logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

camphoric acid
ನಾಮವಾಚಕ
(ರಸಾಯನವಿಜ್ಞಾನ) ಕರ್ಪೂರಿಕಾಮ್ಲ; ಕರ್ಪೂರದ ಉತ್ಕರ್ಷಣದಿಂದ ಉಂಟಾಗುವ ಬಿಳಿಯ ಸ್ಫಟಿಕ ಆಮ್ಲ: ${\rm C}_5{\rm H}_5({\rm CH}_3)_3({\rm COOH})_2$.

campion
ನಾಮವಾಚಕ
(ಸಸ್ಯವಿಜ್ಞಾನ) ಕ್ಯಾಂಪಿಯನ್‍; ಒರಟಾಗಿ ಕಚ್ಚುಕಚ್ಚಾಗಿರುವ ಹೂವುಗಳನ್ನು ಬಿಡುವ, ಸೈಲೀಸ್‍, ಮೆಲಂಡ್ರಿಯಮ್‍ ಯಾ ಲಿಕ್ನಿಸ್‍ ಕುಲಕ್ಕೆ ಸೇರಿದ ಗಿಡ.

campo santo
ನಾಮವಾಚಕ
(ಇಟಲಿಯಲ್ಲಿ) ಸ್ಮಶಾನ; ರುದ್ರಭೂಮಿ.

campshed
ಸಕರ್ಮಕ ಕ್ರಿಯಾಪದ
(ಬ್ರಿಟಿಷ್‍ ಪ್ರಯೋಗ) ಒಡ್ಡುಹಾಕು; ದಸಿ ನೆಡು; ಹಲಗೆ ಕಟ್ಟು; ನದಿಯ ನೀರಿನ ಹೊಡೆತದಿಂದ ಉಂಟಾಗುವ ಸವೆತವನ್ನು ತಡೆಯಲು, ನದಿಯ ದಡದುದ್ದಕ್ಕೂ ದಸಿಗಳನ್ನು ಯಾ ಹಲಗೆಗಳನ್ನು ಸಾಲಾಗಿ ನೆಡು, ಹೂಳು.

campshedding
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) (ನದಿಯ ನೀರಿನ ಹೊಡೆತದಿಂದುಂಟಾಗುವ ಸವೆತವನ್ನು ತಡೆಯಲು ದಡದುದ್ದಕ್ಕೂ ನೆಡುವ) ದಸಿಸಾಲು; ದಸಿ ಒಡ್ಡು; ಹಲಗೆಸಾಲು; ಹಲಗೆ ಒಡ್ಡು.

campsheeting
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) =campshedding.

campshot
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) =campshedding.

campsite
ನಾಮವಾಚಕ
ಶಿಬಿರದಾಣ; ಬೀಡುದಾಣ; ಶಿಬಿರ ನಡೆಯುವ ಯಾ ಹೂಡುವ ಜಾಗ.

campus
ನಾಮವಾಚಕ
  • ವಿಶ್ವವಿದ್ಯಾನಿಲಯದ ಯಾ ಕಾಲೇಜಿನ–ಕ್ಷೇತ್ರ, ಆವರಣ.
  • (ವಿಶ್ವವಿದ್ಯಾನಿಲಯ, ಕಾಲೇಜು ಮೊದಲಾದ) ವಿದ್ಯಾಸಂಸ್ಥೆ.

  • campy
    ಗುಣವಾಚಕ
    =3camp.


    logo