(ಬಹುವಚನದಲ್ಲಿ) ಎಂಬತ್ತರ ದಶಕ ಮೊದಲಾದವು; ಮುಖ್ಯವಾಗಿ 80 ರಿಂದ 89 ರವರೆಗಿನ ಒಂದು ದಶಮಾನದ ಯಾ ಜೀವನದ ವರ್ಷಗಳು.
eightyfold
ಗುಣವಾಚಕ
ಎಂಬತ್ತರಷ್ಟು; ಎಂಬತ್ತು ಮಡಿ.
eightyfold
ನಾಮವಾಚಕ
ಎಂಬತ್ತರಷ್ಟು.
einsteinium
ನಾಮವಾಚಕ
(ರಸಾಯನವಿಜ್ಞಾನ) ಐನ್‍ಸ್ಟೈನಿಯಮ್; ಪ್ಲೂಟೋನಿಯಂನಿಂದ ತಕವಾಗಿ ತಯಾರಿಸಿರುವ, 99 ಪರಮಾಣು ಸಂಖ್ಯೆಯ, ವಿಕಿರಣಕಾರಕ ಲೋಹಧಾತು.
eirenic
ಗುಣವಾಚಕ
irenic ಪದದ ರೂಪಾಂತರ.
eirenicon
ನಾಮವಾಚಕ
ಸಾಮರಸ್ಯ ಸಂಧಾನ; ಶಾಂತಿಪ್ರಸ್ತಾಪ; ಶಾಂತಿಸಂಧಾನ; ಸಂಧಿಪ್ರಸ್ತಾಪ; ಪರಸ್ಪರ ವಿರುದ್ಧವಾದ ಧಾರ್ಮಿಕ ಯಾ ರಾಜಕೀಯ ಸಿದ್ಧಾಂತಗಳಲ್ಲಿ ಸಾಮರಸ್ಯ ತರಲು ಮಾಡುವ ಪ್ರಯತ್ನ.
eisteddfod
ನಾಮವಾಚಕ
ವೇಲ್ಸಿನ ಕವಿಸಮ್ಮೇಳನ.
ವೇಲ್ಸ್ ಸಮ್ಮೇಳನ ; ಸಂಗೀತ ಸ್ಪರ್ಧೆ (ಮೊದಲಾದವುಗಳಿಗಾಗಿ) ಸೇರುವ ಸ್ಥಳೀಯ ಸಮ್ಮೇಳನ.
eisteddfodic
ಗುಣವಾಚಕ
ವೇಲ್ಸ್‍ನ ಕವಿಸಮ್ಮೇಳನದ ಯಾ ಅದಕ್ಕೆ ಸಂಬಂಧಿಸಿದ.
either
ಗುಣವಾಚಕ
ಎರಡರಲ್ಲಿ ಒಂದೊಂದೂ; ಪ್ರತಿಯೊಂದೂ; ಎರಡೂ: at either end was a lamp ಪ್ರತಿ ಕೊನೆ (ಎರಡೂಕಡೆ)ಯಲ್ಲಿಯೂ ಒಂದು ದೀಪವಿತ್ತು. either view is tenable ಎರಡೂ ಅಭಿಪ್ರಾಯ ಸಾಧುವೇ. either is tenable ಎರಡೂ ಒಪ್ಪತಕ್ಕದೇ.
ಎರಡರಲ್ಲಿ ಯಾವುದಾದರೂ ಒಂದು; ಇಬ್ಬರಲ್ಲಿ ಯಾರಾದರೂ ಒಬ್ಬರು: put the lamp at either end ದೀಪವನ್ನು ಯಾವುದಾದರೂ ಒಂದು ಕೊನೆಯಲ್ಲಿ ಇಡು.