ನಿರ್ವೀರ್ಯವಾಗಿ; ಹುರುಪಿಲ್ಲದೆ; ಶಕ್ತಿ, ಉತ್ಸಾಹಗಳು ಕಡಿಮೆಯಾಗಿ ಯಾ ಇಲ್ಲದೆ.
ಶ್ರಮಪಡಲು ಇಚ್ಛೆಯಿಲ್ಲದೆ; ಕಷ್ಟಪಡಲು ಹಿಂದೆಗೆಯುತ್ತ.
ಮಂದ ಸ್ವಭಾವದಿಂದ; ಮಂಕುಬಡಿದಂತೆ ವರ್ತಿಸುತ್ತ.
ಲವಲವಿಕೆಯಿಲ್ಲದೆ; ಚಟುವಟಿಕೆ ಇಲ್ಲದೆ; ಚುರುಕಿಲ್ಲದೆ.
ಆಸಕ್ತಿಯಿಲ್ಲದೆ.
ಸಪ್ಪೆಯಾಗಿ; ನೀರಸವಾಗಿ.
ಮಂಕಾಗಿ; ನಿಸ್ತೇಜವಾಗಿ.
ಅತಿ ನಿಧಾನವಾಗಿ; ಪಟುತ್ವವಿಲ್ಲದೆ.
ದುರ್ಬಲವಾಗಿ.
languidness
ನಾಮವಾಚಕ
ಜಡತ್ವ; ಆಲಸ್ಯ.
ನಿರ್ವೀರ್ಯತೆ; ಉತ್ಸಾಹಶೂನ್ಯತೆ; ಹುರುಪಿಲ್ಲದಿರುವಿಕೆ; ಶಕ್ತಿ, ಉತ್ಸಾಹಗಳು ಕಡಿಮೆಯಾಗಿರುವುದು ಯಾ ಇಲ್ಲದಿರುವುದು.
ಶ್ರಮದಲ್ಲಿ ಅನಿಚ್ಛೆ; ಕಷ್ಟಪಡಲು ಹಿಂದೆಗೆಯುವಿಕೆ.
ಮಂದಪ್ರವೃತ್ತಿ; ಮಂಕುಬಡಿದಂತಿರುವಿಕೆ.
ಚುರುಕಿಲ್ಲದಿರುವಿಕೆ; ಲವಲವಿಕೆ, ಚಟುವಟಿಕೆ ಇಲ್ಲದಿರುವಿಕೆ; ಜೀವಕಳೆಯೇ ಇಲ್ಲದಿರುವುದು.
ನಿರಾಸಕ್ತಿ; ಆಸಕ್ತಿಹೀನತೆ.
ನೀರಸತೆ; ಸಪ್ಪೆಯಾಗಿರುವುದು.
ನಿಸ್ತೇಜತೆ; ಮಂಕಾಗಿರುವಿಕೆ.
ಅತಿ ನಿಧಾನ ಪ್ರವೃತ್ತಿ.
ದುರ್ಬಲ ಮನೋವೃತ್ತಿ ಯಾ ನಡವಳಿಕೆ.
languish
ಅಕರ್ಮಕ ಕ್ರಿಯಾಪದ
ಪದಗುಚ್ಛ
languish under (ಮುಖ್ಯವಾಗಿ ಚಿಂತಾಕುಲತೆ, ಸೆರೆವಾಸ, ಮೊದಲಾದವುಗಳಿಂದ) ನರಳು.
ಕ್ಷೀಣಿಸು; ಕ್ಷಯಿಸು; ಸೊರಗು; ನಿತ್ರಾಣಗೊಳ್ಳು; ಶಕ್ತಿಗುಂದಿರು; ನಿರ್ವೀರ್ಯವಾಗು ಯಾ ನಿರ್ವೀರ್ಯವಾಗಿರು.
ದುಃಸ್ಥಿತಿಯಲ್ಲಿರು; ದುಃಸ್ಥಿತಿಗೆ ಒಳಗಾಗಿರು; ದುರ್ಬಲಗೊಳಿಸುವ ಯಾ ನಿರುತ್ಸಾಹ ಗೊಳಿಸುವ ಸ್ಥಿತಿಯಲ್ಲಿ ಬದುಕು; ಬಲಗುಂದಿಸುವ ಯಾ ಮನಕುಗ್ಗಿಸುವ, ಸನ್ನಿವೇಶದಲ್ಲಿ, ಪರಿಸ್ಥಿತಿಯಲ್ಲಿ – ಜೀವಿಸು, ವಾಸಿಸು: languished in poverty for years ಅನೇಕ ವರ್ಷಗಳು ಬಡತನಕ್ಕೆ ಸಿಕ್ಕಿಬಿದ್ದಿದ್ದ. languishing under foreign domination ವಿದೇಶೀ ಪ್ರಭುತ್ವದ ಅಡಿಯಲ್ಲಿ ಸೊರಗುತ್ತಾ.
ಕುಸಿ; ಕುಗ್ಗಿ ಹೋಗು.
ಕೊರಗು; ಹಂಬಲಿಸು; ಹಾತೊರೆ: languish for love ಪ್ರೇಮಕ್ಕಾಗಿ ಹಾತೊರೆ. languish for sympathy ಸಹಾನುಭೂತಿಗಾಗಿ ಹಂಬಲಿಸು.