logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

laniary
ನಾಮವಾಚಕ
(ಬಹುವಚನ laniaries). ಕೋರೆಹಲ್ಲು; ಸಿಗಿಯಲು, ಹರಿಯಲು, ಸೀಳಲು ಅನುಕೂಲವಾದ ಹಲ್ಲು.

laniferous
ಗುಣವಾಚಕ
ತುಪ್ಪಟ ಬೆಳೆಯುವ; ಉಣ್ಣೆ ಕೊಡುವ.

lanigerous
ಗುಣವಾಚಕ
= laniferous.

lank
ಗುಣವಾಚಕ
  • (ಹುಲ್ಲು ಮೊದಲಾದವುಗಳ ವಿಷಯದಲ್ಲಿ) ನೀಳವಾಗಿ ಜೋತಿರುವ; ಉದ್ದವಾಗಿಯೂ ಜೋಲುತ್ತಲೂ ಇರುವ.
  • (ಕೂದಲು ಮೊದಲಾದವುಗಳ ವಿಷಯದಲ್ಲಿ) ನೀಳಮೃದು; ಗುಂಗುರಿಲ್ಲದ; ನೇರವೂ ಮೆತುವೂ ಆಗಿರುವ.
  • ಉದ್ದನೆ ಸಣಕಲ; ನೀಳ ಬಡಕಲ; ಉದ್ದ ಯಾ ಎತ್ತರವಾಗಿಯೂ, ಸಣಕಲಾಗಿಯೂ ಇರುವ.
  • ಮುದುಡಿದ; ಚಿರುಟಿದ.
  • ಬಡಕಲಾದ; ಸಣಕಲಾದ; ಮೈತುಂಬಿಲ್ಲದ.

  • lankily
    ಕ್ರಿಯಾವಿಶೇಷಣ
    (ಮನುಷ್ಯ, ಕೈಕಾಲುಗಳು, ಮೊದಲಾದವುಗಳ ವಿಷಯದಲ್ಲಿ) ನೀಳಬಡಕಲಾಗಿ; ಉದ್ದನೆ ಸಣಕಲಾಗಿ; ವಿಕಾರವಾಗಿ ಉದ್ದವಾಗಿಯೂ ಸಣಕಲಾಗಿಯೂ ಇರುವಂತೆ.

    lankiness
    ನಾಮವಾಚಕ
    (ಮನುಷ್ಯ, ಕೈ ಕಾಲುಗಳು, ಮೊದಲಾದವುಗಳ ವಿಷಯದಲ್ಲಿ) ವಿಕಾರವಾಗಿ ಉದ್ದವಾಗಿಯೂ, ಸಣಕಲಾಗಿಯೂ ಇರುವಿಕೆ.

    lankly
    ಕ್ರಿಯಾವಿಶೇಷಣ
  • (ಹುಲ್ಲು ಮೊದಲಾದವುಗಳ ವಿಷಯದಲ್ಲಿ) ಉದ್ದವಾಗಿಯೂ ಜೋಲುತ್ತಲೂ ಇರುವಂತೆ.
  • (ಕೂದಲಿನ ವಿಷಯದಲ್ಲಿ) ಗುಂಗುರಿಲ್ಲದೆ ನೇರವಾಗಿಯೂ ಮೆತುವಾಗಿಯೂ ಇರುವಂತೆ.
  • ಉದ್ದವಾಗಿಯೂ ಸಣಕಲಾಗಿಯೂ ಇರುವಂತೆ.
  • ಮುದುಡಿದಂತೆ.
  • ಬಡಕಲಾಗಿ; ಸಣಕಲಾಗಿ.

  • lankness
    ನಾಮವಾಚಕ
  • (ಹುಲ್ಲು ಮೊದಲಾದವುಗಳ ವಿಷಯದಲ್ಲಿ) ಉದ್ದವಾಗಿಯೂ ಜೋಲುತ್ತಲೂ ಇರುವಿಕೆ.
  • (ಕೂದಲಿನ ವಿಷಯದಲ್ಲಿ) ಗುಂಗುರಿಲ್ಲದೆ ನೇರವಾಗಿ, ಮೆತುವಾಗಿ ಇರುವಿಕೆ.
  • ಉದ್ದವಾಗಿಯೂ ಸಣಕಲಾಗಿಯೂ ಇರುವಿಕೆ.
  • ಮುದುಡಿರುವಿಕೆ.
  • ಬಡಕಲಾಗಿರುವಿಕೆ; ಸಣಕಲು(ತನ).

  • lanky
    ಗುಣವಾಚಕ
    (ಮನುಷ್ಯ, ಕೈಕಾಲುಗಳು, ಮೊದಲಾದವುಗಳ ವಿಷಯದಲ್ಲಿ) ವಿಕಾರವಾಗಿ ಉದ್ದವಾಗಿಯೂ ಸಣಕಲಾಗಿಯೂ ಇರುವ; ತೀರ ಬಡಕಲಾಗಿ, ಉದ್ದವಾಗಿ, ಅಂದವಿಲ್ಲದೆ ಇರುವ.

    lanner
    ನಾಮವಾಚಕ
    ದಕ್ಷಿಣ ಯೂರೋಪಿನ, ಹಾಲ್ಕೋ ಬೈಯಾರ್ಮಿಕಸ್‍ ಕುಲಕ್ಕೆ ಸೇರಿದ, (ಮುಖ್ಯವಾಗಿ ಹೆಣ್ಣು) ಡೇಗೆ, ಗಿಡುಗ ಯಾ ಸಾಳ್ವ.


    logo