logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

account
ನಾಮವಾಚಕ ಪದಗುಚ್ಛ ನುಡಿಗಟ್ಟು
  • ಲೆಕ್ಕಾಚಾರ; ಎಣಿಕೆ;
  • ಜಮಾಖರ್ಚಿನ ಲೆಕ್ಕ, ಲೆಕ್ಕಾಚಾರ.
  • (ಜಮಾಖರ್ಚಿನ) ಖಾತೆ; ವರದಿ; ವಿವರಣೆ.
  • ಎಣಿಕೆ; ಪರಿಗಣನೆ: he stands high in their account ಅವರ ಎಣಿಕೆಯಲ್ಲಿ ಅವನ ಸ್ಥಾನ ಉನ್ನತವಾದದ್ದು.
  • ಬ್ಯಾಂಕು ಮೊದಲಾದವುಗಳ ಲೆಕ್ಕ, ಖಾತೆ.
  • ಸಮಜಾಯಿಷಿ; ಸಮಾಧಾನ; ತೃಪ್ತಿಕರ ವಿವರಣೆ: his account for his conduct was not satisfactory ಅವನ ನಡತೆಯ ಬಗ್ಗೆ ಕೊಟ್ಟ ಸಮಾಧಾನ ತೃಪ್ತಿಕರವಾಗಿರಲಿಲ್ಲ.
  • ಪ್ರಾಮುಖ್ಯ; ಗಣ್ಯತೆ: a man of account ಗಣ್ಯವ್ಯಕ್ತಿ.
  • (ವ್ಯಕ್ತಿ, ಘಟನೆ, ಮೊದಲಾದವುಗಳ ಬಗೆಗೆ) ವರದಿ; ಕಥನ; ವಿವರಣೆ.
  • ಲಾಭ; ಪ್ರಯೋಜನ; ಉಪಯೋಗ: invest one’s money to good account ಹಣವನ್ನು ಒಳ್ಳೆಯ ಲಾಭಕ್ಕಾಗಿ ಹೂಡು.
  • ಸ್ಟಾಕ್‍ ಎಕ್ಸ್‍ಚೇಂಜ್‍ನಲ್ಲಿ ನಿಯತಕಾಲಿಕವಾಗಿ ಲೆಕ್ಕಗಳನ್ನು ಫೈಸಲು ಮಾಡುವುದು.
  • (ಸಂಗೀತ ಕೃತಿ ಮೊದಲಾದವುಗಳ) ಗಾಯನ ಯಾ ವಾದನ.

  • account day
    ನಾಮವಾಚಕ
    ಲೆಕ್ಕಾಚಾರದ ದಿನ; ಲಂಡನ್‍ ಸ್ಟಾಕ್‍ ಎಕ್ಸ್‍ಚೇಂಜಿನಲ್ಲಿ ಸ್ಟಾಕುಗಳ ಲೆಕ್ಕ ಚುಕ್ತಾ ಮಾಡುವ ದಿನ.

    accountability
    ನಾಮವಾಚಕ
    ಹೊಣೆಗಾರಿಕೆ; ಜವಾಬ್ದಾರಿ; ಉತ್ತರವಾದಿತ್ವ.

    accountable
    ಗುಣವಾಚಕ
  • ಹೊಣೆಗಾರನಾದ; ಉತ್ತರವಾದಿಯಾದ; ಜವಾಬ್ದಾರನಾದ: I am account to only my conscience ನಾನು ನನ್ನ ಅಂತಸ್ಸಾಕ್ಷಿಗೆ ಮಾತ್ರ ಹೊಣೆಗಾರ.
  • ಕಾರಣ ಕೊಡಬಹುದಾದ; ವಿವರಿಸಬಹುದಾದ: these apparent contradictions are now accountable ಈ ತೋರಿಕೆಯ ವಿರೋಧಗಳಿಗೆ ಈಗ ಕಾರಣ ಕೊಡಬಹುದು.

  • accountableness
    ನಾಮವಾಚಕ
    = accountability.

    accountably
    ಕ್ರಿಯಾವಿಶೇಷಣ
  • ಲೆಕ್ಕಕೊಡುವಂತೆ.
  • ಕಾರಣ ಕೊಡುವ ರೀತಿಯಲ್ಲಿ.

  • accountancy
    ನಾಮವಾಚಕ
  • ಅಕೌಂಟೆನ್ಸಿ; ಲೆಕ್ಕಶಾಸ್ತ್ರ; ಕರಣಿಕಶಾಸ್ತ್ರ; ಕರಣಿಕ ವೃತ್ತಿಯ ಅಭ್ಯಾಸ ಯಾ ಕರಣಿಕನ ಕೆಲಸ.
  • ಕರಣಿಕ ವೃತ್ತಿ.

  • accountant
    ನಾಮವಾಚಕ
    ಅಕೌಂಟೆಂಟು; ಲೆಕ್ಕಿಗ; ಕರಣಿಕ; ಲೆಕ್ಕಗಳನ್ನಿಟ್ಟು, ಅವನ್ನು ಪರೀಕ್ಷಿಸಿ ತಾಳೆ ನೋಡಬೇಕಾದವನು.

    accountant general
    ನಾಮವಾಚಕ
    ಅಕೌಂಟೆಂಟ್‍ ಜನರಲ್‍; ಸರ್ಕಾರ ಯಾ ಸಾರ್ವಜನಿಕ ಕಚೇರಿಗಳ ಪ್ರಧಾನ ಕರಣಿಕ.

    accounting
    ನಾಮವಾಚಕ
    ಕರಣಿಕವಿದ್ಯೆ; ಕರಣಿಕಶಾಸ್ತ್ರ; ಲೆಕ್ಕವನ್ನಿಡುವ ವಿಧಾನ ಯಾ ಕಲೆ.


    logo