logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

accrue
ಅಕರ್ಮಕ ಕ್ರಿಯಾಪದ
  • (ಸ್ವಾಭಾವಿಕವಾಗಿ ಯಾ ಅನುಕೂಲ ಪರಿಸ್ಥಿತಿಯಿಂದ) ಕೂಡಿಬರು; ಒದಗಿ ಬರು: many advantages accrue to you on account of your status ನಿನ್ನ ಅಂತಸ್ತಿನಿಂದ ನಿನಗೆ ಅನೇಕ ಅನುಕೂಲಗಳು ಒದಗಿಬರುತ್ತವೆ.
  • (ಮುಖ್ಯವಾಗಿ ಠೇವಣಿ ಇಟ್ಟ ಹಣದ ಮೇಲೆ ಸೇರಿಕೊಳ್ಳುವ ಬಡ್ಡಿಯ ವಿಷಯದಲ್ಲಿ) ಸೇರು; ಕೂಡು; ಸೇರಿಕೊ; ಕೂಡಿಕೊ: interest accrues on this sum ಈ ಹಣದ ಮೇಲೆ ಬಡ್ಡಿಯು ಕೂಡಿಕೊಳ್ಳುತ್ತದೆ.

  • accrued
    ಗುಣವಾಚಕ
  • ಕೂಡಿಬಂದ; ಒದಗಿ ಬಂದ.
  • ಕೂಡಿಕೊಂಡ; ಸಂಚಿತ.

  • accruement
    ನಾಮವಾಚಕ
    = accrual.

    acculturate
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಸಂಸ್ಕೃತಿ ಗ್ರಹಣದ ಮೂಲಕ ವ್ಯತ್ಯಾಸಗೊಳಿಸು ಯಾ ವ್ಯತ್ಯಾಸಗೊಳ್ಳುವಂತೆ ಮಾಡು.ಸಂಸ್ಕೃತಿಗ್ರಹಣದ ಮೂಲಕ ವ್ಯತ್ಯಾಸವಾಗು, ಬದಲಾಯಿಸು.

    acculturation
    ನಾಮವಾಚಕ
    (ಸಮಾಜಶಾಸ್ತ್ರ) ಸಂಸ್ಕೃತಿ ಗ್ರಹಣ; ಪರಸ್ಪರ ಸಂಪರ್ಕದ ಮೂಲಕ ಅನ್ಯ ಸಂಸ್ಕೃತಿಯ ಅಂಶಗಳನ್ನು ಸ್ವೀಕರಿಸುವುದು ಯಾ ಮೈಗೂಡಿಸಿಕೊಳ್ಳುವುದು.

    acculturative
    ಗುಣವಾಚಕ
    (ಸಮಾಜಶಾಸ್ತ್ರ) ಸಂಸ್ಕೃತಿಗ್ರಹಣದ, ಅದಕ್ಕೆ ಸೇರಿದ ಯಾ ಅದನ್ನು ಉಂಟುಮಾಡುವ.

    accumulate
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಒಟ್ಟಿಲಾಗು; ರಾಶಿಯಾಗು; ಶೇಖರವಾಗು; ಹೆಚ್ಚಾಗುತ್ತಾ ಯಾ ಬೆಳೆಯುತ್ತಾ ಹೋಗು (ರೂಪಕವಾಗಿ ಸಹ): disasters had accumulated ಆಪತ್ತುಗಳು ಶೇಖರವಾದವು.
  • (ಐಶ್ವರ್ಯ, ದ್ವೇಷ, ಮೊದಲಾದವುಗಳ ವಿಷಯದಲ್ಲಿ, ರೂಪಕವಾಗಿ ಸಹ) ಕೂಡಹಾಕು; ಒಟ್ಟುಗೂಡಿಸು; ಶೇಖರಿಸು; ಸಂಗ್ರಹಿಸು.
  • ಶೇಖರಿಸಿ–ಪಡೆ, ಗಳಿಸು.
  • (ಬ್ರಿಟಿಷ್‍ ವಿಶ್ವವಿದ್ಯಾನಿಲಯಗಳಲ್ಲಿ ಮೇಲಿನ ಪದವಿಯನ್ನು) ಕೆಳಗಿನ ಪದವಿಯೊಡನೆಯೇ ಯಾ ಕಾಲಾವಧಿಗೆ ಮುಂಚೆಯೇ ಪಡೆ.

  • accumulate
    ಗುಣವಾಚಕ
    = accumulated.

    accumulated
    ಗುಣವಾಚಕ
    ರಾಶಿಗೂಡಿದ; ಶೇಖರವಾದ; ಸಂಚಿತ; ಸಂಚಯಿಸಿದ.

    accumulation
    ನಾಮವಾಚಕ
  • (ಐಶ್ವರ್ಯ, ಹಣ, ಮೊದಲಾದವುಗಳ ವಿಷಯದಲ್ಲಿ ರೂಪಕವಾಗಿ ಸಹ) ಒಟ್ಟಿಲು; ಒಡ್ಡು; ಸಂಚಯ; ಶೇಖರಣೆ; ಸಂಗ್ರಹಣೆ; ಕೂಡಹಾಕುವಿಕೆ; ರಾಶಿಗೂಡುವಿಕೆ.
  • (ಬಡ್ಡಿ ಸೇರುವುದರಿಂದ ಆದ) ಬಂಡವಾಳ ಕೂಡಿಕೆ, ಶೇಖರಣೆ.
  • (ಇಂಗ್ಲಿಷ್‍ ವಿಶ್ವವಿದ್ಯಾನಿಲಯದ ಬೇರೆ ಬೇರೆ ಪದವೀಸ್ವೀಕಾರ, ಚರ್ಚಿನ ಬೇರೆ ಬೇರೆ ಸೇವಾಕಾರ್ಯಗಳು, ಮೊದಲಾದವುಗಳ ವಿಷಯದಲ್ಲಿ) ವಿಭಿನ್ನ ಕ್ರಿಯೆಗಳನ್ನು ಒಟ್ಟಿಗೆ ಮಾಡುವುದು.
  • (ಕ್ರಮೇಣ ಶೇಖರವಾದ ಕಾಗದ, ಹಿಮ, ಆಸ್ತಿ, ಮೊದಲಾದವುಗಳ) ಒಟ್ಟಿಲು; ಒಡ್ಡು; ಸಂಚಯ.


  • logo