logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

off-peak
ಗುಣವಾಚಕ
ಅತಿ ಒತ್ತಡದ ಸಮಯದ್ದಲ್ಲದ; ಅತಿಯಾದ ಬೇಡಿಕೆಯಿಲ್ಲದ ಸಮಯದಲ್ಲಿ–ಬಳಸುವ ಯಾ ಬಳಸಲು ಉದ್ದೇಶಿಸಿದ.

off-piste
ಗುಣವಾಚಕ
(ಹಿಮದ ಮೇಲೆ ಗಾಲಿ ಪಾದರಕ್ಷೆಗಳಿಂದ ಜಾರುವ ಆಟದ ವಿಷಯದಲ್ಲಿ) ಸಿದ್ಧಗೊಳಿಸಿದ ಜಾರುಮಾರ್ಗಗಳಿಂದಾಚಿನ.

off-price
ಗುಣವಾಚಕ
(ಅಮೆರಿಕನ್‍ ಪ್ರಯೋಗ) ಸೋಡಿ ಸರಕಿನ; ಸೋವಿ ಸಾಮಾನಿನ; ತಯಾರಕನು ಶಿಫಾರಸು ಮಾಡಿದ ಬೆಲೆಗಿಂತ ಕಡಮೆ ಬೆಲೆಯಲ್ಲಿ ಮಾರುವ ಸರಕಿಗೆ ಸಂಬಂಧಿಸಿದ.

off-putting
ಗುಣವಾಚಕ
(ಬ್ರಿಟಿಷ್‍ ಪ್ರಯೋಗ) (ಆಡುಮಾತು)
  • ಚಿತ್ತಕ್ಷೋಭಕ; ಮನಸ್ಸು ಕದಡುವ.
  • ದೂರವಾಗಿಸುವ; ದೂರಹೋಗುವಂತೆ ಮಾಡುವ.

  • off-road
    ಗುಣವಾಚಕ
  • ರಸ್ತೆಗೆ ದೂರವಾಗಿರುವ ಹಳ್ಳತಿಟ್ಟಿನ ಭೂಮಿಯ, ಪ್ರದೇಶದ.
  • (ವಾಹನ ಮೊದಲಾದವುಗಳ ವಿಷಯದಲ್ಲಿ) ಹಳ್ಳಿಗಾಡಿನ ರಸ್ತೆಗಳಲ್ಲಿ, ಕಾಡುಮೇಡುಗಳಲ್ಲಿ ಸಂಚರಿಸಲು ನಿರ್ಮಿಸಿದ, ರೂಪಿಸಿದ.

  • off-saddle
    ಸಕರ್ಮಕ ಕ್ರಿಯಾಪದ
    = offload.

    off-season
    ನಾಮವಾಚಕ
    ಅಕಾಲ; ಅಸಮಯ; ವ್ಯಾಪಾರ ಮೊದಲಾದವು ಮಂದವಾಗಿರುವ ಕಾಲ.

    off-stage
    ಗುಣವಾಚಕ
    ನೇಪಥ್ಯದ; ರಂಗಭೂಮಿಯ ಮೇಲಲ್ಲದ, ಆದ್ದರಿಂದಲೇ ಪ್ರೇಕ್ಷಕರಿಗೆ ಏನೂ ಕಾಣದ ಯಾ ಕೇಳಿಸದ.

    off-stage
    ಕ್ರಿಯಾವಿಶೇಷಣ
    ನೇಪಥ್ಯದಲ್ಲಿ; ರಂಗಭೂಮಿಯಾಚೆ; ರಂಗಭೂಮಿಯ ಮೇಲಲ್ಲದೆ, ಅದ್ದರಿಂದಲೇ ಪ್ರೇಕ್ಷಕರಿಗೆ ಏನೂಕಾಣದೆ ಯಾ ಕೇಳಿಸದೆ.

    off-street
    ಕ್ರಿಯಾವಿಶೇಷಣ
    (ಮುಖ್ಯವಾಗಿ ವಾಹನ ನಿಲುಗಡೆಯ ಯಾ ಪಾರ್ಕ್‍ ಮಾಡುವ ವಾಹನಗಳ ವಿಷಯದಲ್ಲಿ) ರಸ್ತೆಯಾಚೆ; ರಸ್ತೆಯಲ್ಲಲ್ಲದೆ.


    logo