(ಯಾವುದೇ ವಿದ್ಯೆ ಯಾ ಕಲೆಯಲ್ಲಿ) ಕೌಶಲ; ಕುಶಲತೆ; ನೈಪುಣ್ಯ; ಸಂಪನ್ನತೆ: painting is one of her accomplishments ಅವಳ ಕುಶಲತೆಗಳಲ್ಲಿ ಚಿತ್ರಕಲೆಯೂ ಒಂದು.
accompt
ಕ್ರಿಯಾಪದ
account ಪದದ ಪ್ರಾಚೀನ ರೂಪಾಂತರ.
accompt
ನಾಮವಾಚಕ
account ಪದದ ಪ್ರಾಚೀನ ರೂಪಾಂತರ.
accomptant
ನಾಮವಾಚಕ
accountant ಪದದ ಪ್ರಾಚೀನ ರೂಪಾಂತರ.
accord
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
(ಮುಖ್ಯವಾಗಿ ವಸ್ತುಗಳ ವಿಷಯದಲ್ಲಿ) ಹೊಂದಿಕೊಂಡಿರು; ಸಮರಸವಾಗಿರು; ಅನುಗುಣವಾಗಿರು: his behaviour does not accord with his principles ಅವನ ನಡವಳಿಕೆ ಅವನ ತತ್ತ್ವಗಳಿಗೆ ಅನುಗುಣವಾಗಿಲ್ಲ.
(ಸ್ವಾಗತ ಮೊದಲಾದವನ್ನು) ನೀಡು; ಕೊಡು: to accord welcome ಸ್ವಾಗತ ನೀಡು.
(ಪ್ರಶಸ್ತಿ ಮೊದಲಾದವನ್ನು) ಪ್ರದಾನ ಮಾಡು, ನೀಡು: the President accorded him an honorary title ಅಧ್ಯಕ್ಷರು ಆತನಿಗೆ ಗೌರವ ಬಿರುದನ್ನು ನೀಡಿದರು.
ಸರಿಹೊಂದಿಸು; ಅನುರೂಪಗೊಳಿಸು; ಸಂಗತಗೊಳಿಸು; ಸಮನ್ವಯಗೊಳಿಸು: the various conclusions can be accorded by calm reasoning ಶಾಂತವಾಗಿ ವಿವೇಚಿಸಿದರೆ ಆ ವಿವಿಧ ನಿರ್ಣಯಗಳನ್ನು ಸಮನ್ವಯಗೊಳಿಸಬಹುದು.
accord
ನಾಮವಾಚಕ
ನುಡಿಗಟ್ಟು
with one accord ಏಕಾಭಿಪ್ರಾಯದಿಂದ; ಸರ್ವಸಮ್ಮತಿಯಿಂದ; ಯಾರೂ ವಿರೋಧಿಸದೆ.
ಒಮ್ಮನಸ್ಸು; (ಪರಸ್ಪರ) ಒಪ್ಪಿಗೆ; ಸಮ್ಮತಿ; ಅನುಮತಿ; ಏಕಾಭಿಪ್ರಾಯ: with one accord ಎಲ್ಲರ ಒಪ್ಪಿಗೆಯಿಂದ; ಏಕಮತದಿಂದ; ಒಮ್ಮತದಿಂದ.
ಕೊಡುಗೆ; ನೀಡಿಕೆ; ಪ್ರದಾನ: accordance of this right is not a mistake ಈ ಹಕ್ಕು ಕೊಟ್ಟದ್ದು ತಪ್ಪಲ್ಲ.
accordant
ಗುಣವಾಚಕ
ಹೊಂದಿಕೊಳ್ಳುವ; ಒಪ್ಪುವ; ಅನುಗುಣವಾದ: a place perfectly accordant with man’s nature ಮಾನವನ ಸ್ವಭಾವಕ್ಕೆ ಅಚ್ಚುಕಟ್ಟಾಗಿ ಹೊಂದಿಕೊಳ್ಳುವ ಸ್ಥಳ.
accordantly
ಕ್ರಿಯಾವಿಶೇಷಣ
ಹೊಂದಿಕೊಳ್ಳುವಂತೆ; ಒಪ್ಪುವಂತೆ; ಅನುಗುಣವಾಗಿ.
according
ಕ್ರಿಯಾವಿಶೇಷಣ
ಪದಗುಚ್ಛ
= accordingly.
according as
(ಇನ್ನೊಂದನ್ನು ಅನುಸರಿಸಿ ವ್ಯತ್ಯಾಸವಾಗುವ ಪ್ರಕ್ರಿಯೆಯ ವಿಷಯದಲ್ಲಿ) ಆ ಪ್ರಮಾಣದಲ್ಲಿ; (ಅದಕ್ಕೆ) ತಕ್ಕ ಪ್ರಮಾಣದಲ್ಲಿ; ಅಷ್ಟು ಪ್ರಮಾಣದಲ್ಲಿ; ತಕ್ಕಂತೆ: you will get according as you give ನೀನು ಕೊಟ್ಟ ಪ್ರಮಾಣದಲ್ಲಿ ನಿನಗೆ ಸಿಕ್ಕುತ್ತದೆ.
ತಕ್ಕಂತೆ; ಅನುಗುಣವಾಗಿ; ಅನುಸಾರವಾಗಿ; ಅವಲಂಬಿಸಿ; ನಿರ್ದಿಷ್ಟ ವಿಕಲ್ಪಗಳಲ್ಲಿ ಯಾವುದು ಸರಿ ಎಂಬುದನ್ನು ಅವಲಂಬಿಸಿರುವ ರೀತಿಯಲ್ಲಿ.
according to
ಅಂತೆ; ಅನುಗುಣವಾಗಿ; ಅನುಸಾರವಾಗಿ; ಅದರಂತೆ; ಅದರ ಹಾಗೆ: according to the time-table ವೇಳಾಪಟ್ಟಿಯಂತೆ; ವೇಳಾಪಟ್ಟಿಗೆ ಅನುಸಾರವಾಗಿ.