ಈಜಿಪ್ಟ್‍ಶಾಸ್ತ್ರಜ್ಞ; ಈಜಿಪ್ಟಿನ ಪುರಾತನ ವಸ್ತುಗಳ ಅಧ್ಯಯನ ನಡೆಸುವ ಪಂಡಿತ, ವಿದ್ವಾಂಸ.
Egyptology
ನಾಮವಾಚಕ
ಈಜಿಪ್ಟ್‍ಶಾಸ್ತ್ರ; ಐಗುಪ್ತಶಾಸ್ತ್ರ; ಈಜಿಪ್ಟಿನ ಪುರಾತನ ವಸ್ತುಗಳ ಅಧ್ಯಯನ.
eh
ಭಾವಸೂಚಕ ಅವ್ಯಯ
(ಆಡುಮಾತು) (ಒಬ್ಬರ ಮಾತು ಸರಿಯಾಗಿ ಕೇಳಿಸದಿದ್ದಾಗ, ಒಬ್ಬರ ಅನುಮತಿಯನ್ನು ಕೋರುವಾಗ, ಆಶ್ಚರ್ಯ ಸೂಚಿಸುವಾಗ ಬಳಸುವ ಅನುಕರಣ ಶಬ್ದ) ಆ; ಹಾ.
eider
ನಾಮವಾಚಕ
ಐಡರ್; ದು ತುಪ್ಪುಳನ್ನು ಕೊಡುವ, ಶೀತವಲಯದಲ್ಲಿ ವಾಸಿಸುವ, ಮುಖ್ಯವಾಗಿ ಸೋಮಟೇರಿಯ ಕುಲದ, ಒಂದು ಬಗೆಯ ದೊಡ್ಡ ಬಾತು.
ಐಡರ್ ತುಪ್ಪುಳು; ಐಡರ್ ಎದೆಯ ಮೇಲಿರುವ ದುವಾದ ತುಪ್ಪುಳು.
ಅದರಿಂದ ಮಾಡಿದ ಹಾಸಿಗೆ, ರಜಾಯಿ, ಯಾ ಮೇಲು ಹೊದಿಕೆ.
eider duck
ನಾಮವಾಚಕ
= eider(1).
eider-down
ನಾಮವಾಚಕ
= eider(2, 3).
eidetic
ಗುಣವಾಚಕ
(ಮನಶ್ಶಾಸ್ತ್ರ) (ಮಾನಸಿಕ ಚಿತ್ರದ ವಿಷಯದಲ್ಲಿ) ಚಾಕ್ಷುಷ ಸ್ಪಷ್ಟ; ಪ್ರತ್ಯಕ್ಷ ಸ್ಫುಟವಾದ; ಚಾಕ್ಷುಷವೇದ್ಯವಾದ; ಚಾಕ್ಷುಷವಿಶದತೆಯ; ಪ್ರತ್ಯಕ್ಷವಿಶದವಾದ; ಕಣ್ಣೆದುರಿಗೆ ಕಾಣುತ್ತಿರುವಷ್ಟು ಸ್ಪಷ್ಟವಾದ ಮತ್ತು ವಿವರವಾದ; ನೆನಪಿನಲ್ಲಿ ಸಂಗ್ರಹವಾಗಿದ್ದು ಬೇಕೆನಿಸಿದಾಗ ಬಹಳ ಖಚಿತವಾಗಿ ಮತ್ತು ಸವಿವರವಾಗಿ ಪುನಃ ಪ್ರದರ್ಶಿತವಾಗಬಲ್ಲ ಚಾಕ್ಷುಷ ಚಿತ್ರದ ಯಾ ಪ್ರತಿಮೆಯ, ಅದಕ್ಕೆ ಸಂಬಂಧಿಸಿದ, ಅದನ್ನು ಒಳಗೊಂಡಿರುವ.
ಅಮೂರ್ತವಾದ; ಅಮೂರ್ತಭಾವನೆ, ಕೇವಲ ಆತಿ ಯಾ ಸತ್ತ್ವ ಇವುಗಳ, ಇವುಗಳಿಗೆ ಸಂಬಧಿಸಿದ ಯಾ ಇವುಗಳ ರೂಪದ.
eidetic
ನಾಮವಾಚಕ
ಮನಶ್ಚಿತ್ರದರ್ಶಕ; ಮಾನಸಿಕ ಚಿತ್ರದರ್ಶಕ; ಮಾನಸಿಕ ಚಿತ್ರ ಯಾ ಪ್ರತಿಮೆಗಳನ್ನು ವಿಸ್ಪಷ್ಟವಾಗಿ ಕಾಣಬಲ್ಲ ವ್ಯಕ್ತಿ.
eidograph
ನಾಮವಾಚಕ
ನಕ್ಷಾಲೇಖಿ; ನಕ್ಷೆಗಳ ಹಿಗ್ಗಿಸಿದ ಯಾ ಕುಗ್ಗಿಸಿದ ಪ್ರತಿಗಳನ್ನು ತಯಾರಿಸುವ ಉಪಕರಣ.
eidolon
ನಾಮವಾಚಕ
ಮಾಯಾಬಿಂಬ; ಛಾಯಾರೂಪ; ಛಾಯಾತಿ; ವಸ್ತುಭೂತವಲ್ಲದ ಕೇವಲ ಆತಿ, ರೂಪ.
ಆದರ್ಶ ರೂಪ; ಆದರ್ಶಮೂರ್ತಿ: Lincoln, the eidolon of democrcay ಪ್ರಜಾಸತ್ತೆಯ ಆದರ್ಶಮೂರ್ತಿಯಾದ ಲಿಂಕನ್.