logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

camp-stool
ನಾಮವಾಚಕ
ಕ್ಯಾಂಪ್‍ಸ್ಟೂಲು; ಮಡಚಿ ಒಯ್ಯಬಹುದಾದ, ಹಗುರ ಕಾಲುಮಣೆ.

campaign
ನಾಮವಾಚಕ
  • ದಂಡಯಾತ್ರೆ; ಒಂದು ನಿರ್ದಿಷ್ಟ ಪ್ರದೇಶದಲ್ಲಿ, ಒಂದು ಉದ್ದೇಶಕ್ಕಾಗಿ ಯಾ ಪೂರ್ಣತಃ ಯಾ ಭಾಗಶಃ ಯುದ್ಧದಲ್ಲಿ ಪಾಲುಗೊಳ್ಳಲು ಮಾಡುವ ಸೈನ್ಯ–ಕಾರ್ಯಚರಣೆ, ಕಾರ್ಯಾವಳಿ, ಚಟುವಟಿಕೆ.
  • (ಯುದ್ಧರಂಗದಲ್ಲಿ) ಸೈನಿಕ ಕಾರ್ಯಾಚರಣೆ; ಹೋರಾಟ.
  • (ರಾಜಕೀಯ ಮೊದಲಾದವುಗಳನ್ನು ಮುಖ್ಯವಾಗಿ ಚುನಾವಣೆಗೆ ಮೊದಲು ಜನರ ಆಸಕ್ತಿಯನ್ನು ಕೆರಳಿಸುವ) ಸುಸಂಘಟಿತ–ಪ್ರಯತ್ನ, ಕಾರ್ಯಾಚರಣೆ ಯಾ ಚಳುವಳಿ.

  • campaign
    ಅಕರ್ಮಕ ಕ್ರಿಯಾಪದ
  • ದಂಡಯಾತ್ರೆಯಲ್ಲಿ–ತೊಡಗು, ಭಾಗವಹಿಸು.
  • ದಂಡಯಾತ್ರೆ ನಡೆಸು.
  • (ರಾಜಕೀಯ ಮೊದಲಾದವುಗಳಲ್ಲಿ) ಸುಸಂಘಟಿತ ಕಾರ್ಯಾಚರಣೆಯಲ್ಲಿ ಭಾಗಿಯಾಗು ಯಾ ಕಾರ್ಯಾಚರಣೆ ನಡೆಸು; ಚಳುವಳಿಯಲ್ಲಿ ಭಾಗವಹಿಸು ಯಾ ಚಳುವಳಿ ನಡೆಸು.

  • campaigner
    ನಾಮವಾಚಕ ಪದಗುಚ್ಛ
    old campaigner ಕದೀಮ; ಪರಿಣತ; ಹಳಬ; ಪಳಗಿದವನು; ಅನುಭವಿ; ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವುದರಲ್ಲಿ ಕುಶಲ.
  • ದಂಡಯಾತ್ರಿಕ; ಸೈನ್ಯ ಕಾರ್ಯಾಚರಣೆಯಲ್ಲಿ ತೊಡಗಿರುವವನು.
  • ಚಳುವಳಿಗಾರ; (ಮುಖ್ಯವಾಗಿ ರಾಜಕೀಯ ಮೊದಲಾದ) ಕಾರ್ಯಾಚರಣೆಗಳಲ್ಲಿ ತೊಡಗಿರುವವನು.

  • campanile
    ನಾಮವಾಚಕ
    ಗಂಟೆಗೋಪುರ; (ಮುಖ್ಯವಾಗಿ ಇಟಲಿಯಲ್ಲಿ, ಸಾಮಾನ್ಯವಾಗಿ ಚರ್ಚಿನ ಕಟ್ಟಡದಿಂದ ಬೇರೆಯಿರುವ) ಗಂಟೆ ಹೊತ್ತ ಗೋಪುರ.

    campanologer
    ನಾಮವಾಚಕ
  • ಘಂಟಾವಿದ; ಘಂಟಾಶಾಸ್ತ್ರಜ್ಞ; ಘಂಟಾತಜ್ಞ; ಘಂಟೆಗಳನ್ನೂ ಘಂಟಾನಾದಗಳನ್ನೂ ಅಧ್ಯಯನ ಮಾಡಿರುವವನು.
  • ಗಂಟೆಗಾರ; ಗಂಟೆ ತಯಾರಕ.
  • ಗಂಟೆವಾದಕ; ಘಂಟಾವಾದಕ; ಗಂಟೆ ಬಾರಿಸುವವನು.

  • campanological
    ಗುಣವಾಚಕ
    ಘಂಟಾ ವಿದ್ಯೆಯ ಯಾ ಅದಕ್ಕೆ ಸಂಬಂಧಪಟ್ಟ.

    campanologist
    ನಾಮವಾಚಕ
    =campanologer.

    campanology
    ನಾಮವಾಚಕ
  • ಗಂಟೆಶಾಸ್ತ್ರ; ಘಂಟಾಶಾಸ್ತ್ರ; ಗಂಟೆಗಳನ್ನು ಕುರಿತ ತತ್ತ್ವಗಳು.
  • ಘಂಟಾವಿದ್ಯೆ; ಗಂಟೆ ಕಲೆ; ಗಂಟೆಗಾರಿಕೆ; ಘಂಟೆಗಳನ್ನು ಮಾಡುವುದು, ಬಾರಿಸುವುದು ಮೊದಲಾದವುಗಳನ್ನು ಕುರಿತ ಕಲೆ ಯಾ ಸೂತ್ರಗಳು.

  • campanula
    ನಾಮವಾಚಕ
    ಗಂಟೆ ಹೂ; ಗಂಟೆಯಾಕಾರದ ದಳವಲಯವೂ ಬಿಡಿಬಿಡಿಯಾದ ಪರಾಗಕೋಶಗಳೂ ಇರುವ, ಸಾಮಾನ್ಯವಾಗಿ ನೀಲಿ, ಗುಲಾಬಿ ಯಾ ಬಿಳಿ ಬಣ್ಣದ ಹೂಗಳನ್ನು ಬಿಡುವ, ಸಸ್ಯಗಳ ದೊಡ್ಡ ಕುಲ ಯಾ ಈ ಕುಲದ ಸಸ್ಯ.


    logo