ಮಾಯಾದೀಪ ಚಾಲಕ; ಮಾಯಾದೀಪದಲ್ಲಿ ಚಿತ್ರಗಳನ್ನು ತೋರಿಸುವವನು.
lanthanide series
ನಾಮವಾಚಕ
= lanthanides.
lanthanides
ನಾಮವಾಚಕ
(ರಸಾಯನವಿಜ್ಞಾನ) ಲ್ಯಾಂತನೈಡ್‍ಗಳು; ವಿರಳ ಭಸ್ಮಧಾತುಗಳು; ಪರಮಾಣು ಸಂಖ್ಯೆ 39 ಉಳ್ಳ ಯಿಟ್ರಿಯಮ್ ಹಾಗೂ (ಕೆಲವು ವೇಳೆ ಯಿಟ್ರಿಯಮ್ ಬಿಟ್ಟು) ಪರಮಾಣು ಸಂಖ್ಯೆ 57 ಉಳ್ಳ, ಲ್ಯಾಂತನಮ್‍ನಿಂದ ಪರಮಾಣು ಸಂಖ್ಯೆ 71 ಉಳ್ಳ ಲೂಟೀಷಮ್‍ವರೆಗಿನ ಹದಿನೈದು ಲೋಹಧಾತುಗಳು.
lanthanum
ನಾಮವಾಚಕ
(ರಸಾಯನವಿಜ್ಞಾನ) ಲ್ಯಾಂತನಮ್; ಪರಮಾಣು ಸಂಖ್ಯೆ 57, ಪರಮಾಣು ತೂಕ 138.9 ಉಳ್ಳ, ವಿರಳ ಭಸ್ಮಧಾತುಗಳ ಯಾ ಲ್ಯಾಂತನೈಡುಗಳ ಕುಟುಂಬಕ್ಕೆ ಸೇರಿದ, ಮಿಶ್ರಲೋಹಗಳ ತಯಾರಿಕೆಯಲ್ಲಿ ಬಳಸುವ, ಬೆಳ್ಳಿಯಂತೆ ಹೊಳೆಯುವ ಲೋಹಧಾತು, ಸಂಕೇತ La.
lanthorn
ನಾಮವಾಚಕ
(ಬ್ರಿಟಿಷ್ ಪ್ರಯೋಗ) = lantern.
lanugo
ನಾಮವಾಚಕ
ಭ್ರೂಣ ಕೇಶ; (ಮುಖ್ಯವಾಗಿ ಮಾನವ ಭ್ರೂಣದ ಶರೀರ ಮತ್ತು ಅಂಗಾಂಗಗಳ ಮೇಲಿನ) ಸೂಕ್ಷ್ಮವೂ ತೆಳುವೂ ಆದ ಕೂದಲು.
lanyard
ನಾಮವಾಚಕ
ಕಟ್ಟು ಹಗ್ಗ; ಕತ್ತಿನ ಯಾ ಕಂಕುಳಿನ ಸುತ್ತಲೂ ತೂಗು ಹಾಕಿಕೊಂಡು ಚೂರಿ, ಸಿಳ್ಳು, ಮೊದಲಾದವನ್ನು ಕಟ್ಟಬಹುದಾದ ಹಗ್ಗ.
(ನೌಕಾಯಾನ) ಬಿಗಿಸು ಹಗ್ಗ; ಯಾವುದನ್ನಾದರೂ ಬಿಗಿದು ಕಟ್ಟಲು ಬಳಸುವ ಚಿಕ್ಕ ಹಗ್ಗ.
ಕೋವಿಕೊಳವಿ ಹಗ್ಗ; ತುಪಾಕಿಯನ್ನು ಯಾ ಫಿರಂಗಿಯನ್ನು ಹಾರಿಸಲು ಅದರ ಕೊಳವಿಗೆ ತಗುಲಿಸುವ ಹಗ್ಗ.
Laodicean
ಗುಣವಾಚಕ
(ಮುಖ್ಯವಾಗಿ ಧರ್ಮದ ಯಾ ರಾಜಕೀಯದ ವಿಷಯದಲ್ಲಿ) ಉದಾಸೀನನಾದ; ಅನಾಸಕ್ತನಾದ.
Laodicean
ನಾಮವಾಚಕ
(ಮುಖ್ಯವಾಗಿ ಧರ್ಮದ ಯಾ ರಾಜಕೀಯದ ವಿಷಯದಲ್ಲಿ) ಉದಾಸೀನ; ಅನಾಸಕ್ತ.