logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lanneret
ನಾಮವಾಚಕ
(ಹೆಣ್ಣು ಡೇಗೆಗಿಂತ ಚಿಕ್ಕದಾಗಿರುವ) ಗಂಡು – ಡೇಗೆ, ಗಿಡುಗ ಯಾ ಸಾಳ್ವ.

lanolin
ನಾಮವಾಚಕ
ಲ್ಯಾನೊಲಿನ್‍; (ಕುರಿಯ) ತುಪ್ಪಟದ ಕೊಬ್ಬು; ಉಣ್ಣೆಕೊಬ್ಬು; ಮುಲಾಮುಗಳ ತಯಾರಿಕೆಯಲ್ಲಿ ಬಳಸುವ, ಕುರಿಯ ತುಪ್ಪಟದಿಂದ ತೆಗೆಯುವ, ಒಂದು ಬಗೆಯ ಮೇದಸ್ಸು, ಕೊಬ್ಬು, ನೆಣ.

lansquenet
ನಾಮವಾಚಕ
  • ಜರ್ಮನಿಯ ಮೂಲದ ಒಂದು ಬಗೆಯ ಇಸ್ಪೀಟಾಟ.
  • 16–17ನೇ ಶತಮಾನದ, ಜರ್ಮನ್‍ ಕೂಲಿ ಸೈನಿಕ.

  • lantana
    ನಾಮವಾಚಕ
    ಲ್ಯಾಂಟಾನ; ಚದುರಂಗ; ಸಾಮಾನ್ಯವಾಗಿ ಹಳದಿ ಯಾ ಕಿತ್ತಳೆ ಬಣ್ಣದ ಹೂಗಳನ್ನು ಬಿಡುವ, ಒಂದು ನಿತ್ಯ ಹಸಿರು ಗಿಡ.

    lantern
    ನಾಮವಾಚಕ ಪದಗುಚ್ಛ
    parish lantern (ಬ್ರಿಟಿಷ್‍ ಪ್ರಯೋಗ) ಚಂದ್ರ.
  • ಲಾಂದ್ರ; ಲಾಟೀನು:
    1. ಕಂದೀಲು; ಚಿಮಣಿ ದೀಪ: ಗಾಳಿ ತಡೆಯುವಂತೆ ಮುಖ್ಯವಾಗಿ ಗಾಜಿನ ಬುರುಡೆ ಯಾ ಚಿಮಣಿ ಮುಚ್ಚಿದ ದೀಪ.
    2. ವಿದ್ಯುತ್‍ ಮೊದಲಾದವುಗಳ ಅದೇ ಬಗೆಯ ದೀಪ.
  • ಚಿಮಣಿ; ದೀಪದ ಸುತ್ತ ಹಾಕಿರುವ ಗಾಜು ಮೊದಲಾದವುಗಳ ಪಾರದರ್ಶಕ ಕೋಶ, ಬುರುಡೆ.
  • ಬೆಳಕು ಮಾಳಿಗೆ; ಬೆಳಕು ಗೂಡು; ಕೊಠಡಿಯ ಮಾಳಿಗೆಯಲ್ಲಿ ಯಾ ಗುಮ್ಮಟದ ಮೇಲ್ಭಾಗ ಮತ್ತು ಪಕ್ಕಗಳಲ್ಲಿ ಗಾಜು ಹಲಗೆಗಳ ಮೂಲಕ ಒಳಕ್ಕೆ ಬೆಳಕು ಬೀಳುವಂತೆ ನಿರ್ಮಿಸಿರುವ ಬೆಳಕಿನ ಗೂಡು.
  • ಗಾಳಿಗೂಡು; ಗಾಳಿ, ಬೆಳಕು, ಮೊದಲಾದವುಗಳಿಗಾಗಿ ನಿರ್ಮಿಸುವ ಇಂಥದೇ ರಚನೆ.
  • (ಕಡಲಿನ) ದೀಪಸ್ತಂಭದ ಯಾ ದೀಪಗೃಹದ ಬೆಳಕಿನ ಕೋಣೆ.
  • ಬೆಳಕು ಮೂತಿ; ಲಾಂದ್ರದ ಕೀಟವೆಂಬ ಜಾತಿಯ ಕೀಟಗಳ ಪ್ರಕಾಶಮಯವಾದ ಉದ್ದನೆಯ ಮೂತಿ.
  • = magic lantern.

  • lantern fish
    ನಾಮವಾಚಕ
    ಲಾಟೀನು ಮೀನು; ಮಿಕ್ಟೊಹಿಡೇ ವಂಶಕ್ಕೆ ಸೇರಿದ, ತಲೆ ಮತ್ತು ದೇಹದ ಅವಯವಗಳ ಮೇಲೆ ಹೊಳೆಯುವ ಅಂಗಗಳುಳ್ಳ, ಯಾವುದೇ ಆಳ ಸಮುದ್ರದ ಮೀನು.

    lantern jaws
    ನಾಮವಾಚಕ
    ಲಾಟೀನು ದವಡೆಗಳು; ಲಾಂದ್ರ, ಕಂದೀಲು – ದವಡೆಗಳು; ಮುಖ ಬತ್ತಿ ಹೋದಂತೆ ತೋರಿಸುವ, ಉದ್ದವೂ ತೆಳುವೂ ಆದ ದವಡೆ ಮೂಳೆಗಳು.

    lantern-fly
    ನಾಮವಾಚಕ
    ಲಾಂದ್ರ ಕೀಟ; ದೀಪದ ಹುಳು; ಲಾಟೀನು ಹುಳು; ಹುಲ್ಗೋರಿಡೇ ವಂಶದ, ಹಿಂದೆ ಹೊಳೆಯುವುದೆಂದು ನಂಬಲಾಗಿದ್ದ ಒಂದು ಕೀಟ.

    lantern-jawed
    ಗುಣವಾಚಕ
    ಲಾಟೀನು ದವಡೆಯುಳ್ಳ; ಮುಖ ಬತ್ತಿ ಹೋದಂತೆ ತೋರಿಸುವ, ಉದ್ದವೂ ತೆಳುವೂ ಆದ ದವಡೆ ಮೂಳೆಗಳುಳ್ಳ.

    lantern-slide
    ನಾಮವಾಚಕ
    ಮಾಯಾದೀಪದ (magic lantern) ಮೂಲಕ ಪ್ರಕ್ಷೇಪಿಸಲು ಬಳಸುವ ಸ್ಲೈಡು, ಜಾರುಫಲಕ.


    logo