ಬಿಡಾರ ಚಾತುರ್ಯ; ಶಿಬಿರಕಲೆ; ಶಿಬಿರಕುಶಲತೆ; ಕ್ಯಾಂಪ್ ಕೌಶಲ; ಹೊರಾಂಗಣದ ಬಿಡಾರಗಳನ್ನು ಯಾ ಕ್ಯಾಂಪುಗಳನ್ನು ಹೂಡುವ ಯಾ ಅವುಗಳಲ್ಲಿ ವಾಸಿಸುವ ಕುಶಲತೆ.
Campeachy wood
ನಾಮವಾಚಕ
=logwood.
camper
ನಾಮವಾಚಕ
ಬಿಡಾರಿ; ಕ್ಯಾಂಪಿಗ; ಮನರಂಜನೆಗಾಗಿ, ಮುಖ್ಯವಾಗಿ ಬಯಲಿನಲ್ಲಿ ಯಾ ನಿರ್ಜನ ಪ್ರದೇಶದಲ್ಲಿ, ಬೀಡು ಹೂಡುವವನು ಯಾ ಬಿಡಾರ ಹೂಡಿ ವಾಸ ಮಾಡುವವನು ಯಾ ಹಾಗೆ ಸ್ಥಾಪಿಸಿದ ಶಿಬಿರಗಳಿಗೆ ಹೋಗುವವನು.
ಬಿಡಾರಗಾಡಿ; ಶಿಬಿರವಾಹನ; ಹೊರಗೆ ಬೀಡು ಬಿಟ್ಟಿರುವಾಗ ಮನೆಯಂತೆ ಬಳಸುವ ಸೌಕರ್ಯಗಳುಳ್ಳ ಮೋಟಾರು ವಾಹನ.
camphor
ನಾಮವಾಚಕ
(ರಸಾಯನವಿಜ್ಞಾನ) ಕರ್ಪೂರ:
ಏಷ್ಯಾ ಖಂಡದ ಒಂದು ಬಗೆಯ ಗಿಡದ ಕಾಷ್ಠ ಮತ್ತು ತೊಗಟೆಗಳಲ್ಲಿ ದೊರೆಯುವ, ಈಗ ಕೃತಕವಾಗಿ ತಯಾರಿಸುವ, ನಸುಬಿಳಿಯ, ಆವಿಯಾಗುವ, ಸುವಾಸನೆಯ, ಕಹಿಯಾದ, ಟರ್ಪೀನು ವರ್ಗದ, ಔಷಧವಾಗಿ ಬಳಸುವ ಒಂದು ಕೀಟೋನು, ${\rm C}_{10}{\rm H}_16O$.
ಕರ್ಪೂರದ ಗುಣಗಳನ್ನು ಹೋಲುವ ಮತ್ತು ಹತ್ತಿರ ಸಂಬಂಧದ ಅಣುರಚನೆಯುಳ್ಳ ಟರ್ಪೀನುಗಳು.
camphor oil
ನಾಮವಾಚಕ
ಕರ್ಪೂರತೈಲ; ಕರ್ಪೂರದ ಎಣ್ಣೆ; ಕರ್ಪೂರ ಮರದ ತೊಗಟೆ ಮತ್ತು ಇತರ ಭಾಗಗಳಿಂದ ಬಟ್ಟಿಯಿಳಿಸಿದ ಎಣ್ಣೆ.
camphorate
ನಾಮವಾಚಕ
(ರಸಾಯನವಿಜ್ಞಾನ) ಕರ್ಪೂರೇಟು; ಕರ್ಪೂರಿಕಾಮ್ಲದ ಲವಣ ಯಾ ಎಸ್ಟರು.