logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

offenceless
ಗುಣವಾಚಕ
ಕೆಡುಕು ಮಾಡದ; ನಿರಪರಾಧಿಯಾದ; ನಿರುಪದ್ರವಿ; ಹಾನಿಕರವಲ್ಲದ; ಕಿರಿಕಿರಿಯನ್ನುಂಟು ಮಾಡದ; ಅಪಚಾರವೆಸಗದ; (ಇನ್ನೊಬ್ಬರ) ಮನನೋಯಿಸದ.

offend
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ಮನಸ್ಸು ನೋಯಿಸು; ಮನನೋಯುವಂತೆ ಮಾಡು: I am sorry you are offended ನಿನ್ನ ಮನಸ್ಸು ನೊಂದಿರುವುದಕ್ಕಾಗಿ ನನಗೆ ವ್ಯಥೆಯಾಗಿದೆ.
  • ರೇಗಿಸು; ಕೋಪ, ಸಿಟ್ಟು–ಬರುವಂತೆ ಮಾಡು.
  • ಅಸಹ್ಯ ಹುಟ್ಟಿಸು; ಜುಗುಪ್ಸೆಯುಂಟುಮಾಡು: it offends her delicacy ಅದು ಅವಳ ಸೂಕ್ಷ್ಮ ಸ್ವಭಾವಕ್ಕೆ ಅಸಹ್ಯವೆನಿಸುವಂತಿದೆ.

  • offendedly
    ಕ್ರಿಯಾವಿಶೇಷಣ
  • ಮನ ನೊಂದು.
  • ರೇಗಿ; ಕೋಪಗೊಂಡು.
  • ಅಸಹ್ಯಗೊಂಡು; ಜುಗುಪ್ಸೆಪಟ್ಟು.

  • offender
    ನಾಮವಾಚಕ
    ಅಪರಾಧಿ; ತಪ್ಪಿತಸ್ಥ; ನೀತಿ ಕಾನೂನು, ಮರ್ಯಾದೆ, ಮೊದಲಾದವನ್ನು ಉಲ್ಲಂಘಿಸುವವನು.

    offending
    ಗುಣವಾಚಕ
  • (ಮನಸ್ಸು) ನೋಯಿಸುವ; ತೊಂದರೆಯನ್ನುಂಟುಮಾಡುವ.
  • ರೇಗಿಸುವ; ಕೋಪ ಬರಿಸುವ.
  • ಅಸಹ್ಯಕರ.
  • (ಕಾನೂನು, ಮರ್ಯಾದೆ, ಮೊದಲಾದವನ್ನು) ಉಲ್ಲಂಘಿಸುವ; ಅಪರಾಧ ಮಾಡುವ.
  • ತಪ್ಪೆಸಗುವ; ತಪ್ಪಿ ನಡೆಯುವ.

  • offense
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) offence ಪದದ ರೂಪಾಂತರ.

    offensive
    ನಾಮವಾಚಕ
  • ಮನ ನೋಯಿಸುವ; ರೇಗಿಸುವ; ಅವಮಾನಪಡಿಸುವ: offensive language ದುರ್ಭಾಷೆ; ಅವಮಾನಕರ ಭಾಷೆ.
  • ಅಸಹ್ಯಕರ; ದುರ್ವಾಸನೆಯ; ಹೊಲಸಾದ; ಓಕರಿಕೆ ಬರಿಸುವ; ಜುಗುಪ್ಸೆ ಹುಟ್ಟಿಸುವ: offensive odour ಹೊಲಸು ನಾತ; ದುರ್ವಾಸನೆ.
  • ಮೇಲೆ ಬೀಳುವ; ಆಕ್ರಮಣದ; ಆಕ್ರಮಣಕಾರಿ; ಆಕ್ರಮಣ ನಡೆಸಲು ಉದ್ದೇಶಿಸಿದ.
  • (ಆಯುಧದ ವಿಷಯದಲ್ಲಿ) ಆಕ್ರಮಣದಲ್ಲಿ, ದಾಳಿಯಲ್ಲಿ–ಬಳಸುವ; ಆಕ್ರಮಣಕಾರಿ: offensive arms ಆಕ್ರಮಣಕಾರಿ ಆಯುಧಗಳು.

  • offensive
    ನಾಮವಾಚಕ
  • ಆಕ್ರಮಣ ಯಾ ಆಕ್ರಮಣಕಾರಿ ಮನೋಭಾವ; ಮೇಲೆ ಬೀಳುವುದು: take the offensive ಆಕ್ರಮಣ ನಡೆಸು; ಮೇಲೆ ಬೀಳು.
  • ದಾಳಿ; ದಂಡಯಾತ್ರೆ; ದಾಳಿಹೊಡೆತ: the long expected German offensive ಬಹುಕಾಲದಿಂದ ನಿರೀಕ್ಷಿಸಿದ ಜರ್ಮನ್‍ ದಾಳಿ.
  • (ಯಾವುದೇ ಉದ್ದೇಶದಿಂದ ನಡೆಸಿದ) ಆಕ್ರಮಣಕಾರಿ ಚಳುವಳಿ, ಆಂದೋಲನ: a peace offensive ಶಾಂತಿ ಚಳುವಳಿ.

  • offensively
    ಕ್ರಿಯಾವಿಶೇಷಣ
  • ಆಕ್ರಮಣಕಾರಿಯಾಗಿ; ಮೇಲೆ ಬೀಳುವಂತೆ.
  • ಮನನೋಯಿಸುವಂತೆ; ರೇಗಿಸುವಂತೆ; ಅವಮಾನಪಡಿಸುವ ರೀತಿಯಲ್ಲಿ.
  • ಅಸಹ್ಯಕರವಾಗಿ; ಓಕರಿಕೆ ಬರಿಸುವಂತೆ; ಜುಗುಪ್ಸೆ ಹುಟ್ಟಿಸುವ ರೀತಿಯಲ್ಲಿ.

  • offensiveness
    ನಾಮವಾಚಕ
  • ಆಕ್ರಮಣಾತ್ಮಕತೆ; ಮೇಲೆ ಬೀಳುವಂತಿರುವಿಕೆ.
  • ಮನನೋಯಿಸುವಂತಿರುವುದು; ಅಪಮಾನಕರವಾಗಿರುವಿಕೆ.
  • ಬೀಭತ್ಸತೆ; ಅಸಹ್ಯಕರವಾಗಿರುವಿಕೆ; ಓಕರಿಕೆ ಬರುಸುವಿಕೆ.


  • logo