(ವಿಷ, ರೋಗದ ಸೋಂಕು, ಮೊದಲಾದವುಗಳಿಂದ) ರಕ್ಷಣೆ ಪಡೆದಿರುವ; ಪ್ರತಿರಕ್ಷಿತ: immune from smallpox as the result of vaccination ದೇವಿ ಹಾಕಿರುವುದರ ಪರಿಣಾಮವಾಗಿ ಸಿಡುಬು ರೋಗದಿಂದ ಪ್ರತಿರಕ್ಷಿತನಾದ.
(ಟೀಕೆ, ಶಿಕ್ಷೆ, ಮೊದಲಾದವುಗಳಿಂದ) ವಿಮುಕ್ತ; ವಿನಾಯಿತಿ ಪಡೆದ: immune from criticism ಬಹಿರಂಗ ಟೀಕೆಯಿಂದ ವಿನಾಯಿತಿ ಪಡೆದ.
ಪ್ರತಿರಕ್ಷಣೆಗೆ ಸಂಬಂಧಿಸಿದ: immune mechanism ಪ್ರತಿರಕ್ಷಣ ರಚನೆ.
immune
ನಾಮವಾಚಕ
ಪ್ರತಿರಕ್ಷಿತ; ವಿಷ, ರೋಗದ ಸೋಂಕು, ಮೊದಲಾದವುಗಳಿಂದ ರಕ್ಷಿತನಾದವನು.
ಬಿಡುಗಡೆ; ವಿಮುಕ್ತಿ: no one has assured immunity from error ಯಾರಿಗೂ ದೋಷದಿಂದ ಖಾತ್ರಿಯಾದ ಬಿಡುಗಡೆಯಿಲ್ಲ.
(ರೋಗದ ಸೋಂಕು ಮೊದಲಾದವುಗಳಿಂದ) ರಕ್ಷಣೆ (ಪಡೆದಿರುವುದು); ಪ್ರತಿರಕ್ಷೆ; ವಿನಾಯಿತಿ: the immunity of vipers from their own poison ತಮ್ಮದೇ ವಿಷದಿಂದ ಪ್ರತಿರಕ್ಷೆಯುಳ್ಳ ವಿಷಸರ್ಪಗಳು.
ಪ್ರತಿರಕ್ಷೆ; ಪ್ರತಿರಕ್ಷಕ ಗುಣ; ಸೋಂಕನ್ನು ತಡೆದು ಅದರಿಂದ ಪಾರಾಗುವ ಜೀವಿಗಳ ಗುಣ.
immunization
ನಾಮವಾಚಕ
ಪ್ರತಿರಕ್ಷಣೆ; ಸೋಂಕು ತಟ್ಟದಂತೆ ರಕ್ಷಣೆ ಕೊಡುವಿಕೆ.
immunize
ಸಕರ್ಮಕ ಕ್ರಿಯಾಪದ
(ಸೋಂಕು ಮೊದಲಾದವು ತಟ್ಟದಂತೆ) ರಕ್ಷೆ ಕೊಡು; ಪ್ರತಿರಕ್ಷಿಸು.
immuno-
ಸಮಾಸ ಪೂರ್ವಪದ
ಪ್ರತಿರಕ್ಷಾ-; ಸೋಂಕಿಗೆ ಪ್ರತಿರಕ್ಷೆ ಎನ್ನುವ ಅರ್ಥದಲ್ಲಿ ಬಳಸುವ ಸಮಾಸ ಪೂರ್ವಪದ: immuno-chemistry ಪ್ರತಿರಕ್ಷಾ ರಸಾಯನ ವಿಜ್ಞಾನ.