logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

eject
ನಾಮವಾಚಕ
ಊಹನ; ಅನುಮಾನ; ಊಹಿತ ವಿಷಯ; ಪ್ರತ್ಯಕ್ಷವಾದದ್ದಾಗಲಿ, ನಮ್ಮ ಅರಿವಿಗೆ ಗೋಚರವಾಗತಕ್ಕ ವಿಷಯವಾಗಲಿ ಅಲ್ಲದ ಕಲ್ಪನೆ.

ejecta
ನಾಮವಾಚಕ
(ಅಗ್ನಿಪರ್ವತದ ಲಾವಾ ಮೊದಲಾದ) ವಿಸರ್ಜಿತ ವಸ್ತು; ವಿಕ್ಷಿಪ್ತ ಪದಾರ್ಥ; ಹೊರಚೆಲ್ಲಿದ ವಸ್ತು.

ejection
ನಾಮವಾಚಕ
  • ಉಚ್ಚಾಟನೆ; ಹೊರಕ್ಕೆ ಅಟ್ಟಿಬಿಡುವುದು.
  • ಎಸೆತ; ವಿಸರ್ಜನೆ; ನಿಷ್ಕಾಸನ.
  • = ejecta.

  • ejection capsule
    ನಾಮವಾಚಕ
    ನಿಷ್ಕಾಸ ಸಂಪುಟ; ನಿಷ್ಕಾಸ ಕೋಶ; ಜರೂರು ಪರಿಸ್ಥಿತಿಯಲ್ಲಿ ವಿಮಾನದಿಂದ ಹೊರದೂಡಬಹುದಾದ ಪ್ಯಾರಷೂಟ್‍ ಸಜ್ಜಿತ ಚಾಲಕ ಕೋಶ.

    ejection seat
    ನಾಮವಾಚಕ
    ನಿಷ್ಕಾಸ ಪೀಠ; ತುರ್ತು ಪರಿಸ್ಥಿತಿಯಲ್ಲಿ ಚಾಲಕನ ಸಹಿತ ಹೊರದೂಡಬಹುದಾದ ಆಸನ.

    ejective
    ಗುಣವಾಚಕ
  • ಊಹಿತಕ್ಕೆ ಸಂಬಂಧಿಸಿದ; ಕಾಲ್ಪನಿಕ; ಅನುಮಾನಿತ.
  • ಹೊರಕ್ಕೆ ಹಾಕುವ; ನಿಷ್ಕಾಸಿಸುವ; ಹೊರಚೆಲ್ಲುವ; ಚಿಮ್ಮಿಸುವ.

  • ejective
    ನಾಮವಾಚಕ
    (ಭಾಷಾಶಾಸ್ತ್ರ) ಸ್ಫೋಟಕ ವ್ಯಂಜನ; ಮುಚ್ಚಿದ ಅಳಿಜಿಹ್ವೆಯ ಮೇಲೆ ಬಾಯೊಳಗೆ ಒತ್ತಿಹಿಡಿದ ಶ್ವಾಸದಿಂದ ಉಚ್ಚರಿಸಿದ ವ್ಯಂಜನ.

    ejectively
    ಕ್ರಿಯಾವಿಶೇಷಣ
    ಹೊರಹೊಮ್ಮುವಂತೆ; ತಳ್ಳುವಂತೆ; ದಬ್ಬುವ ಹಾಗೆ; ಹೊರಚೆಲ್ಲುವ ರೀತಿಯಲ್ಲಿ.

    ejectment
    ನಾಮವಾಚಕ
  • ಹೊರದೂಡುವುದು.
  • ಹೊರಚೆಲ್ಲುವುದು; ವಿಸರ್ಜನೆ.
  • (ನ್ಯಾಯಶಾಸ್ತ್ರ) (ಆಸ್ತಿ ಮೊದಲಾದವುಗಳಿಂದ) ಆಚೆಗೆ ಹಾಕುವುದು; ಹೊರಹೊರಡಿಸುವುದು; ಉಚ್ಚಾಟನೆ.

  • ejector
    ನಾಮವಾಚಕ
    ಉಚ್ಚಾಟಕ:
  • (ಆಸ್ತಿ ಮೊದಲಾದವುಗಳಿಂದ) ಆಚೆಗೆ ಓಡಿಸುವವನು; ಉಚ್ಚಾಟನೆ ನಡೆಸುವವನು.
  • (ಯಾವುದನ್ನೇ) ಹೊರಕ್ಕೆ ದೂಡುವ ಸಾಧನ, ಸಲಕರಣೆ, ಯಂತ್ರದ ಭಾಗ: ejector in a firearm ಗುಂಡು ಹಾರಿಸಿದ ನಂತರ ಬರಿದಾದ ಕೋಶವನ್ನು ಹೊರಕ್ಕೆ ಚೆಲ್ಲುವ ಸಾಧನ.


  • logo