ಪ್ರತಿರಕ್ಷಾ ಶಾಸ್ತ್ರ; ರೋಗರಕ್ಷಾ ಶಾಸ್ತ್ರ; ಸೋಂಕು, ರೋಗ, ಮೊದಲಾದವುಗಳಿಂದ ರಕ್ಷಿಸುವ ವಿಧಾನಗಳನ್ನು ಕುರಿತ ಶಾಸ್ತ್ರ.
immure
ಸಕರ್ಮಕ ಕ್ರಿಯಾಪದ
ಸೆರೆಯಲ್ಲಿಡು; ಬಂಧನದಲ್ಲಿಡು: a princess immured in a tower ಗೋಪುರದಲ್ಲಿ ಸೆರೆಯಲ್ಲಿಟ್ಟ ರಾಜಕುಮಾರಿ.
(ಹೊರಸಂಪರ್ಕವಿಲ್ಲದಂತೆ) ಕೂಡಿಹಾಕಿಕೊ; ಒಳಗಡೆ ಸೇರಿಕೊ; ಅಂತರ್ನಿಹಿತನಾಗು; ಸುತ್ತಲೂ ಗೋಡೆ ಕಟ್ಟಿಕೊ: scientists who immure themselves in special research ವಿಶೇಷ ಸಂಶೋಧನೆ(ಯೆಂಬ ಗೋಡೆಗಳ) ಒಳಗಡೆ ಸೇರಿಕೊಂಡಿರುವ ವಿಜ್ಞಾನಿಗಳು.
immurement
ನಾಮವಾಚಕ
ಸೆರೆಯಲ್ಲಿಡುವಿಕೆ; ಬಂಧನದಲ್ಲಿಡುವಿಕೆ.
ಒಳಗಡೆ ಸೇರಿಕೊಳ್ಳುವಿಕೆ.
ಸೆರೆ; ಬಂಧನ.
immutability
ನಾಮವಾಚಕ
ಮಾರ್ಪಾಡಾಗದಿರುವಿಕೆ; ಅಪರಿವರ್ತನೀಯತೆ; ಅಪರಿಣಾಮತೆ; ವ್ಯತ್ಯಾಸಮಾಡಲಾಗದಿರುವಿಕೆ; ಬದಲಾವಣೆ ಹೊಂದದಿರುವುದು.
ನಿರ್ವಿಕಲ್ಪತೆ; ನಿರ್ವಿಕಾರತೆ; ಅವಿಕಾರತೆ.
immutable
ಗುಣವಾಚಕ
ಮಾರ್ಪಾಟಾಗದ; ಅಪರಿವರ್ತನೀಯ; ಅಪರಿಣಾಮಿ; ವ್ಯತ್ಯಾಸ ಮಾಡಲಾಗದ; ಬದಲಾವಣೆ ಹೊಂದದ: immutable laws of nature ಅಪರಿವರ್ತನೀಯ ಪ್ರಕೃತಿ ನಿಯಮಗಳು.
ನಿರ್ವಿಕಲ್ಪ; ನಿರ್ವಿಕಾರ; ಅವಿಕಾರ್ಯ; ಬೇರೆ ಬೇರೆ ಸಂದರ್ಭಗಳಲ್ಲಿ ಬದಲಾವಣೆಗೆ ಅವಕಾಶವಿಲ್ಲದ.
immutably
ಕ್ರಿಯಾವಿಶೇಷಣ
ಅಪರಿವರ್ತನೀಯವಾಗಿ; ಮಾರ್ಪಾಟಾಗದ ರೀತಿಯಲ್ಲಿ; ಬದಲಾವಣೆ ಹೊಂದದಂತೆ; ವ್ಯತ್ಯಾಸ ಮಾಡಲಾಗದಂತೆ.