ಕೊಡು; ನೀಡು; ಕೈ ನೀಡಿ ಕೊಡು ಯಾ ಮಾತಿನ ಮೂಲಕ ವ್ಯಕ್ತಪಡಿಸು: he offered me his book ಅವನು ನನಗೆ ತನ್ನ ಪುಸ್ತಕ ಕೊಟ್ಟ. he offers no apology ಅವನು ಪಶ್ಚಾತ್ತಾಪ ವ್ಯಕ್ತಪಡಿಸುವುದಿಲ್ಲ.
ಒದಗಿಸು; ದೊರಕಿಸು ಕೊಡು; ಅವಕಾಶ ಸಿಗುವಂತೆ ಮಾಡು.
ಮಾರಾಟಕ್ಕಿಡು: offers the house for sale ಮನೆಯನ್ನು ಮಾರಾಟಕ್ಕಿಡುತ್ತಾನೆ.
(ವಸ್ತುವಿನ ವಿಷಯದಲ್ಲಿ) ಮುಂದಿಡು; ಎದುರಿಗಿಡು; ದೃಷ್ಟಿಗೆ, ಗಮನಕ್ಕೆ–ತರು: each age offers its characteristic riddles ಪ್ರತಿ ಯುಗವೂ ಅದರದರ ವಿಶಿಷ್ಟ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ. each day offers new opportunities ಪ್ರತಿದಿನವೂ ಹೊಸ ಅವಕಾಶಗಳನ್ನು ಮುಂದಿಡುತ್ತದೆ.
(ಬಲಿ, ಮೊದಲ ಫಲ, ಪ್ರಾರ್ಥನೆ, ಮೊದಲಾದವನ್ನು, ದೇವತೆ, ಪೂಜ್ಯ ವ್ಯಕ್ತಿ, ಮೊದಲಾದವರಿಗೆ) ಒಪ್ಪಿಸು; ಅರ್ಪಿಸು; ನಿವೇದಿಸು; ಭಕ್ತಿಯಿಂದ ಕೊಡು; ಪೂಜೆಯಾಗಿ ಸಮರ್ಪಿಸು; ಆಹುತಿಯಾಗಿ ಕೊಡು.
ಕಾಳಗ, ಯುದ್ಧ–ಹೂಡು; ಯುದ್ಧ ಮಾಡಲು ಶತ್ರುವಿಗೆ ಅವಕಾಶ ನೀಡು: Darius offered battle to the enemy ಡೇರಿಯಸ್ ಶತ್ರುವಿನ ಮೇಲೆ ಕಾಳಗ ಹೂಡಿದ.
(ಬಲ ಪ್ರಯೋಗ, ಪ್ರತಿಭಟನೆ, ಮೊದಲಾದವನ್ನು) ತೋರು; ತೋರಲು ಯತ್ನಿಸು: the enemy offered serious resistance ಶತ್ರು ಪ್ರಬಲವಾದ ಪ್ರತಿಭಟನೆ ತೋರಿಸಿದ.
offer
ನಾಮವಾಚಕ
ಪದಗುಚ್ಛ
on offer (ಒಂದು ಗೊತ್ತುಪಡಿಸಿದ, ಮುಖ್ಯವಾಗಿ ಇಳಿಸಿದ, ಬೆಲೆಗೆ) ಮಾರಾಟಕ್ಕಿದೆ.
ವಾಗ್ದಾನ; ಮಾತು; ಅಪೇಕ್ಷೆಪಟ್ಟಲ್ಲಿ ಕೊಡಲು ಯಾ ಮಾಡಲು, ಯಾ ಒಪ್ಪಂದ ಮಾಡಿಕೊಂಡ ಯಾ ನಿಗದಿ ಪಡಿಸಿದ ಮೊತ್ತಕ್ಕೆ ಮಾರಲು ಯಾ ಕೊಳ್ಳಲು ಸಿದ್ಧನಿರುವೆನೆಂದು ಹೇಳುವುದು.
ಒಪ್ಪಿದ ಬೆಲೆ; ಕೊಡಲು ಒಪ್ಪಿ ಹೇಳಿದ ಬೆಲೆ.
(ಮುಖ್ಯವಾಗಿ ಮದುವೆಯ) ಪ್ರಸ್ತಾಪ.
(ಹರಾಜಿನಲ್ಲಿ) ಬಿಡ್ಡು; ಸವಾಲು; ಕೂಗಿದ ಬೆಲೆ.
ಪ್ರಯತ್ನ: made an offer to catch the ball ಚೆಂಡನ್ನು ಹಿಡಿಯುವ ಪ್ರಯತ್ನ ಮಾಡಿದ.
offerer
ನಾಮವಾಚಕ
ದಾಯಿ; ಕೊಡುವವ; ನೀಡುವವ: offerer of a bribe ಲಂಚ ನೀಡುವವ.
offering
ನಾಮವಾಚಕ
ದಾನ; ಕೊಡುಗೆ (ಮುಖ್ಯವಾಗಿ ಚರ್ಚಿಗೆ ಕೊಟ್ಟ ಹಣ).
ಅರ್ಪಣೆ; ಆಹುತಿ(ಯಾಗಿ, ಯಾ ಭಕ್ತಿಪೂರ್ವಕವಾಗಿ ಕೊಟ್ಟದ್ದು).
ಕೊಡುಗೆ; ಚಂದಾ; ಮುಖ್ಯವಾಗಿ ವಂತಿಗೆಯಾಗಿ ಕೊಟ್ಟ ಹಣ.
offeror
ನಾಮವಾಚಕ
= offerer (ಮುಖ್ಯವಾಗಿ ಷೇರುಗಳನ್ನು ಮಾರಾಟ ಮಾಡುವವನು).
offertory
ನಾಮವಾಚಕ
(ಚರ್ಚ್)
ದಾನ; ಅರ್ಪಣ; ಪ್ರಭುಭೋಜನ ಸಂಸ್ಕಾರ (ಯೂಕರಿಸ್ಟ್)ದಲ್ಲಿ ಬ್ರೆಡ್ಡು ಮತ್ತು ವೈನಿನ ಅರ್ಪಣೆ.
ಅರ್ಪಣ ಮಂತ್ರ ಯಾ ಸ್ತೋತ್ರ; ಪ್ರಭುಭೋಜನ ಸಂಸ್ಕಾರದ ವಿಧಿಯ ಕಾಲದಲ್ಲಿ ಜನರು ಕಾಣಿಕೆ ಒಪ್ಪಿಸುವಾಗ ಹೇಳುವ ಸ್ತೋತ್ರ, ಮಂತ್ರ.
ಒಪ್ಪಿಸಿದ ಕಾಣಿಕೆ; ಧಾರ್ಮಿಕ ವಿಧಿಯ ಕಾಲದಲ್ಲಿ ಎತ್ತಿದ ಹಣ, ಕಾಣಿಕೆ.
ಹೀಗೆ ಕಾಣಿಕೆ ಎತ್ತುವಿಕೆ, ಹಣದ ಸಂಗ್ರಹಣೆ.
offhand
ಗುಣವಾಚಕ
ಏಕಾಏಕಿ; ಹಠಾತ್ತಾದ; ಪೂರ್ವಸಿದ್ಧತೆಯಿಲ್ಲದ.
ಸಂಪ್ರದಾಯವನ್ನು ಅನುಸರಿಸದ; (ಸಮಾಜ) ಮರ್ಯಾದೆಯನ್ನು ಪಾಲಿಸದ.
offhand
ಕ್ರಿಯಾವಿಶೇಷಣ
ಏಕಾಏಕಿಯಾಗಿ; ಹಠಾತ್ತಾಗಿ; ಪೂರ್ವಯೋಜನೆ ಯಾ ಪೂರ್ವಸಿದ್ಧತೆ ಇಲ್ಲದೆ.
ಸಂಪ್ರದಾಯವನ್ನು ಅನುಸರಿಸದೆ; (ಸಮಾಜ) ಮರ್ಯಾದೆಯನ್ನು ಪಾಲಿಸದೆ.