logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

off break
ನಾಮವಾಚಕ
ಆಹ್‍ ಬ್ರೇಕ್‍; ಬಲಮುರಿತ; ಬೋಲರ್‍ ಕೊಟ್ಟ ತಿರುವಿನಿಂದ ಚೆಂಡು ಪುಟ ನೆಗೆದು ‘ಆಹ್‍’ ಕಡೆಯಿಂಡ ‘ಲೆಗ್‍’ ಕಡೆಗೆ ತಿರುಗುವುದು.

off chance
ನಾಮವಾಚಕ
ಅತ್ಯಲ್ಪ ಸಂಭವನೀಯತೆ; ತೀರಾ ಸ್ವಲ್ಪ ಅವಕಾಶ.

off colour
ಗುಣವಾಚಕ
  • ಆರೋಗ್ಯ ಕೆಟ್ಟ; ಸ್ವಾಸ್ಥ್ಯವಿಲ್ಲದ.
  • (ಅಮೆರಿಕನ್‍ ಪ್ರಯೋಗ) ತುಸು ಅಶ್ಲೀಲ; ಸ್ವಲ್ಪ ಅಸಭ್ಯವಾದ.

  • off stump
    ನಾಮವಾಚಕ
    (ಬಲಗೈ) ಬ್ಯಾಟುಗಾರನ ಹಿಂಬದಿಯ ವಿಕೆಟ್ಟುಗಳಲ್ಲಿ ಬಲಕೊನೆಯ ವಿಕೆಟ್ಟು.

    off-centre
    ಗುಣವಾಚಕ
    ಅಕೇಂದ್ರೀಯ; ಕೆಂದ್ರ ಬಿಂದುವಿಗೆ ಯಾ ಸ್ಥಾನಕ್ಕೆ ಸಮನಾಗಿರದ, ಹೊಂದದ, ಸರಿಯಾಗಿರದ; ಮಧ್ಯಕ್ಕೆ ಆಚೆ ಯಾ ಈಚೆ ಇರುವ.

    off-day
    ನಾಮವಾಚಕ
    ಕಳೆಯಿಲ್ಲದ ದಿನ; ಒಬ್ಬನು ತನ್ನ ಉತ್ಕೃಷ್ಟ ಸ್ಥಿತಿಯಲ್ಲಿ ಇಲ್ಲದ ದಿವಸ.

    off-drive
    ಸಕರ್ಮಕ ಕ್ರಿಯಾಪದ
    ಬಲಹೊಡೆತ ಹೊಡೆ; ಚೆಂಡನ್ನು(ಬ್ಯಾಟುಗಾರನ ದೃಷ್ಟಿಯಿಂದ) ಮೈದಾನದ ಬಲಭಾಗಕ್ಕೆ, ‘ಆಹ್‍’ ಕಡೆಗೆ ಹೊಡೆ.

    off-key
    ಗುಣವಾಚಕ
  • ಶ್ರುತಿ ತಪ್ಪಿದ; ಅಪಶ್ರುತಿಯ.
  • ಅಷ್ಟು–ಯುಕ್ತವಲ್ಲದ, ಒಪ್ಪದ, ಸರಿ ಹೊಂದದ.

  • off-licence
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ)
  • ಬೇರೆ ಕಡೆ ಕುಡಿಯಲು ಬಿಯರು ಮೊದಲಾದವನ್ನು ಮಾರಲು ಪಡೆದ ಪರವಾನಗಿ.
  • ಹೀಗೆ ಮದ್ಯ ಮಾರುವ ಅಂಗಡಿ.

  • off-line
    ಗುಣವಾಚಕ
    (ಕಂಪ್ಯೂಟರ್‍ ಟರ್ಮಿನಲ್‍ ಅಥವಾ ಪ್ರಕ್ರಿಯೆಯ ವಿಷಯದಲ್ಲಿ) ಸೆಂಟ್ರಲ್‍ ಪ್ರೋಸೆಸರ್‍ಗೆ ನೇರವಾಗಿ ಸಂಪರ್ಕಿಸದ ಯಾ ಸೆಂಟ್ರಲ್‍ ಪ್ರೋಸೆಸರ್‍ನಿಂದ ನೇರವಾಗಿ ನಿಯಂತ್ರಿತವಾಗದ.


    logo