logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

immortal
ನಾಮವಾಚಕ
  • ಅಮರ; ಅಮರ್ತ್ಯ.
  • (ಮುಖ್ಯವಾಗಿ ಬಹುವಚನದಲ್ಲಿ ಗ್ರೀಕ್‍ ರೋಮನ್‍ ಪುರಾಣಗಳ) ದೇವತೆಗಳು.
  • (ಮುಖ್ಯವಾಗಿ ಗ್ರಂಥಕರ್ತನ ವಿಷಯದಲ್ಲಿ) ಶಾಶ್ವತ ಕೀರ್ತಿವಂತ.
  • (ಬಹುವಚನದಲ್ಲಿ) ಪುರಾತನ ಪರ್ಷಿಯಾದ ರಾಜನ ಮೈಗಾವಲು ಪಡೆ, ಅಂಗರಕ್ಷಕ ದಳ.
  • (Immortal) ಹ್ರೆಂಚ್‍ ಅಕ್ಯಾಡೆಮಿಯ ಸಾಹಿತ್ಯ ಪರಿಷತ್ತಿನ ಸದಸ್ಯ.

  • immortalise
    ಸಕರ್ಮಕ ಕ್ರಿಯಾಪದ
    = immortalize.

    immortality
    ನಾಮವಾಚಕ
  • ಅಮರತ್ವ; ಅಮೃತತ್ವ; ಶಾಶ್ವತತ್ವ; ನಿತ್ಯತೆ; ಚಿರಂತನತೆ; ಅಳಿಯಮೆ.
  • ಶಾಶ್ವತಕೀರ್ತಿ; ಅಮರ ಖ್ಯಾತಿ.

  • immortalization
    ನಾಮವಾಚಕ
  • ಶಾಶ್ವತ ಕೀರ್ತಿ ಕೊಡುವಿಕೆ ಯಾ ಪಡೆದಿರುವಿಕೆ.
  • ಅಮರವಾಗಿಸುವಿಕೆ ಯಾ ಅಮರವಾಗಿರುವಿಕೆ.
  • ಚಿರಸ್ಥಾಯಿಗೊಳಿಸುವಿಕೆ ಯಾ ಚಿರಸ್ಥಾಯಿಯಾಗಿರುವಿಕೆ.

  • immortalize
    ಸಕರ್ಮಕ ಕ್ರಿಯಾಪದ
  • ಶಾಶ್ವತ ಕೀರ್ತಿಯನ್ನು ನೀಡು, ಕೊಡು.
  • ಅಮರವಾಗಿಸು; ಅಮರವಾಗಿ ಮಾಡು; ಶಾಶ್ವತವಾಗಿ ಉಳಿಯುವಂತೆ ಮಾಡು; ಚಿರಸ್ಥಾಯಿಯಾಗಿಸು.
  • ಚಿರಸ್ಮರಣೀಯವಾಗಿಸು; ಅವಿಸ್ಮರಣೀಯವಾಗಿಸು; ನೆನಪಳಿಯದಂತೆ ಮಾಡು.

  • immortally
    ಕ್ರಿಯಾವಿಶೇಷಣ
  • ಶಾಶ್ವತವಾಗಿ; ಅಮರವಾಗಿ; ಎಂದೆಂದಿಗೂ ಇರುವಂತೆ.
  • (ಆಡುಮಾತು) ಅನಂತವಾಗಿ; ಅಪರಿಮಿತವಾಗಿ; ಬಹಳವಾಗಿ; ಅತ್ಯಂತ; ಅತಿಯಾಗಿ: rejoicing immortally over the victory ವಿಷಯ ಕುರಿತು ಅಪರಿಮಿತವಾಗಿ ಆನಂದಪಡುತ್ತಾ.

  • immortelle
    ನಾಮವಾಚಕ
    ಅಳಿಯದ ಹೂವು; ಅಮರ ಪುಷ್ಪ; ಒಣಗಿಸಿದ ಮೇಲೂ ಬಣ್ಣಗೆಡದಿರುವ, ಕಾಗದದಂಥ ರಚನೆಯುಳ್ಳ, ಅನೇಕ ವೇಳೆ ಸಮಾಧಿಗಳನ್ನಲಂಕರಿಸಲು ಬಳಸುವ, ಒಂದು ಸಂಯುಕ್ತ ಪುಷ್ಪ.

    immovability
    ನಾಮವಾಚಕ
  • ಕದಲಿಸಲಾಗದಿರುವಿಕೆ.
  • ನಿಶ್ಚಲತೆ; ಅಚಲತೆ; ಕದಲದಿರುವಿಕೆ.
  • ಮಾರ್ಪಡಿಸಲಾಗದಿರುವಿಕೆ.
  • ದೃಢತೆ; ಸ್ಥಿರತೆ; ಜಗ್ಗದಿರುವಿಕೆ.
  • ಭಾವಶೂನ್ಯತೆ; ನಿರ್ಭಾವ ಸ್ಥಿತಿ.

  • immovable
    ಗುಣವಾಚಕ
  • ಕದಲಿಸಲಾಗದ; ಅಲ್ಲಾಡಿಸಲಾಗದ.
  • ನಿಶ್ಚಲ; ಅಚಲ; ಕದಲದ; ಚಲನೆಯಿಲ್ಲದ.
  • ಬದಲಾವಣೆಗೊಳಪಡದ; ಮಾರ್ಪಾಡಾಗದ; ವ್ಯತ್ಯಾಸ ಹೊಂದದ; ಬದಲಾಯಿಸಲಾಗದ: Egypt had a law immovable ಈಜಿಪ್ಟಿನಲ್ಲಿ ಮಾರ್ಪಡದ ಕಾನೂನಿತ್ತು.
  • ಸ್ಥಿರ; ದೃಢ; ಜಗ್ಗದ; ಪಟ್ಟಾಗಿ ನಿಂತ; ವಿಚಲಿತವಾಗದ: heroes immovable by pain or pleasure ನೋವು ನಲಿವುಗಳಿಂದ ವಿಚಲಿತವಾಗದ ಧೀರರು.
  • ಭಾವಶೂನ್ಯ; ನಿರ್ಭಾವದ; ಮನಸ್ಸು ಕರಗದ: his features were immovable ಅವನ ಮುಖಚರ್ಯೆಗಳು ಭಾವಶೂನ್ಯವಾಗಿದ್ದುವು.
  • (ನ್ಯಾಯಶಾಸ್ತ್ರ) (ಆಸ್ತಿಯ ವಿಷಯದಲ್ಲಿ) ಸ್ಥಿರಸ್ವತ್ತಿನ; ಸ್ಥಿರಾಸ್ತಿಯ; ಸ್ಥಾವರ; ಜಈನು, ಮನೆ, ಮೊದಲಾದವುಗಳುಳ್ಳ.

  • immovable
    ನಾಮವಾಚಕ
    (ಬಹುವಚನದಲ್ಲಿ) (ನ್ಯಾಯಶಾಸ್ತ್ರ) ಸ್ಥಿರಸ್ವತ್ತು; ಸ್ಥಿರಾಸ್ತಿ; ಸ್ಥಾವರ (ಆಸ್ತಿ); ಜಈನು, ಮನೆ, ಮೊದಲಾದವು.


    logo