logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

balsam apple
ನಾಮವಾಚಕ
ವಾಸನೆ, ಸುಗಂಧ – ಸೇಬು:
  • ಬಣ್ಣಬಣ್ಣದ ಕಾಯಿ ಬಿಡುವ, ಸೋರೆಯಂಥ ಹಬ್ಬುವ ಬಳ್ಳಿ.
  • ಕೆಂಪು ಯಾ ಕಿತ್ತಳೆ ಬಣ್ಣದ, ಗಂಟುಗಂಟಾದ ಸುಗಂಧ ಸೇಬಿನ ಹಣ್ಣು.

  • balsam fir
    ನಾಮವಾಚಕ
  • ವಾಸನೆ, ಸುಗಂಧ – ಹರ್‍ಮರ; ಬಾಲ್ಸಮನ್ನು ಕೊಡುವ, ಉತ್ತರ ಅಮೆರಿಚದ ಹರ್‍ಮರ.
  • ಈ ಮರದ ದಾರು.
  • ಬೇರೆ ಯಾವುದೇ ಹರ್‍ಮರ.

  • balsam poplar
    ನಾಮವಾಚಕ
    ವಾಸನೆ, ಸುಗಂಧ – ಪಾಪ್ಲರ್‍; ಗುಗ್ಗುಳ, ಮೊದಲಾದವನ್ನು ಕೊಡುವ, ನೆರಳು ಕೊಡಲು ಬೆಳೆಸುವ, ಸುಗಂಧಯುಕ್ತ ರಾಳವು ದಪ್ಪವಾಗಿ ಅಂಟಿಕೊಂಡಿರುವ ಮೊಗ್ಗುಗಳುಳ್ಳ, ಉತ್ತರ ಅಮೆರಿಕದ ಮರ.

    balsamic
    ಗುಣವಾಚಕ
  • ಬಾಲ್ಸಮ್‍ನ; ಬಾಲ್ಸಮ್‍ನಂಥ.
  • ಬಾಲ್ಸಮ್‍ ಕೊಡುವ.
  • ಸುವಾಸನೆಯ; ಸುಗಂಧದ; ಬಾಲ್ಸಮ್‍ ವಾಸನೆಯಿರುವ.
  • (ಬಾಲ್ಸಮ್‍ನಂತೆ) ವಾಸಿಮಾಡುವ; ಆರೋಗ್ಯಕರ; ಮತ್ತೆ ಚೈತನ್ಯ ತುಂಬುವ.
  • ಹಿತಕರ.

  • balsamiferous
    ಗುಣವಾಚಕ
    ಬಾಲ್ಸಮ್‍ ಕೊಡುವ; ಗುಗ್ಗುಳ, ಲೋಬಾನ, ಮೊದಲಾದವುಗಳನ್ನು ಕೊಡುವ.

    balsamy
    ಗುಣವಾಚಕ
    (ಸುವಾಸನೆ ಮೊದಲಾದವುಗಳಲ್ಲಿ) ಬಾಲ್ಸಮ್‍ನಂಥ; ಗುಗ್ಗುಳ, ಧೂಪ ಮೊದಲಾದವುಗಳಂಥ.

    Baltic
    ನಾಮವಾಚಕ
  • = Baltic Sea
  • ಬಾಲ್ಟಿಕ್‍ ಭಾಷೆಗಳು; ಲಿಥುಯೇನಿಯನ್‍, ಲೆಟಿಷ್‍ ಮೊದಲಾದವುಗಳನ್ನೊಳಗೊಂಡ ಇಂಡೋ ಯೂರೋಪಿಯನ್‍ ಭಾಷಾವರ್ಗ.

  • Baltic
    ಗುಣವಾಚಕ
    ಬಾಲ್ಟಿಕ್‍:
  • ಬಾಲ್ಟಿಕ್‍ ಭಾಷಾವರ್ಗದ, ಅದಕ್ಕೆ ಸಂಬಂಧಿಸಿದ.
  • ಬಾಲ್ಟಿಕ್‍ ಸಮುದ್ರದ, ಅದರ ಹತ್ತಿರ ಯಾ ಮೇಲೆ.

  • Baltic Sea
    ನಾಮವಾಚಕ
    ಬಾಲ್ಟಿಕ್‍ ಸಮುದ್ರ; ಈಶಾನ್ಯ ಯೂರೋಪಿನ, ಹೆಚ್ಚು ಕಡಮೆ ನೆಲದಿಂದ ಆವೃತವಾದ ಸಮುದ್ರ.

    baltimore
    ನಾಮವಾಚಕ
    ಬಾಲ್ಟಿಮೋರ್‍:
  • ಉತ್ತರ ಅಮೆರಿಚದ ಕಿತ್ತಳೆ ಹಾಗೂ ಕಪ್ಪು ಬಣ್ಣದ, ಮೈನಾಜಾತಿಯ ಹಕ್ಕಿ.
  • ಸಾಮಾನ್ಯವಾಗಿ ಈಶಾನ್ಯ ಅಮೆರಿಕದಲ್ಲಿ ಇರುವ ಕಿತ್ತಳೆ, ಕೆಂಪು, ಹಳದಿ ಯಾ ಬಿಳಿ ಚುಕ್ಕೆಗಳುಳ್ಳ ಕಪ್ಪು ಬಣ್ಣದ ಚಿಟ್ಟೆ.


  • logo