logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unconcerned
ಗುಣವಾಚಕ
  • ನಿಶ್ಚಿಂತ; ನಿರಾತಂಕವಾದ; ಕಳವಳವಿಲ್ಲದ; ಚಿಂತೆ ಹಚ್ಚಿಕೊಳ್ಳದ.
  • ಉದಾಸೀನ; ನಿರಾಸಕ್ತ; ಅಸಡ್ಡೆಯ.

  • unconcernedly
    ಕ್ರಿಯಾವಿಶೇಷಣ
  • ನಿರಾತಂಕವಾಗಿ; ಕಳವಳವಿಲ್ಲದೆ; ಚಿಂತೆ ಹಚ್ಚಿಕೊಳ್ಳದೆ.
  • ಸಂಬಂಧವಿಲ್ಲದಂತೆ; ಉದಾಸೀನವಾಗಿ; ಅಸಡ್ಡೆಯಿಂದ; ಉಪೇಕ್ಷೆಯಿಂದ; ನಿರಾಸಕ್ತಿಯಿಂದ.

  • unconcluded
    ಗುಣವಾಚಕ
  • ಅಸಮಾಪ್ತ; ಮುಗಿಸದ; ಕೊನೆಗಾಣದ.
  • ಅಪೂರ್ಣವಾದ; ಅಸಂಪೂರ್ಣ.
  • ಅನಿರ್ಣೀತ; ತೀರ್ಮಾನಿಸದ.

  • unconditional
    ಗುಣವಾಚಕ
    ಯಾವ ಷರತ್ತೂ ಇಲ್ಲದ; ಬೇಷರತ್ತಾದ; ನಿರುಪಾಧಿಕವಾದ: unconditional surrender ಬೇಷರತ್ತಾದ ಶರಣಾಗತಿ ಯಾ ಸೋಲೊಪ್ಪಿಗೆ.

    unconditionality
    ನಾಮವಾಚಕ
    ಬೇಷರತ್ತು; ಯಾವ ಷರತ್ತೂ ಇಲ್ಲದಿರುವಿಕೆ; ನಿರುಪಾಧಿಕ ಸ್ಥಿತಿ.

    unconditionally
    ಕ್ರಿಯಾವಿಶೇಷಣ
    ಬೇಷರತ್ತಾಗಿ; ಯಾವ ಷರತ್ತೂ ಇಲ್ಲದೆ; ನಿರುಪಾಧಿಕವಾಗಿ.

    unconditioned
    ಗುಣವಾಚಕ ಪದಗುಚ್ಛ
    unconditioned reflex (ಮನೋವಿಜ್ಞಾಣ) (ಒಂದು ಪ್ರಚೋದನೆಗೆ ಹುಟ್ಟುಗುಣದಿಂದ ಪ್ರತಿಕ್ರಿಯೆ ಯಾಗಿ ನಡೆಯುವ) ಸಹಜ ಪ್ರತಿವರ್ತನೆ; ಅನಿಯಂತ್ರಿತ ಪ್ರತಿಕ್ರಿಯೆ.
  • ನಿಯಮ, ಕಟ್ಟುಪಾಡುಗಳಿಗೆ – ಒಳಪಟ್ಟಿಲ್ಲದ; ನಿರುಪಾಧಿಕವಾದ; ಬೇಷರತ್ತಿನ; ಯಾವೊಂದು ಷರತ್ತಿಗೂ ಕಟ್ಟುಬೀಳದ.
  • (ವರ್ತನೆ ಮೊದಲಾದವುಗಳ ವಿಷಯದಲ್ಲಿ) ಸ್ವಾಭಾವಿಕ; ಸಹಜವಾದ; ಪೂರ್ವನಿಶ್ಚಿತವಲ್ಲದ; ಹಿಂದಿನ ಅನುಭವಗಳಿಂದ, ಅಭ್ಯಾಸಗಳಿಂದ – ನಿಯಂತ್ರಿತವಾಗಿರದ, ರೂಪಿತವಾಗಿರದ.

  • unconfined
    ಗುಣವಾಚಕ
  • ಹದ್ದಿನಲ್ಲಿಡದ; ಸೆರೆಹಾಕದ; ಬಂಧಿಸದ.
  • ಮಿತಿ ಕಲ್ಪಿಸದ; ಎಲ್ಲೆಯಿಲ್ಲದ.

  • unconfirmed
    ಗುಣವಾಚಕ
    (ಮುಖ್ಯವಾಗಿ ವದಂತಿಯ ವಿಷಯದಲ್ಲಿ) ದೃಢಪಟ್ಟಿಲ್ಲದ; ಸ್ಥಿರಪಡಿಸದ; ಪುಷ್ಟೀಕರಿಸಿಲ್ಲದ.

    unconformable
    ಗುಣವಾಚಕ
  • ಅನುರೂಪವಲ್ಲದ; ಅನುಗುಣವಲ್ಲದ.
  • ಅನುವರ್ತಿಸದ; ಒಪ್ಪದ; ತಕ್ಕುದಲ್ಲದ; ಹೊಂದಿಕೊಳ್ಳಲಾಗದ.
  • (ಭೂವಿಜ್ಞಾನ) (ಶಿಲಾಸ್ತರಗಳ ವಿಷಯದಲ್ಲಿ) ಏಕಾಭಿಮುಖವಾಗಿರದ; ವಿವಿಧಾಭಿಮುಖದ; ಸ್ತರಗಳೆಲ್ಲವೂ ಒಂದೇ ದಿಕ್ಕಿಗೆ ತಿರುಗಿರದ.
  • (ಚರಿತ್ರೆ) ಇಂಗ್ಲೆಂಡಿನಲ್ಲಿ ೧೬೮೨ರಲ್ಲಿ ಕಾನೂನಾಗಿದ್ದ ಧಾರ್ಮಿಕ ಆಚರಣೆಯ ಏಕತಾ ನಿಬಂಧನೆಗೆ ಅನುಸಾರ ವಾಗಿರದ.


  • logo