logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

mam
ನಾಮವಾಚಕ
(ಆಡುಮಾತು) ತಾಯಿ.

mama
ನಾಮವಾಚಕ
= 1mamma.

mama
ನಾಮವಾಚಕ
= 2mamma.

mamba
ನಾಮವಾಚಕ
ಮಾಂಬ (ಹಾವು); ತುಂಬ ಉಗ್ರವಾದ, ಆಹ್ರಿಕದ ಒಂದು ವಿಷಸರ್ಪ ಯಾ ಸರ್ಪ ಜಾತಿ (ಮುಖ್ಯವಾಗಿ ಹಸಿರು ಯಾ ಕಪ್ಪು ಬಣ್ಣದ್ದು).

mambo
ನಾಮವಾಚಕ
ಮ್ಯಾಂಬೋ:
  • ‘ರಂಬ’ (rumba) ನೃತ್ಯವನ್ನು ಹೋಲುವ, ಲ್ಯಾಟಿನ್‍ ಅಮೆರಿಕದ ಒಂದು ನೃತ್ಯ.
  • ಈ ನೃತ್ಯದ ಸಂಗೀತ.

  • mambo
    ಅಕರ್ಮಕ ಕ್ರಿಯಾಪದ
    ‘ಮ್ಯಾಂಬೋ’ ನೃತ್ಯ ಮಾಡು.

    mamelon
    ನಾಮವಾಚಕ
    (ಮುಖ್ಯವಾಗಿ ಜ್ವಾಲಾಮುಖಿಯಿಂದ ಉಕ್ಕಿಹರಿದು ರಾಶಿಗಟ್ಟಿದ ಲಾವಾರಸದಿಂದ ಆದ) ಗೋಳಾಕಾರದ ದಿಣ್ಣೆ; ಲಾವಾ ಗುಡ್ಡ.

    Mameluke
    ನಾಮವಾಚಕ
    (ಚರಿತ್ರೆ)
  • 1254ರಲ್ಲಿ ಈಜಿಪ್ಟಿನ ಸಿಂಹಾಸನವನ್ನು ಆಕ್ರಮಿಸಿ ಕೊಂಡು 1811ರ ವರೆಗೆ ಆಳಿದ (ಮೊದಲು ಕಾಕಸಸ್‍ ಜನಾಂಗದ ಗುಲಾಮರಾಗಿದ್ದ) ಸೈನಿಕದಳದಲ್ಲಿ ಒಬ್ಬ.
  • (ಮುಸಲ್ಮಾನ್‍ ರಾಜ್ಯಗಳಲ್ಲಿ) ಗುಲಾಮ.

  • mamilla
    ನಾಮವಾಚಕ
  • (ಹೆಣ್ಣಿನ) ಮೊಲೆ(ಯ) ತೊಟ್ಟು; ಕುಚಾಗ್ರ; ಚೂಚುಕ.
  • ಚೂಚುಕದಂಥ, ಮೊಲೆಯ ತೊಟ್ಟಿನಂಥ – ಅವಯವ.

  • mamillary
    ಗುಣವಾಚಕ
    ಚೂಚುಕದ; ಮೊಲೆತೊಟ್ಟಿನ; ಚೂಚುಕಕ್ಕೆ ಸಂಬಂಧಿಸಿದ.


    logo