logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

imp
ಸಕರ್ಮಕ ಕ್ರಿಯಾಪದ
  • ಗರಿಗೂಡಿಸು; ಗರಿಕಟ್ಟು; (ಡೇಗೆಯ ಹಾರುವ ಶಕ್ತಿಯನ್ನು ಹೆಚ್ಚಿಸಲು ಅದರ ಮುರಿದ ರೆಕ್ಕೆಗೆ) ಹೊಸ ಗರಿಗಳನ್ನು ಕಟ್ಟು.
  • (ಪ್ರಾಚೀನ ಪ್ರಯೋಗ) (ಹೊಸದಾಗಿ ಸೇರಿಸಿ) ಹೆಚ್ಚಿಸು; ವಿಸ್ತರಿಸು; ದೊಡ್ಡದು ಮಾಡು.

  • impact
    ನಾಮವಾಚಕ ಪದಗುಚ್ಛ
    impact strength ಸಂಘಟ್ಟನ ಬಲ; ಆಘಾತ ಶಕ್ತಿ; ಸಂಘಟ್ಟಿಸಿದಾಗ ಒಡೆಯದೆ ಇರುವ ಶಕ್ತಿ.
  • ಹೊಡೆತ; ಬಡಿತ; ಡಿಕ್ಕಿ; ಅಪ್ಪಳಿಕೆ; ತಾಡನ; ಸಂಘಟ್ಟನ; ಆಘಾತ (ರೂಪಕವಾಗಿ ಸಹ).
  • (ಮಹತ್ತರವಾದ) ಪರಿಣಾಮ; ಪ್ರಭಾವ.

  • impact
    ಸಕರ್ಮಕ ಕ್ರಿಯಾಪದ
  • (ಒಳಕ್ಕೆ ಭದ್ರವಾಗಿ) ಒತ್ತು; ತೆತ್ತಿಸು; ನೆಡು; ಸೇರಿಸು; ಗಟ್ಟಿಸು; ಬಂಧಿಸು.
  • (ಭೂತಕೃದಂತದಲ್ಲಿ, ಹಲ್ಲಿನ ವಿಷಯದಲ್ಲಿ) ಇನ್ನೊಂದು ಹಲ್ಲು ಮತ್ತು ದವಡೆಯ ನಡುವೆ ತೂರಿಕೊಂಡಿರುವ.
  • (ಮುರಿದ ಮೂಳೆಯ ವಿಷಯದಲ್ಲಿ) ಸಂಘಟಿತ ಭಾಗಗಳು ಪರಸ್ಪರ ಒತ್ತಲ್ಪಟ್ಟ.

  • impaction
    ನಾಮವಾಚಕ
    ಸಂಘಟ್ಟನ; ಗಟ್ಟಿಸುವುದು; ಭದ್ರವಾಗಿ – ಒತ್ತುವುದು, ತೆತ್ತಿಸುವುದು, ನೆಡುವುದು, ಸೇರಿಸುವುದು, ಬಂಧಿಸುವುದು.

    impair
    ಸಕರ್ಮಕ ಕ್ರಿಯಾಪದ
  • (ಗುಣ, ಮೌಲ್ಯಗಳನ್ನು) ಕೆಡಿಸು; ಧಕ್ಕೆತರು; ಹಾಳುಮಾಡು.
  • ದುರ್ಬಲಗೊಳಿಸು; ಕುಗ್ಗಿಸು; ತಗ್ಗಿಸು; ಕುಂದಿಸು; ಉಡುಗಿಸು.

  • impairment
    ನಾಮವಾಚಕ
  • ಧಕ್ಕೆ; ಕೆಡಿಸುವುದು; ಹಾಳು ಮಾಡುವುದು.
  • ದುರ್ಬಲಗೊಳಿಸುವುದು.

  • impala
    ನಾಮವಾಚಕ
    (ಬಹುವಚನ ಅದೇ). ದಕ್ಷಿಣ ಆಹ್ರಿಕದ ಸಣ್ಣ ಎರಳೆ, ಹುಲ್ಲೆ.

    impale
    ಸಕರ್ಮಕ ಕ್ರಿಯಾಪದ
  • (ಚರಿತ್ರೆ) (ಚಿತ್ರಹಿಂಸೆಯಾಗಿ ಯಾ ಮರಣದಂಡನೆಯಾಗಿ ವ್ಯಕ್ತಿಯನ್ನು) ಶೂಲಕ್ಕೇರಿಸು; ಶೂಲಕ್ಕೆ ಹಾಕು.
  • ದಸಿಯೇರಿಸು; ದಸಿಯ ಮೇಲೆ ಏರಿಸು.
  • (ವಂಶಲಾಂಛನ ವಿದ್ಯೆ) (ಎರಡು ವಂಶಲಾಂಛನಗಳನ್ನು ಒಂದೇ ಗುರಾಣಿಯ ಮೇಲೆ, ಮಧ್ಯೆ ಉದ್ದಗೆರೆಯೆಳೆದು) ಪಕ್ಕಪಕ್ಕದಲ್ಲಿ ಜೋಡಿಸು.
  • (ವಿರಳ ಪ್ರಯೋಗ) ದಸಿ ಬೇಲಿ ಹಾಕು; ದಸಿ ನೆಟ್ಟು ಬೇಲಿ ಹಾಕು.

  • impalement
    ನಾಮವಾಚಕ
  • ಶೂಲಕ್ಕೇರಿಸುವುದು.
  • ದಸಿಯೇರಿಸಿಕೆ; ದಸಿಯ ಮೇಲೆ ಏರಿಸುವುದು.
  • (ಗುರಾಣಿಯ ಮೇಲೆ ಎರಡು ವಂಶಲಾಂಛನಗಳ) ಪಕ್ಕಪಕ್ಕದ ಜೋಡಣೆ; ಸಂಯೋಜನೆ.
  • (ವಿರಳ ಪ್ರಯೋಗ) ದಸಿಬೇಲಿ ಹಾಕುವುದು.

  • impalpability
    ನಾಮವಾಚಕ
  • ಸ್ಪರ್ಶಾಗಮ್ಯತೆ; ಸ್ಪರ್ಶಾತೀತತೆ; ಮುಟ್ಟಿ ತಿಳಿಯಲಾರದಂತಿರುವಿಕೆ.
  • ದುಜ್ಞೇಯತೆ; ದುರ್ಗ್ರಾಹ್ಯತೆ; ಮನಸ್ಸಿಗೆ ಸುಲಭವಾಗಿ ಎಟಕದಂತಿರುವಿಕೆ.
  • (ಹಿಟ್ಟಿನ ವಿಷಯದಲ್ಲಿ) ಬಹಳ ನುಣ್ಣಗಿರುವಿಕೆ.


  • logo