logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

byway
ನಾಮವಾಚಕ
  • ವಿಜನಮಾರ್ಗ; ವಿಜನವಾದ ಉಪಮಾರ್ಗ; ವಿಶೇಷವಾಗಿ ಓಡಾಟವಿಲ್ಲದ ದಾರಿ: highway and byway ರಾಜಮಾರ್ಗ ಮತ್ತು ಉಪಮಾರ್ಗ.
  • (ಹತ್ತಿರದ) ಅಡ್ಡ, ಸೀಳು – ದಾರಿ.
  • ಗೌಣಮುಖ; ಅಪ್ರಧಾನಭಾಗ; ಅಮುಖ್ಯಾಂಶ; ವ್ಯಾಸಂಗವಿಷಯದ ಅಪ್ರಧಾನ ಯಾ ಸುಪರಿಚಿತವಲ್ಲದ ಭಾಗ: highways and byways of history ಇತಿಹಾಸದ ಸುಪರಿಚಿತವಾದ ಹಾಗೂ ಸುಪರಿಚಿತವಲ್ಲದ ಭಾಗಗಳು.

  • bywoner
    ನಾಮವಾಚಕ
    (ದಕ್ಷಿಣ ಆಹ್ರಿಕ) ಗೇಣಿ, ಗುತ್ತಿಗೆ – ರೈತ; ಗುತ್ತಿಗೆ ಕೊಟ್ಟು ಇನ್ನೊಬ್ಬರ ಜಮೀನನ್ನು ಆರಂಬಮಾಡುವ ರೈತ.

    byword
    ನಾಮವಾಚಕ
  • (ಗತಪ್ರಯೋಗ) ಗಾದೆ (ಮಾತು).
  • (ಸಾಮಾನ್ಯವಾಗಿ ಯಾವುದೇ ಅವಲಕ್ಷಣಕ್ಕೆ ಹೆಸರಾಗಿರುವ ವ್ಯಕ್ತಿ ಯಾ ಸ್ಥಳದ ವಿಷಯದಲ್ಲಿ) ಇನ್ನೊಂದು ಹೆಸರು; ನಾಮಾಂತರ; ಪರ್ಯಾಯಶಬ್ದ; ಸಾಮತಿ; ಗಾದೆಮಾತು; ನಾಣ್ಣುಡಿ: she became the byword of the village ಅವಳು ಆ ಇಡೀ ಹಳ್ಳಿಗೇ ಗಾದೆಯಾಗಿಬಿಟ್ಟಳು. the place was a byword for iniquity ಆ ಸ್ಥಳವು ಅನೀತಿಗೆ ಇನ್ನೊಂದು ಹೆಸರಾಗಿಹೋಗಿತ್ತು.

  • Byzantine
    ಗುಣವಾಚಕ
  • ಬೈಸ್ಯಾಂಟೈನ್‍; ಯೂರೋಪಿನ ಬೈಸ್ಯಾಂಟಿಯಂ ಯಾ ಪೂರ್ವರೋಮನ್‍ ಸಾಮ್ರಾಜ್ಯದ.
  • (ವಾಸ್ತುಶಿಲ್ಪ) ಬೈಸ್ಯಾಂಟೈನ್‍ ಶೈಲಿಯ; ದುಂಡು ಕಮಾನು, ಶಿಲುಬೆ, ಗುಮ್ಮಟ, ವೃತ್ತ, ಮೊಸೇಯಿಕ್‍ ಚಿತ್ರಣ, ಮೊದಲಾದವುಗಳಿರುವ.
  • ಹೆಣೆದುಕೊಂಡ; ಜಟಿಲ; ಗಹನ; ಸಂಕೀರ್ಣವಾದ.
  • ಬಗ್ಗದ; ಸಗ್ಗದ; ಹಟದ; ಮೊಂಡುತನದ; ಪಟ್ಟುಬಿಡದ.
  • ಮೋಸದ; ವಂಚನೆಯ.

  • Byzantine
    ನಾಮವಾಚಕ
    ಬೈಸ್ಯಾಂಟೈನ್‍; ಬೈಸ್ಯಾಂಟಿಯಂ ನಗರದವನು.

    Byzantinesque
    ಗುಣವಾಚಕ
    ಬೈಸ್ಯಾಂಟೈನ್‍ ಶೈಲಿಯ ಯಾ ಶೈಲಿಯನ್ನು ಹೋಲುವ.

    Byzantinism
    ನಾಮವಾಚಕ
    ಬೈಸ್ಯಾಂಟೈನ್‍ – ಪದ್ಧತಿ, ಶೈಲಿ; ಬೈಸ್ಯಾಂಟೈನ್‍ ಸಾಮ್ರಾಜ್ಯದಲ್ಲಿ ಬೆಳೆಸಿದ ವಾಸ್ತುಶಿಲ್ಪ ಮೊದಲಾದವುಗಳ ಶೈಲಿ ಯಾ ವಿಧಾನಗಳು.

    Byzantinist
    ನಾಮವಾಚಕ
    ಬೈಸ್ಯಾಂಟೈನ್‍ ತಜ್ಞ; ಬೈಸಾಂಟೈನ್‍ (ಶಿಲ್ಪದ) ವಿಷಯಗಳನ್ನು – ಅಧ್ಯಯನ ಮಾಡುವವನು ಯಾ ಚೆನ್ನಾಗಿ ಬಲ್ಲವನು.

    Byzantinize
    ಸಕರ್ಮಕ ಕ್ರಿಯಾಪದ
    ಬೈಸ್ಯಾಂಟೈನ್‍ – ಶೈಲಿಯಲ್ಲಿ ರಚಿಸು, ರೂಪಕೊಡು.


    logo