logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

accouter
ಸಕರ್ಮಕ ಕ್ರಿಯಾಪದ
(ಅಮೆರಿಕನ್‍ ಪ್ರಯೋಗ) = accoutre.

accouterment
ನಾಮವಾಚಕ
(ಅಮೆರಿಕನ್‍ ಪ್ರಯೋಗ) = accoutrement.

accoutre
ಸಕರ್ಮಕ ಕ್ರಿಯಾಪದ
(ಬ್ರಿಟಿಷ್‍ ಪ್ರಯೋಗ) (ಸಾಮಾನ್ಯವಾಗಿ ಭೂತಕೃದಂತದಲ್ಲಿ ಪ್ರಯೋಗ) ಪೋಷಾಕು ತೊಡಿಸು: accoutred for battle ಕದನದ ಪೋಷಾಕು–ತೊಡಿಸಿ, ತೊಟ್ಟು, ಧರಿಸಿ.

accoutrement
ನಾಮವಾಚಕ
  • ಪೋಷಾಕುಧಾರಣೆ.
  • (ಬಹುವಚನದಲ್ಲಿ) ಪೋಷಾಕು; ದಿರಿಸು.
  • (ಬಹುವಚನದಲ್ಲಿ) (ಸೈನ್ಯ) (ಸಾಮಾನ್ಯವಾಗಿ ಆಯುಧಗಳು, ಉಡುಪು–ಇವುಗಳನ್ನು ಬಿಟ್ಟು) ಸನ್ನಾಹ; ಸೈನಿಕನ ಸಜ್ಜು.

  • accredit
    ಸಕರ್ಮಕ ಕ್ರಿಯಾಪದ
  • (ಸಮಾಲೋಚಕನಲ್ಲಿ ಯಾ ಸಮಾಲೋಚನೆಯಲ್ಲಿ) ನಂಬಿಕೆ ಹುಟ್ಟಿಸು.
  • (ರಾಯಭಾರಿ ಮೊದಲಾದವರನ್ನು) ನಿಯೋಗಿಸು; ಪ್ರಮಾಣಪತ್ರದೊಡನೆ ನಿಯೋಗಿಯಾಗಿ ಕಳುಹಿಸು; ಅಧಿಕಾರ ಕೊಟ್ಟು ಕಳುಹಿಸು: our ambassador accredited to France ಹ್ರಾನ್ಸಿಗೆ ನಿಯೋಗಿಸಲಾದ ನಮ್ಮ ರಾಯಭಾರಿ.
  • (ಹೇಳಿಕೆಯನ್ನು, ನೀತಿಯನ್ನು) ಆರೋಪಿಸು.
  • (ಗುಣ ಮೊದಲಾದವು ಒಬ್ಬನಲ್ಲಿದೆಯೆಂದು) ಎಣಿಸು; ಭಾವಿಸು: he is accredited with magical powers ಆತನಲ್ಲಿ ಮಾಂತ್ರಿಕ ಶಕ್ತಿಯಿದೆಯೆಂದು ಎಣಿಸಲಾಗಿದೆ.
  • (ಕಾಲೇಜು, ಶಾಲೆ, ಮೊದಲಾದವು ನಿರ್ದಿಷ್ಟ ವಿದ್ಯಾಭ್ಯಾಸದ ಮಟ್ಟ, ಪ್ರಯೋಗಾಲಯ, ಮೊದಲಾದ ಆವಶ್ಯಕತೆಗಳನ್ನು ಹೊಂದಿವೆಯೆಂದು) ದೃಢೀಕರಿಸು; ಅಧಿಕಾರಪೂರ್ವಕವಾಗಿ ಹೇಳು.

  • accredited
    ಗುಣವಾಚಕ
  • (ವ್ಯಕ್ತಿ ಯಾ ಸಂಸ್ಥೆಯ ವಿಷಯದಲ್ಲಿ) ಅಧಿಕೃತ; ಅಧಿಕೃತವಾಗಿ ಮನ್ನಣೆ ಪಡೆದಿರುವ: accredited representative of the UNO ವಿಶ್ವಸಂಸ್ಥೆಯ ಅಧಿಕೃತ ಪ್ರತಿನಿಧಿ.
  • (ನಂಬಿಕೆ, ಅಭಿಪ್ರಾಯ, ಮೊದಲಾದವುಗಳ ವಿಷಯದಲ್ಲಿ) ಸರ್ವಸಮ್ಮತವಾದ; ಎಲ್ಲರೂ ಒಪ್ಪಿರುವ; ಸಾಂಪ್ರದಾಯಿಕ: accredited custom ಸರ್ವಸಮ್ಮತವಾದ ಪದ್ಧತಿ.
  • (ಹಸು, ಹಾಲು, ಮೊದಲಾದವುಗಳ ವಿಷಯದಲ್ಲಿ) ಗ್ಯಾರಂಟಿ–ಗುಣದ, ಮಟ್ಟದ, ದರ್ಜೆಯ; ಖಾತರಿಪಡಿಸಿದ ಗುಣಮಟ್ಟದ.

  • accrete
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಒಂದಾಗಿಸು; ಕೂಡಿಸು; ತನ್ನ ಸುತ್ತ ಸೇರಿಕೊಳ್ಳುವಂತೆ ಆಕರ್ಷಿಸು.
  • ಒಟ್ಟುಗೂಡಿ ಬೆಳೆ.
  • (ಕೇಂದ್ರವೊಂದರ ಸುತ್ತಲೂ ಆಗುವಂತೆ) ಸೇರಿಕೊ; ಕೂಡಿಕೊ.

  • accrete
    ಗುಣವಾಚಕ
    (ಸಸ್ಯವಿಜ್ಞಾನ) ಒಗ್ಗೂಡಿ ಬೆಳೆದ.

    accretion
    ನಾಮವಾಚಕ
  • ನಿರಂತರ ವಿಕಾಸ; ನಿರಂತರವಾದ ಆಂತರಿಕ ಬೆಳೆವಣಿಗೆ.
  • ಒಂದುಗೂಡಿಕೆ; ಸಂಚಯನ; ಪ್ರತ್ಯೇಕವಾದ ಕಣಗಳು ಮೊದಲಾದವು ಸೇರಿಕೊಂಡು ದೊಡ್ಡದಾಗುವಿಕೆ.
  • ಸಂಚಯ; ಉಪಚಯ; ವೃದ್ಧಿ; ಪ್ರತ್ಯೇಕವಾದ ಕಣಗಳು ಮೊದಲಾದವು ಒಂದುಗೂಡುವುದರಿಂದ ಆದದ್ದು.
  • ಕೂಡಿಕೆ; ಸೇರಿಕೆ; ಪ್ರಕ್ಷೇಪ(ಣ); ಹೊರತಾದ್ದನ್ನು ವಸ್ತುವಿಗೆ ಸೇರಿಸಿದ ಅನ್ಯ ವಸ್ತು.
  • ಸೇರ್ಪಡೆ; ಒಂದು ರಾಷ್ಟ್ರಕ್ಕೆ ಒಂದು ಪ್ರದೇಶ ಸೇರುವುದು.
  • (ನ್ಯಾಯಶಾಸ್ತ್ರ) =accession(7).
  • (ನ್ಯಾಯಶಾಸ್ತ್ರ) (ಬೇರೆ ವಾರಸುದಾರರ ಅಭಾವದಿಂದ) ಒಬ್ಬನಿಗೆ ಆಸ್ತಿ ಪಾಸ್ತಿ ಸೇರುವುದು; ಆಸ್ತಿವೃದ್ಧಿ.

  • accrual
    ನಾಮವಾಚಕ
  • (ತೆರಿಗೆ, ಬಡ್ಡಿ, ಮೊದಲಾದವುಗಳ) ಸೇರಿಕೊಳ್ಳುವಿಕೆ; ಸಂಚಯ; ವೃದ್ಧಿ.
  • ಕೂಡಿದ್ದು; ಸೇರಿದ್ದು; ಕೂಡಿಕೆ; ಸೇರಿಕೆ; ಸಂಚಯ.


  • logo