದ; ಹಂಚಲಾಗದ.

    impartment
    ನಾಮವಾಚಕ
  • ನೀಡಿಕೆ; ಹಂಚುವಿಕೆ.
  • ನೀಡಿದುದು; ಹಂಚಿದುದು.
  • (ಸುದ್ದಿ ಮೊದಲಾದವನ್ನು) ತಲುಪಿಸುವಿಕೆ; ತಿಳಿಸುವಿಕೆ.

  • impassability
    ನಾಮವಾಚಕ
    ದುರ್ಗಮತೆ.

    impassable
    ಗುಣವಾಚಕ
  • ದುರ್ಗಮ; ದುಸ್ತರ; ದಾಟಲಾಗದ; ಹಾಯಲಾಗದ; ದುರತ್ಯಯ; ಹಾದು ಹೋಗಲಾಗದ (ರೂಪಕವಾಗಿ ಸಹ): impassable jungle ಹಾಯಲಾಗದ ಕಾಡು. impassable obstacle ದಾಟಲಾಗದ ಅಡಚಣೆ ಯಾ ಕಷ್ಟ.
  • (ನಾಣ್ಯ, ನೋಟು, ಮೊದಲಾದವುಗಳ ವಿಷಯದಲ್ಲಿ) ಚಲಾವಣೆ ಮಾಡಲಾಗದ; ದಾಟಿಸಲಾಗದ: impassable counterfeit notes ದಾಟಿಸಲಾಗದ ಖೋಟಾನೋಟುಗಳು.

  • impassableness
    ನಾಮವಾಚಕ
    = impassability.


    logo