logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

camp
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ನುಡಿಗಟ್ಟು
ಆಡಂಬರದಿಂದ ಯಾ ಕೃತಕ ರೀತಿಯಲ್ಲಿ–ಮಾಡು, ಆಡು. camp it up ಅತ್ಯಾಡಂಬರ ತೋರಿಸು; ಅತಿ ಮಾಡು.
  • ಕೃತಕವಾಗಿ ಯಾ ಅಸಹಜವಾಗಿ–ವರ್ತಿಸು, ಮಾತಾಡು.
  • ಅತ್ಯಾಡಂಬರ ತೋರಿಸು.
  • ಲಘುವಾಗಿ ಯಾ ಚಮತ್ಕಾರವಾಗಿ–ವರ್ತಿಸು, ಮಾತನಾಡು.

  • camp colour
    ನಾಮವಾಚಕ
    ಬೀಡುಬಾವುಟ; ಪಾಳೆಯ ಪತಾಕೆ; ಶಿಬಿರ ಗಡಿಬಾವುಟ; ಶಿಬಿರದ ಎಲ್ಲೆ ಗುರುತಿಸುವ ಬಾವುಟ.

    camp cot
    ನಾಮವಾಚಕ
    ಶಿಬಿರಮಂಚ; ಕ್ಯಾಂಪ್‍ಮಂಚ; ಮಡಚಿ ಒಯ್ಯಬಹುದಾದ ಹಗುರ ಮಂಚ.

    camp-bed
    ನಾಮವಾಚಕ
    ಮೊಕ್ಕಾಂ ಹಾಸಿಗೆ; ಬೀಡುಹಾಸಿಗೆ; ಕ್ಯಾಂಪುಹಾಸಿಗೆ; ಮಡಚಿ ಒಯ್ಯಬಹುದಾದ, ಚಿಕ್ಕ, ಹಗುರ ಹಾಸಿಗೆ.

    camp-chair
    ನಾಮವಾಚಕ
    ಬಿಡಾರ ಕುರ್ಚಿ; ಕ್ಯಾಂಪು ಕುರ್ಚಿ; ಮಡಚಿ ಒಯ್ಯಬಹುದಾದ ಹಗುರ ಕುರ್ಚಿ.

    camp-fever
    ನಾಮವಾಚಕ
    ಶಿಬಿರಜ್ವರ; ಸೋಂಕುಜ್ವರ (ಮುಖ್ಯವಾಗಿ ಟೈಹಸ್‍).

    camp-fire
    ನಾಮವಾಚಕ
  • ಶಿಬಿರಾಗ್ನಿ; ಬಯಲುಬೆಂಕಿ; ಬಯಲುಕಿಚ್ಚು; ಕ್ಯಾಂಪಿನಲ್ಲಿ ಹೊತ್ತಿಸುವ ಬೆಂಕಿ.
  • ಪುನರ್ಮಿಲನ; ಸೈನಿಕರು, ಸ್ಕೌಟುಗಳು ಮೊದಲಾದವರು ಪುನಃ ಒಟ್ಟು ಸೇರುವುದು.

  • camp-fire girl
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಶಿಬಿರಬಾಲಿಕೆ; 7 ರಿಂದ 18 ವರ್ಷಗಳೊಳಗಿನ ಹುಡುಗಿಯರಲ್ಲಿ ಒಳ್ಳೆಯ ಶೀಲ, ಆರೋಗ್ಯ ಮತ್ತು ಪೌರಪ್ರಜ್ಞೆ ಬೆಳೆಸಲು ರಚಿತವಾದ ಸಂಘದ–ಸದಸ್ಯೆ, ಬಾಲಕಿ.

    camp-follower
    ನಾಮವಾಚಕ
  • ಸೇನಾಸೇವಕ; ಸೈನಿಕನಲ್ಲದ ಸೇನಾನುಚರ; ಸೇನೆಯ ಹಿಂಬಾಲಕ.
  • (ಯಾವುದೇ ವರ್ಗದ ಯಾ ಸಿದ್ಧಾಂತದ) ಅನುಯಾಯಿ; ಹಿಂಬಾಲಕ.

  • camp-meeting
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಶಿಬಿರ–ಧರ್ಮಸಭೆ, ಗೋಷ್ಠಿ; ಊರಿನ ಹೊರಗೆ ಬಯಲು ಯಾ ಡೇರೆಗಳಲ್ಲಿ ಹಲವು ದಿನ ನಡೆಯುವ ಧಾರ್ಮಿಕ ಸಭೆ.


    logo