logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

baluster
ನಾಮವಾಚಕ
  • (ಮುಖ್ಯವಾಗಿ ಕಟಕಟೆಯ) ಹೂಜಿಗಂಬ. Figure: baluster
  • ಕಂಬಿಯ ಆಧಾರಕಂಬ.
  • (ಬಹುವಚನದಲ್ಲಿ, ಪ್ರಾಚೀನ ಪ್ರಯೋಗ) ಕಟಕಟೆ; ಕಟಾಂಜನ; ಹೂಜಿಗಂಬ ಸಾಲು.

  • balustrade
    ನಾಮವಾಚಕ
    (ವಾಸ್ತುಶಿಲ್ಪ) (ಬಾಲ್ಕನಿ, ಮೆಟ್ಟಿಲು, ಮೊದಲಾದವುಗಳ ಆಲಂಕಾರಿಕ) ಕಟಕಟೆ; ಕಟಾಂಜನ; ಹೂಜಿಗಂಬ ಸಾಲು.

    balustraded
    ಗುಣವಾಚಕ
    (ಬಾಲ್ಕನಿ, ಮಾಳಿಗೆ, ಮೊದಲಾದವುಗಳ ವಿಷಯದಲ್ಲಿ) ಕಟಾಂಜನವುಳ್ಳ; ಹೂಜಿಗಂಬಗಳಿಂದ ಕೂಡಿದ.

    bam
    ಸಕರ್ಮಕ ಕ್ರಿಯಾಪದ
    (ಆಡುಮಾತು) (ತಮಾಷೆಗಾಗಿ) ಮೋಸಗೊಳಿಸು; ವಂಚಿಸು.

    bam
    ನಾಮವಾಚಕ
    (ಆಡುಮಾತು) ತಮಾಷೆಯ ವಂಚನೆ; ಕೀಟಲೆಯ ಮೋಸ.

    bambino
    ನಾಮವಾಚಕ
  • (ಕ್ರಿಸ್‍ಮಸ್‍ ಹಬ್ಬದಲ್ಲಿ ಇಟ್ಯಾಲಿಯನ್‍ ಚರ್ಚುಗಳಲ್ಲಿ ಪ್ರದರ್ಶಿಸಿರುವ, ಬಟ್ಟೆಗಳಲ್ಲಿ ಸುತ್ತಿದ) ಶಿಶು ಯೇಸು (ಗೊಂಬೆ).
  • (ಆಡುಮಾತು ಇಟಲಿಯಲ್ಲಿ) ಶಿಶು; ಹಸುಳೆ.

  • bamboo
    ನಾಮವಾಚಕ
  • ಬಿದಿರು ಮಳೆ.
  • ಬಿದಿರು; ಗಳು; ಬೊಂಬು.

  • bamboo curtain
    ನಾಮವಾಚಕ
    (ರಾಜನೀತಿಶಾಸ್ತ್ರ) ಬಿದಿರುಪರದೆ; ಬೊಂಬುತೆರೆ; ಕಮ್ಯುನಿಸ್ಟ್‍ ಚೀಣದ ರಹಸ್ಯ ನೀತಿ, ಕೂಟನೀತಿ.

    bamboozle
    ಸಕರ್ಮಕ ಕ್ರಿಯಾಪದ ಪದಗುಚ್ಛ
    (ಅಶಿಷ್ಟ)
  • (ಬೆಪ್ಪುಗೊಳಿಸಿ, ದಿಗ್ಭ್ರಮೆಗೊಳಿಸಿ, ತಂತ್ರದಿಂದ) ಮೋಸಮಾಡು; ವಂಚಿಸು; ದಗಾಹಾಕು; ಕಣ್ಣಿಗೆ ಮಣ್ಣೆರಚು.
  • ತಬ್ಬಿಬ್ಬುಗೊಳಿಸು; ದಿಗ್ಭ್ರಮೆಗೊಳಿಸು.

  • bamboozle
    ನಾಮವಾಚಕ
  • (ಬೆಪ್ಪುಗೊಳಿಸಿ, ದಿಗ್ಭ್ರಮೆಗೊಳಿಸಿ ಮಾಡುವ) ಮೋಸ; ವಂಚನೆ.
  • ದಿಗ್ಭ್ರಮೆಗೊಳಿಸುವಿಕೆ.


  • logo