logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

balmoral
ನಾಮವಾಚಕ
  • ಲೇಸು ಬೂಟು; ದಾರ ಕಟ್ಟಿದ ಒಂದು ತೆರನ ಬೂಟು.
  • ಒಳ – ಲಂಗ, ಪಾವಡೆ.
  • (ಸ್ಕಾಟ್ಲಂಡಿನ ಕೆಲವು ಸೈನಿಕ ಪಡೆಗಳು ಧರಿಸುವ, ದುಂಡು ಹಾಗೂ ಚಪ್ಪಟೆಯಾದ) ಒಂದು ಬಗೆಯ ಟೋಪಿ.

  • balmy
    ಗುಣವಾಚಕ
  • (ಗುಗ್ಗುಳ, ಲೋಬಾನ, ಮೊದಲಾದ) ಸುಗಂಧದ್ರವ್ಯವನ್ನು ಕೊಡುವ.
  • ಸುವಾಸನೆಯ; ಸುಗಂಧ – ಉಳ್ಳ, ಸೂಸುವ; ಪರಿಮಳ ಬೀರುವ: balmy leaves ಪರಿಮಳ ಬೀರುವ ಎಲೆಗಳು.
  • (ಗಾಳಿ ಮೊದಲಾದವುಗಳ ವಿಷಯದಲ್ಲಿ) ಮೃದುವಾದ; ಮಂದವಾದ; ಹಿತಕರವಾದ; ಆಹ್ಲಾದದಾಯಕವಾದ: balmy breeze ಮಂದ(ವಾದ) ಮಾರುತ.
  • (ಗಾಯ ಮೊದಲಾದವುಗಳ) ಶಾಮಕ; ಉಪಶಮನ ಮಾಡುವ; ನೋವನ್ನು ನಿವಾರಿಸುವ.
  • (ರೂಪಕವಾಗಿ) (ಮನಸ್ಸು ಮೊದಲಾದವುಗಳ ವೇದನೆ, ಯಾತನೆಯನ್ನು) ಸಾಂತ್ವನಗೊಳುಸುವ; ಶಾಮಕ: the Buddha gave Kisagowtami his balmy message ಬುದ್ಧನು ಕಿಸಾಗೌತಮನಿಗೆ ಸಾಂತ್ವನಗೊಳಿಸುವ ಸಂದೇಶವನ್ನು ನೀಡಿದನು.
  • (ಅಶಿಷ್ಟ) ತಲೆ ಕೆಟ್ಟ; ಬುದ್ಧಿನೆಟ್ಟಗಿಲ್ಲದ.

  • balneal
    ಗುಣವಾಚಕ
    ಸ್ನಾನದ; ಈಹದ; ಸ್ನಾನಕ್ಕೆ ಯಾ ಸ್ನಾನದ ಮನೆಗೆ ಸಂಬಂಧಿಸಿದ.

    balneary
    ಗುಣವಾಚಕ
    = balneal.

    balneology
    ನಾಮವಾಚಕ
    ಈಹವಿದ್ಯೆ; ಸ್ನಾನಶಾಸ್ತ್ರ; ಸ್ನಾನದ ಮತ್ತು ಔಷಧದ ಗುಣವುಳ್ಳ ಚಿಲುಮೆಗಳ ವೈಜ್ಞಾನಿಕ ಅಧ್ಯಯನ.

    baloney
    ನಾಮವಾಚಕ
    = boloney.

    BALPA
    ಸಂಕ್ಷಿಪ್ತ
    British Air Line Pilots’ Association.

    balsa
    ನಾಮವಾಚಕ
  • (ಗಟ್ಟಿಯೂ, ಬಹಳ ಹಗುರವೂ ಆದ, ಉಷ್ಣವಲಯದ) ಬೆಂಡು, ಬಿರಟೆ – ಮರ.
  • (ಜೀವರಕ್ಷಕ ಪಟ್ಟಿ ಮೊದಲಾದವುಗಳಲ್ಲಿ ಬಳಸುವ) ಈ ಮರದ ಹಗುರವಾದ, ಗಟ್ಟಿಯಾದ ದಾರ.
  • (ಬೆಂಡುಮರದಿಂದಾದ) ತೆಪ್ಪ; ತೇಲುಮರ; ತೇಲುತೊಟ್ಟಿಲು.
  • (ಆಪತ್ತಿನಲ್ಲಿ ಬಳಸುವ ಯಾವುದೇ) ತೆಪ್ಪ.

  • balsa-wood
    ನಾಮವಾಚಕ
    = balsa(2).

    balsam
    ನಾಮವಾಚಕ ಪದಗುಚ್ಛ
  • = balm (1).
  • (ಮುಖ್ಯವಾಗಿ ಎಣ್ಣೆ ಯಾ ಟರ್ಪಂಟೈನ್‍ನಲ್ಲಿ ಕರಗಿಸಿ ಮಾಡಿದ) ಕೃತಕ – ಮುಲಾಮು, ಅಂಜನ.
  • (ಗುಗ್ಗುಲ ಮೊದಲಾದವುಗಳನ್ನು ಸೇರಿಸಿ ಮಾಡಿದ) ಸುವಾಸನೆ ಎಣ್ಣೆ; ಸುಗಂಧ ತೈಲ.
  • (ರೂಪಕವಾಗಿ) ಸಾಂತ್ವನಗೊಳಿಸುವಂಥದ್ದು; ಉಪಶಾಮಕ.
  • ಬಾಲ್ಸಮ್‍; ನೀರಿನಲ್ಲಿ ಕರಗದ ಆವಿಶೀಲ ತೈಲಗಳು ಮತ್ತು ರಾಳಗಳ ಮಿಶ್ರಣ.
  • ಗುಗ್ಗುಳ, ಧೂಪ, ಮೊದಲಾದವು ದೊರೆಯುವ ಮರ.
  • ಕಾಡು – ಕರ್ಣಕುಂಡಲ, ಕರ್ಣಕುಂಡಲ ಗಿಡ; ಗೌರೀ ಹೂವಿನ ಗಿಡ.


  • logo