logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

off-the-wall
ಗುಣವಾಚಕ
(ಅಶಿಷ್ಟ)
  • ತಿಕ್ಕಲ; ಹುಚ್ಚು ಹುಚ್ಚಾದ.
  • ಅಸಂಬದ್ಧವಾದ; ಅಸಂಗತ.
  • ವಿಲಕ್ಷಣ; ವಿಕಟ; ವಿಜಾತೀಯ; ವಿಕಾರವಾದ.

  • off-time
    ನಾಮವಾಚಕ
    ಮಂದಿಕಾಲ; ವ್ಯಾಪಾರ ಮಂದಿಯಾಗಿರುವ, ಬಿರುಸುಭರಾಟೆ ಇಲ್ಲದ ಕಾಲ.

    off-white
    ನಾಮವಾಚಕ
    ಮಾಸಲು, ಮಬ್ಬು ಬಿಳುಪು; ಬೂದು ಯಾ ಹಳದಿ ಛಾಯೆಯುಳ್ಳ ಬಿಳಿಬಣ್ಣ.

    off-white
    ಗುಣವಾಚಕ
    ಮಾಸಲು ಬಿಳುಪಿನ; ಪೂರ್ತಿ ಬಿಳುಪಲ್ಲದ; ಬೂದು ಯಾ ಹಳದಿ ಛಾಯೆಯ ಬಿಳುಪಿನ.

    Off.
    ಸಂಕ್ಷಿಪ್ತ
  • Office.
  • Officer.

  • offal
    ನಾಮವಾಚಕ ಪದಗುಚ್ಛ
    offal milk, wheat, wood, etc., ಕೀಳುಗುಣದ, ಕಳಪೆಯಾದ ಹಾಲು, ಗೋಧಿ, ದಾರು, ಮೊದಲಾದವು.
  • ಕಸ; ತಿನ್ನಲು ಬಾರದ್ದೆಂದು ಬಿಸುಟ ಪ್ರಾಣಿ ದೇಹದ ಅಂಗಭಾಗಗಳು ಮುಖ್ಯವಾಗಿ ಕರುಳು, ತಲೆ, ಹೃದಯ, ಬಾಲ, ಮೊದಲಾದವು.
  • ಕಸ; ಕಚಡ; ರದ್ದಿ; ಹೊಲಸು; ಕಶ್ಮಲ; ಕೊಳಕು; ಕೆಲಸಕ್ಕೆ ಬಾರದ ಚೂರುಪಾರು; ಕೆಲಸಕ್ಕೆ ಬಾರದ್ದೆಂದು ಬಿಸುಟದ್ದು.
  • ಕೆಟ್ಟ ಮಾಂಸ; ಕೊಳೆತು ನಾರುವ ಮಾಂಸ, ಅಗ್ಗದ ಮೀನು.
  • (ಸಾಮಾನ್ಯವಾಗಿ ಬಹುವಚನದಲ್ಲಿ) (ಧಾನ್ಯದ) ಹೊಟ್ಟು, ಗುನಿ, ಉಮಿ, ಸಿಪ್ಪೆ, ಮೊದಲಾದವು.
  • ಚರಟ; ಗಸಿ; ಗಷ್ಟು.

  • offbeat
    ಗುಣವಾಚಕ
  • (ಸಂಗೀತ) ತಾಳದಲ್ಲಿ ಘಾತಕ್ಕೆ ಮೇಳೈಸದ.
  • (ರೂಪಕವಾಗಿ)
    1. ವಿಲಕ್ಷಣವಾದ; ವಿಚಿತ್ರವಾದ.
    2. ರೂಢಿಯದಲ್ಲದ; ವಾಡಿಕೆಯದಲ್ಲದ; ಸಂಪ್ರದಾಯಬದ್ಧವಲ್ಲದ; ಸಂಪ್ರದಾಯಾನುಸಾರಿಯಲ್ಲದ.

  • offbeat
    ನಾಮವಾಚಕ
    (ಸಂಗೀತ) ಸಂಗೀತಕೃತಿಯಲ್ಲಿ ಘಾತ ಬೀಳಬೇಕಾದ ಕಡೆ ಬೀಳದೆ ಇರುವುದು.

    offcut
    ನಾಮವಾಚಕ
    ಶೇಷ; ಉಳಿಕೆ ಪಳಿಕೆ; ಉಳಿದದ್ದು; ದಾರು, ಕಾಗದ, ಮೊದಲಾದವುಗಳನ್ನು ಕತ್ತರಿಸಿದ ಅನಂತರ ಉಳಿದ, ಸಾಮಾನ್ಯವಾಗಿ ಕಡಮೆ ಬೆಲೆಗೆ ಬಿಕರಿಯಾಗುವ, ಭಾಗ.

    offence
    ನಾಮವಾಚಕ ಪದಗುಚ್ಛ
  • ಕಾನೂನುಬಾಹಿರ ಕಾರ್ಯ, ಚಟುವಟಿಕೆ; ಅಪರಾಧ.
  • (ನಿಯಮ ಮೊದಲಾದವುಗಳ) ಉಲ್ಲಂಘನೆ; ತಪ್ಪು ಯಾ ಅಸಭ್ಯ ನಡವಳಿಕೆ.
    1. ಮನಸ್ಸು ನೋಯಿಸುವುದು: no offence was meant ಮನಸ್ಸು ನೋಯಿಸುವುದು (ಅವನ) ಉದ್ದೇಶವಾಗಿರಲಿಲ್ಲ.
    2. ನೊಂದ ಮನಸ್ಸು.
  • ಆಕ್ರಮಣ; ದಾಳಿ; ಮೇಲೆ ಬೀಳುವುದು; ಹೋರಾಡಲು ತಾನಾಗಿ ಮುನ್ನುಗ್ಗುವುದು: the most effective defence is offence ಆಕ್ರಮಣವೇ ಅತ್ಯಂತ ಪರಿಣಾಮಕಾರಿಯಾದ (ಸ್ವ)ರಕ್ಷಣೆ; ತಾನಾಗಿ ಮೊದಲು ಆಕ್ರಮಣ ಮಾಡುವುದೇ ಅತ್ಯಂತ ಪರಿಣಾಮಕಾರಿ ರಕ್ಷಣೆ.
  • ಕಿರಿಕಿರಿ; ಕಿರುಕುಳ; ಅಪಚಾರ; ಕಾಟ: give offence to ಕಿರಿಕಿರಿಯನ್ನು ಉಂಟುಮಾಡು; ಕಾಟ ಕೊಡು.
  • ಮುನಿಸು; ಸಿಟ್ಟು; ಅಸಮಾಧಾನ: cannot be done without offence ಅಸಮಾಧಾನ ಪಡಿಸದೆ ಅದನ್ನು ಮಾಡುವುದು ಸಾಧ್ಯವಿಲ್ಲ. his words have given offence at court ನ್ಯಾಯಾಲಯದಲ್ಲಿ ಅವನ ಮಾತುಗಳು ಸಿಟ್ಟು ಬರುವಂತೆ ಮಾಡಿವೆ.


  • logo