ಕ್ಯಾಮಮೈಲು; ಸುವಾಸನೆಯುಳ್ಳ ಎಲೆ ಮತ್ತು ಹೂ ಬಿಡುವ, ಆಂಥೆಮಿಸ್ ಯಾ ಮ್ಯಾಟ್ರಿಕೇರಿಯ ಕುಲಕ್ಕೆ ಸೇರಿದ, ಔಷಧವಾಗಿ ಬಳಸುವ, ಯೂರೋಪಿನ ಒಂದು ಗಿಡ.
ಕ್ಯಾಮಮೈಲ್ ಟೀ; ಕ್ಯಾಮಮೈಲ್ ಹೂಗಳಿಂದ ಬಟ್ಟಿಯಿಳಿಸಿದ ಸಾರ.
ನೇಪಲ್ಸಿನ ಗುಪ್ತಸಂಘ; ಶಕ್ತಿಶಾಲಿ ರಾಜಕೀಯ ಸಂಸ್ಥೆಯಾಗಿ ಮಾರ್ಪಟ್ಟ, ದರೋಡೆ, ಒಳಸಂಚು ಮೊದಲಾದವುಗಳಿಗೆ ಪ್ರಸಿದ್ಧವಾದ ಗುಪ್ತಸಂಘ.
ಮರೆ; ಸುಳುಹು ಮರೆ; ಫಿರಂಗಿ, ಹಡಗು, ಮೊದಲಾದ ಸಾಮಗ್ರಿಗಳನ್ನು ಬಣ್ಣ ಬಳಿದೋ, ಕಪ್ಪು ಹಿಡಿಸಿದ ಗಾಜಿನಿಂದಲೋ, ಮರದ ರೆಂಬೆಗಳಿಂದಲೋ, ಹೊಗೆಯಿಂದಲೋ ಮರೆಮಾಡುವುದು.
ಮೋಸ; ವೇಷ; ಛದ್ಮ; ನಟನೆ; ಕಣ್ಣಿಗೆ ಮಣ್ಣೆರಚುವುದು.
(ಸೈನ್ಯ) ಬಣ್ಣ ಬಳಿದೋ, ಎಲೆ ಕೊಂಬೆಗಳಿಂದ ಮರೆ ಮಾಡಿಯೋ, ಹೊಗೆ ಹಿಡಿಸುವುದರಿಂದಲೋ, ಫಿರಂಗಿ, ಹಡಗು ಮೊದಲಾದವುಗಳನ್ನು ಮರೆಮಾಡು ಯಾ ಅವಿಸು.
ಕಣ್ಣಿಗೆ ಮಣ್ಣೆರಚು; ವೇಷಕಟ್ಟು; ನಟನೆ ಮಾಡು.
ಭೂಗತ ಸ್ಫೋಟನೆ; ಒಳಸಿಡಿತ; ಮೇಲ್ಮೈಯನ್ನು ಒಡೆಯದೆ, ಒಳಗೇ ಅನಿಲ ಹಾಗೂ ಹೊಗೆ ತುಂಬಿದ ಕುಳಿಯನ್ನು ಉಂಟುಮಾಡುವ, ಭೂಮಿಯ ಒಳಗಡೆ ಇಟ್ಟಿರುವ ಬಾಂಬು ಮೊದಲಾದವುಗಳ ಸಿಡಿತ.
ಒಳಸ್ಫೋಟಕುಳಿ; ನೆಲದೊಳಗೆ ಬಾಂಬು ಸಿಡಿದು ಉಂಟಾದ–ಕುಳಿ, ಗುಂಡಿ.
ಭೂಗತ ಸ್ಫೋಟಕ ಯಾ ಬಾಂಬು; ನೆಲದೊಳಗಿರುವ ಬಾಂಬು.
opposite camp ಎದುರು ಪಕ್ಷ; ಪ್ರತಿಪಕ್ಷ.
(ಸೈನಿಕರ) ಕ್ಯಾಂಪು; ಠಾಣ್ಯ; ಪಾಳೆಯ; ಶಿಬಿರ; ಬಿಡಾರ; ಗುಡಾರ; ಬಿಡದಿ; ಬೀಡು; ಸೈನಿಕರು ತಂಗಿರುವ ಯಾ ತರಬೇತು ಪಡೆಯುವ ಶಿಬಿರ.
(ಪ್ರಾಚೀನ ಪ್ರಯೋಗ) ದಂಡ ಯಾತ್ರೆಯಲ್ಲಿ ತೊಡಗಿರುವ ಸೈನ್ಯ.
ಸೈನಿಕ ಜೀವನ; ಮಿಲಿಟರಿ ಬಾಳು.
ಹಂಗಾಮಿ ಬೀಡು; ಮೊಕ್ಕಾಂ; ತಾಂಡ್ಯ; ಅಲೆಮಾರಿಗಳು, ಪ್ರಯಾಣಿಕರು, ಜಿಪ್ಸಿಗಳು, ಸ್ಕೌಟುಗಳು, ರಜೆಯ ಮೇಲಿರುವವರು ಮೊದಲಾದವರ ತಾತ್ಕಾಲಿಕ ಶಿಬಿರ.
ಬಿಡಾರ ಮಾಡುವುದು; ಬೀಡು ಹೂಡುವುದು.
ಬಿಡಾರಿಗಳು; ಶಿಬಿರಸ್ಥರು; ಬೀಡು ಬಿಟ್ಟಿರುವ ವ್ಯಕ್ತಿಗಳು.
(ದಕ್ಷಿಣ ಆಹ್ರಿಕಾದಲ್ಲಿ) (ಬೇಲಿ ಹಾಕಿ ಪ್ರತ್ಯೇಕಿಸಿರುವ) ಗೋಮಾಳ; ಮೇವುದಾಣ.
(ಒಂದು ಸಿದ್ಧಾಂತದ ಯಾ ಪಕ್ಷದ) ಹಿಂಬಾಲಕರು; ಅನುಯಾಯಿಗಳು.
ಪ್ರಾಚೀನ ಕೋಟೆಕೊತ್ತಳ; ಕೋಟೆ ಕಟ್ಟಿದ ಪ್ರದೇಶ.
ಪ್ರಾಚೀನ ಕೋಟೆ ಕೊತ್ತಳಗಳ ಅವಶೇಷಗಳು.
(ಆಸ್ಟ್ರೇಲಿಯ, ನ್ಯೂಸೀಲಂಡ್) (ಕುರಿ ಯಾ ದನಗಳ) ಮಾಳ.
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಪದಗುಚ್ಛ
(ಸೇನೆಯನ್ನು) ಶಿಬಿರ ಹೂಡಿಸು; ಬೀಡು ಬಿಡಿಸು; ದಂಡಿಳಿಸು. camp out = 2camp ಅಕರ್ಮಕ ಕ್ರಿಯಾಪದ \((3)\).
ಪಾಳೆಯ–ಹೂಡು, ಸ್ಥಾಪಿಸು; ಬೀಡು ಬಿಡು.
ಪಾಳೆಯದಲ್ಲಿ – ತಂಗು, ನೆಲಸು.
ಮೊಕ್ಕಾಂ ಮಾಡು; ತಾತ್ಕಾಲಿಕ ಶಿಬಿರದಲ್ಲಿ ಯಾ ಬಯಲಿನಲ್ಲಿ – ತಂಗು, ಇಳಿದುಕೊ, ಬಿಡಾರ ಹೂಡು.
(ಆಸ್ಟ್ರೇಲಿಯ, ನ್ಯೂಸೀಲಂಡ್) (ಕುರಿ, ದನಗಳ ವಿಷಯದಲ್ಲಿ) (ಮುಖ್ಯವಾಗಿ ವಿಶ್ರಾಂತಿಗಾಗಿ) ಮಂದೆಗೂಡು; ಗುಂಪಾಗು; ತಂಡವಾಗು.
ಕೃತಕವಾದ; ಅಸಹಜವಾದ; ಒಯ್ಯಾರದ; ನಾಟಕೀಯವಾದ.
ಹೆಣ್ಣಿಗತನದ.
ಸ್ವಲಿಂಗರತಿಯ; ಸ್ವಲಿಂಗಾಸಕ್ತಿಯ.
ಆಡಂಬರದ; ಅತಿಯಾದ; ಮಿತಿಮೀರಿದ.
ಅತಿವಿಚಿತ್ರವಾದ; ವಿಕಟವಾದ.
ಕೃತಕ ವರ್ತನೆ; ಅಸಹಜ ವರ್ತನೆ.
ಹೆಣ್ಣಿಗತನ.
ಸ್ವಲಿಂಗರತಿ.
ಆಡಂಬರದ–ವರ್ತನೆ, ನಡೆನುಡಿ.
ಅತಿವಿಚಿತ್ರವಾದ–ವರ್ತನೆ, ನಡೆನುಡಿ.