(ಎರಡರಲ್ಲಿ) ಯಾವುದಾದರೂ ಒಂದು; (ಇಬ್ಬರಲ್ಲಿ) ಯಾರಾದರೂ ಒಬ್ಬರು: either of you can go ನಿಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ಹೋಗಬಹುದು.
(ಎರಡರಲ್ಲಿ) ಒಂದೊಂದೂ; ಪ್ರತಿಯೊಂದೂ; (ಇಬ್ಬರಲ್ಲಿ) ಪ್ರತಿಯೊಬ್ಬರೂ: either of these events ಈ ಘಟನೆಗಳಲ್ಲಿ ಒಂದೊಂದೂ.
either
ಕ್ರಿಯಾವಿಶೇಷಣ
ಎರಡು ಊಹೆಗಳಲ್ಲಿ ಒಂದು ಆಗಿರುವಂತೆ; ಅಂತೆ ಅಥವಾ ಇಲ್ಲವಾದಲ್ಲಿ; (ನಿನಗೆ) ಹೇಗೆ ಬೇಕೋ ಹಾಗೆ; (ನಿನಗೆ) ಹಿಡಿಸಿದಂತೆ: he is either drunk or mad ಒಂದೋ ಅವನು ಕುಡಿದಿದ್ದಾನೆ, ಇಲ್ಲ ಅವನಿಗೆ ಹುಚ್ಚು. either come in or go out ಒಳಕ್ಕೆ ಬಾ, ಇಲ್ಲ ಹೊರಕ್ಕೆ ಹೋಗು.
(ನಿಷೇಧಾರ್ಥಕ ಯಾ ಪ್ರಶ್ನಾರ್ಥಕ ವಾಕ್ಯಗಳಲ್ಲಿ) ಸಹ; ಕೂಡ.
ಅದಲ್ಲದೆ; ಜೊತೆಗೆ.
either
ಸಂಯೋಜಕಾವ್ಯಯ
ಸಹ; ಕೂಡ: if you do not go, I shall not go either ನೀನು ಹೋಗದಿದ್ದರೆ ನಾನೂ ಹೋಗುವುದಿಲ್ಲ.
ಜೊತೆಗೆ; ಅದಲ್ಲದೆ; ಅಷ್ಟಲ್ಲದೆ; ಇನ್ನೂ; ಮೇಲಾಗಿ: there is no time to lose either ಅದಲ್ಲದೆ ಕಳೆಯಲು ಸಮಯವೂ ಇಲ್ಲ.
either-or
ನಾಮವಾಚಕ
ಎರಡಲ್ಲೊಂದು ವಿಕಲ್ಪವಾಗಿರುವುದು; ಇದು ಅಥವಾ ಅದು; ಇಲ್ಲ ಇದು, ಇಲ್ಲ ಅದು; ಎರಡರ ಮಧ್ಯೆ ಒಂದನ್ನು ಆರಿಸಿಕೊಳ್ಳಲೇಬೇಕಾದ ಆಯ್ಕೆ; ವಿಕಲ್ಪ.
ಉದ್ಗರಿಸು; ಉದ್ಗಾರ ತೆಗೆ; ಮುಖ್ಯವಾಗಿ ಪ್ರಾರ್ಥನೆ ಯಾ ಭಾವಾವೇಶದಲ್ಲಿ ಫಕ್ಕನೆ ನುಡಿ, ಹೇಳು.
ದೇಹದಿಂದ (ದ್ರವ ಮೊದಲಾದವನ್ನು, ಮುಖ್ಯವಾಗಿ ವೀರ್ಯವನ್ನು) ಚೆಲ್ಲು; ಹೊರಚೆಲ್ಲು; ಚಿಮ್ಮು; ಸ್ಖಲನಗೊಳಿಸು.
ejaculate
ನಾಮವಾಚಕ
ಸ್ಖಲನವಾದ ವೀರ್ಯ; ಚೆಲ್ಲಿದ ವೀರ್ಯ; ಸ್ಖಲಿತ ವೀರ್ಯ.
ejaculation
ನಾಮವಾಚಕ
ಉದ್ಗಾರ; ಫಕ್ಕನೆ ಹೇಳಿಬಿಡುವುದು.
(ದೇಹದಿಂದ ದ್ರವ ಮೊದಲಾದವುಗಳ, ಮುಖ್ಯವಾಗಿ ವೀರ್ಯದ) ಹೊರಚೆಲ್ಲುವಿಕೆ; ಚಿಮ್ಮುವಿಕೆ; ಸ್ಖಲನ.
ejaculatory
ಗುಣವಾಚಕ
ಉದ್ಗರಿಸುವ; ಫಕ್ಕನೆ ಹೇಳಿಬಿಡುವ.
(ದೇಹದಿಂದ ದ್ರವ ಮೊದಲಾದವನ್ನು, ಮುಖ್ಯವಾಗಿ ವೀರ್ಯವನ್ನು) ಹೊರಚೆಲ್ಲುವ; ಉಚ್ಚುವ; ಸ್ಖಲಿಸುವ.
eject
ಸಕರ್ಮಕ ಕ್ರಿಯಾಪದ
(ಸ್ಥಳ, ಅಧಿಕಾರ ಯಾ ಆಸ್ತಿಯಿಂದ ವ್ಯಕ್ತಿಯನ್ನು, ಂದೂಕಿನಿಂದ ಬಳಸಿದ ತೋಟಾವನ್ನು, ತುರ್ತುಪರಿಸ್ಥಿತಿಯಲ್ಲಿ ವಿಮಾನದಿಂದ ಯಾ ಆಕಾಶನೌಕೆಯಿಂದ ಚಾಲಕನನ್ನು) ಆಚೆಗೆ ಹಾಕು; ಹೊರದೂಡು; ಓಡಿಸಿಬಿಡು; ಅಟ್ಟು; ತಳ್ಳು; ದಬ್ಬು; ನೂಕು; ಉಚ್ಚಾಟನೆ ಮಾಡು.
(ಹಿಡುವಳಿದಾರರನ್ನು ಕಾನೂನುಬದ್ಧ ರೀತಿಯಲ್ಲಿ) ಹೊರಕ್ಕೆ ಹಾಕು; ಉಚ್ಚಾಟಿಸು; ಬಿಟ್ಟು ಓಡಿಸು.