logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impalpable
ಗುಣವಾಚಕ
  • ಸ್ಪರ್ಶಾಗಮ್ಯ; ಸ್ಪರ್ಶಾತೀತ; ಸ್ಪರ್ಶಕ್ಕೆ ಸಿಗದ; ಮುಟ್ಟಿ ತಿಳಿಯಲಾಗದ.
  • ದುಜ್ಞೇಯ; ದುರ್ಗ್ರಾಹ್ಯ; ಮನಸ್ಸಿಗೆ ಸುಲಭವಾಗಿ ಎಟುಕದ.
  • (ಹಿಟ್ಟಿನ ವಿಷಯದಲ್ಲಿ) ಅತಿ ನುಣ್ಣನೆಯ; ತರಿತರಿಯಾಗಿಲ್ಲದಿರುವ.

  • impalpably
    ಕ್ರಿಯಾವಿಶೇಷಣ
  • ಸ್ಪರ್ಶಾಗಮ್ಯವಾಗಿ; ಸ್ಪರ್ಶಾತೀತವಾಗಿ; ಮುಟ್ಟಿ ತಿಳಿಯಲಾರದಂತೆ.
  • ದುಜ್ಞೇಯವಾಗಿ; ದುರ್ಗ್ರಾಹ್ಯವಾಗಿ; ಮನಸ್ಸಿಗೆ ಎಟುಕದಂತೆ.

  • impanate
    ಗುಣವಾಚಕ
    (ಕ್ರಿಸ್ತನ ದೇಹದ ವಿಷಯದಲ್ಲಿ) ಅಭಿಮಂತ್ರಿಸಿದ ರೊಟ್ಟಿಯಲ್ಲಿ (ಬ್ರೆಡ್ಡಿನಲ್ಲಿ) ಸೇರಿರುವ, ಮೈತಳೆದ, ಆವಿರ್ಭೂತವಾದ.

    impanation
    ನಾಮವಾಚಕ
    (ಕ್ರಿಸ್ತನ) ಆವಿರ್ಭಾವ; ಕ್ರಿಸ್ತನ ದೇಹವು ಅಭಿಮಂತ್ರಿಸಿದ ರೊಟ್ಟಿಯಲ್ಲಿ (ಬ್ರೆಡ್ಡಿನಲ್ಲಿ) ಸೇರಿಕೊಂಡಿರುವುದು, ಮೈತಳೆದಿರುವುದು.

    impanel
    ಸಕರ್ಮಕ ಕ್ರಿಯಾಪದ
    = empanel.

    imparadise
    ಸಕರ್ಮಕ ಕ್ರಿಯಾಪದ
  • ಸ್ವರ್ಗ ಸುಖಾನುಭವದ ಸ್ಥಿತಿಗೆ ತರು.
  • ಆನಂದಪರವಶಗೊಳಿಸು; ಪರಮಸುಖವನ್ನುಂಟುಮಾಡು.
  • (ಸ್ಥಳ, ಸ್ಥಿತಿ, ಮೊದಲಾದವನ್ನು) ಸ್ವರ್ಗೀಕರಿಸು; ಸ್ವರ್ಗಸದೃಶಮಾಡು.

  • imparisyllabic
    ಗುಣವಾಚಕ
    (ವ್ಯಾಕರಣ) (ಗ್ರೀಕ್‍, ಲ್ಯಾಟಿನ್‍ ವ್ಯಾಕರಣ) ಅಸಮಾನಾಕ್ಷರದ; ವಿವಿಧ ವಿಭಕ್ತಿ ರೂಪಗಳಲ್ಲಿ ಅಕ್ಷರಗಳ ಸಂಖ್ಯೆ ಒಂದೇ ಆಗಿರದ.

    imparisyllabic
    ನಾಮವಾಚಕ
    (ಗ್ರೀಕ್‍, ಲ್ಯಾಟಿನ್‍ ವ್ಯಾಕರಣ) ಅಸಮಾನಾಕ್ಷರ ನಾಮಪದ; ವಿವಿಧ ವಿಭಕ್ತಿ ರೂಪಗಳಲ್ಲಿ ಬೇರೆ ಬೇರೆ ಸಂಖ್ಯೆಯ ಅಕ್ಷರಗಳುಳ್ಳ ನಾಮಪದ, ಉದಾಹರಣೆಗೆ (ಲ್ಯಾಟಿನ್‍) lapis, lapidis.

    impark
    ಸಕರ್ಮಕ ಕ್ರಿಯಾಪದ
  • ಆವರಣೀಕರಿಸು; ಮೃಗಗಳನ್ನು ಅರಣ್ಯೋದ್ಯಾನದಲ್ಲಿ ಒಂದು ಆವರಣದೊಳಗೆ ಹಾಕು, ಸೇರಿಸು.
  • ಆವರಣ ಹಾಕು; ಉದ್ಯಾನಕ್ಕಾಗಿ (ಒಂದು ಜಈನಿಗೆ) ಆವರಣ ನಿರ್ಮಿಸು.

  • imparkation
    ನಾಮವಾಚಕ
  • ಆವರಣೀಕರಣ; ಮೃಗಗಳನ್ನು (ಅರಣ್ಯೋದ್ಯಾನದ) ಆವರಣದಲ್ಲಿ ಕೂಡಿ ಹಾಕುವುದು, ಸೇರಿಸುವುದು.
  • ಆವರಣ ರಚನೆ; ಪ್ರಾಕಾರ ರಚನೆ; ಉದ್ಯಾನಕ್ಕಾಗಿ ಒಂದು ಜಈನಿಗೆ ಆವರಣ ಹಾಕುವಿಕೆ.


  • logo