logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tart
ಗುಣವಾಚಕ
  • ಕಟುರುಚಿಯ; ಹುಳಿಯಾದ.
  • (ರೂಪಕವಾಗಿ) ಕಟುವಾದ; ತೀಕ್ಷ್ಣ; ಚುಚ್ಚುವಂಥ: a tart rejoinder ಕಟುವಾದ ಪ್ರತ್ಯುತ್ತರ. a tart remark ಚುಚ್ಚುವ ಟೀಕೆ.

  • tart
    ನಾಮವಾಚಕ
  • ಹಣ್ಣಿನ ಹೂರಣ ತುಂಬಿದ ಕಡುಬಿನಂಥ ತಿಂಡಿ: apple tart ಸೇಬಿನ ಕಡುಬಉ. cherry tart ಚೆರಿ ಹಣ್ಣಿನ ಕಡುಬಉ.
  • ಮೇಲೆ ಜಾಮ್‍ ಹಾಕಿದ, ಪಿಷ್ಟ ಭಕ್ಷ್ಯ.

  • tart
    ನಾಮವಾಚಕ
  • ಸೂಳೆ; ಹಾದರಗಿತ್ತಿ.
  • (ಅಶಿಷ್ಟ) ಹುಡುಗಿ ಯಾ ಹೆಂಗಸು.

  • tart
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
    ಸೂಳೆಯಂತೆ ಸಿಂಗರಿಸು; ಠೀಕಾಗಿ ಸಿಂಗರಿಸಿಕೊ. ಅತಿ ಆಡಂಬರದಿಂದ ಅಲಂಕಾರ ಮಾಡಿಕೊ; ಕಣ್ಣು ರಾಚುವಂತೆ ನೀಟಾಗಿ ಕಾಣು. tart up ಸೂಳೆಯ ಹಾಗೆ ಅಲಂಕಾರ ಮಾಡಿಕೊ, ಸಿಂಗರಿಸಿಕೊ.

    tartan
    ನಾಮವಾಚಕ
  • (ಮುಖ್ಯವಾಗಿ ಸ್ಕಾಟ್ಲೆಂಡಿನ ಹೈಲ್ಯಾಂಡ್‍ ಜನರು ಬಳಸುವಂಥ) ಪಪ್ಪಳಿಯ ಚೌಕುಳಿ ಬಟ್ಟೆ. Figure: tarten_1
  • (ಸ್ಕಾಟ್ಲೆಂಡಿನಲ್ಲಿ ಒಂದು ವಿಶಿಷ್ಟ ಬಣದ ಜನರ, ಗೊತ್ತಾದ) ಚೌಕುಳಿ ಯಾ ಪಪ್ಪಳಿ ನಮೂನೆಯಲ್ಲಿ ನೆಯ್ದ ಉಣ್ಣೆಬಟ್ಟೆ.

  • tartan
    ಗುಣವಾಚಕ
  • (ಹೈಲ್ಯಾಂಡ್‍ ಜನರ) ಪಪ್ಪಳಿ ಬಟ್ಟೆಯ.
  • ಚೌಕುಳಿಯಾದ; ಮನೆಮನೆಯಾದ ಬಟ್ಟೆಯಂಥ.

  • tartan
    ನಾಮವಾಚಕ
    (ಮೆಡಿಟರೇನಿಯನ್‍ ಸಮುದ್ರ ಪ್ರದೇಶದ) ಒಂದು ಬಗೆಯ ಒಕ್ಕೂವೆಯ ಹಡಗು.

    tartar
    ನಾಮವಾಚಕ
  • ಮದ್ಯದ ಒಂಡು, ಹೆಪ್ಪು; ಪೂರ್ತಿ ಕಿಣ್ವಗಟ್ಟಿದ ಮದ್ಯದಿಂದ, ಪೀಪಾಯಿ ಒಳಪಕ್ಕದಲ್ಲಿ ಕಟ್ಟಿದ ಕೆಂಪು, ಗಡಸು ಹೆಪ್ಪು.
  • ಹಲ್ಲು–ಹೆಪ್ಪು, ಪಾಚಿ, ಪೊರೆ; ಹಲ್ಲಿನ ಮೇಲೆ ಜೊಲ್ಲು, ಕ್ಯಾಲ್ಸಿಯಂ ಹಾಸ್ಫೇಟು, ಮೊದಲಾದವುಗಳಿಂದ ಕಟ್ಟಿದ ಹೆಪ್ಪು, ಪಾಚಿ.

  • Tartar
    ನಾಮವಾಚಕ ಪದಗುಚ್ಛ
  • ಟಾರ್ಟರ್‍ ದೇಶದವನು; ಟರ್ಕರು, ಮಂಗೋಲರು, ಮೊದಲಾದವರನ್ನೊಳಗೊಂಡ, ಮಧ್ಯ ಏಷ್ಯಾದ ಟಾರ್ಟರ್‍ ಜನಾಂಗದವನು.
  • ಟಾರ್ಟರ್‍ ಜನರ ತುರ್ಕಿ ಭಾಷೆ.
  • (tartar) ಒಡ್ಡ; ಒರಟ; ಮೊಂಡ; ಕಾಡುಮನುಷ್ಯ; ರೂಕ್ಷ ಮನುಷ್ಯ.

  • Tartar
    ಗುಣವಾಚಕ
  • ಟಾರ್ಟರ್‍ ದೇಶದ.
  • (ತುರ್ಕರು, ಕಾಸಕರು, ಮೊದಲಾದವರನ್ನೊಳಗೊಂಡ) ಟಾರ್ಟರ್‍ ಜನಾಂಗದ.


  • logo