logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

camera obscura
ನಾಮವಾಚಕ
ಕತ್ತಲೆಕೋಣೆ; ಕತ್ತಲೆಡಬ್ಬ; ಕತ್ತಲೆ ಕೋಣೆಯ ಯಾ ಡಬ್ಬದ ರಂಧ್ರಕ್ಕೆ ಸಾಮಾನ್ಯವಾಗಿ ಯವವನ್ನು ಜೋಡಿಸಿ, ಅದರ ಮೂಲಕ ಹೊರಗಿನ ವಸ್ತುವಿನ ಬಿಂಬವನ್ನು ಹಾಯಿಸಿ, ಒಳಗಡೆಯ ಪರದೆಯ ಮೇಲೆ ಅದರ ಚಿತ್ರ ಮೂಡಿಸುವ ವ್ಯವಸ್ಥೆ.

camera-shy
ಗುಣವಾಚಕ
ಹೋಟೋನಾಚಿಕೆಯ; ಕ್ಯಾಮರಲಜ್ಜೆಯ; ಹೋಟೋ ತೆಗೆಸಿಕೊಳ್ಳಲು ಇಷ್ಟವಿಲ್ಲದ.

cameraman
ನಾಮವಾಚಕ
ಕ್ಯಾಮರಮನ್‍; ಮುಖ್ಯವಾಗಿ ಸಿನಿಮಾ ಯಾ ಟೆಲಿವಿಷನ್‍ನಲ್ಲಿ ಛಾಯಾಚಿತ್ರಗಳನ್ನು ತೆಗೆಯುವ ವೃತ್ತಿನಿರತ ಛಾಯಾಚಿತ್ರಗ್ರಾಹಿ.

camerlengo
ನಾಮವಾಚಕ
=camerlingo.

camerlingo
ನಾಮವಾಚಕ
  • ಪೋಪನ ಮನೆವಾರ್ತೆಗಾರ; ಪೋಪನ ಭಕ್ಷಿ; ಪೋಪನ ಮನೆವಾರ್ತೆಗಾರ ಮತ್ತು ಕೋಶಾಧಿಕಾರಿ.
  • ಪವಿತ್ರ ಕಾಲೇಜಿನ (Sacred College) ಕೋಶಾಧಿಕಾರಿ.

  • Cameronian
    ನಾಮವಾಚಕ
  • ರಿಚರ್ಡ್‍ ಕ್ಯಾಮರಾನ್‍ ಎಂಬಾತನ ತತ್ತ್ವಗಳು ಯಾ ಅನುಯಾಯಿಗಳು.
  • (ಸ್ಕಾಟ್ಲಂಡಿನ) ಒಂದು ಕ್ರೈಸ್ತಪಂಗಡ; ಪ್ರೆಸಿಟೀರಿಯನ್‍ ಪಂಗಡ.
  • (ಬಹುವಚನದಲ್ಲಿ) ಸ್ಕಾಟ್ಲಂಡಿನ ಕೋವಿ ದಳಗಳು.

  • camiknickers
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಬಹುವಚನ) ರವಿಕೆ ಚಡ್ಡಿ; ಅಂಗಿ ಮತ್ತು ಚೆಡ್ಡಿ ಕೂಡಿಕೊಂಡಿರುವ ಹೆಂಗಸರ ಒಳ ಉಡುಪು.

    camion
    ನಾಮವಾಚಕ
  • ಬೋಳುಬಂಡಿ; ತಗ್ಗು ಟ್ರಕ್ಕು; ಕುದುರೆ ಯಾ ಮೋಟಾರು ಎಳೆಯುವ, ನಾಲ್ಕು ಚಕ್ರದ, ಪಕ್ಕಗಳಿಲ್ಲದ, ಬಹಳ ಭಾರ ಹೊರುವ, ತಗ್ಗು ಬೋಳುಬಂಡಿ.
  • ಬಸ್ಸು.
  • ಲಾರಿ.

  • camisole
    ನಾಮವಾಚಕ
    (ಪ್ರಾಚೀನ ಪ್ರಯೋಗ) (ಸಾಮಾನ್ಯವಾಗಿ ಕಸೂತಿ ಹಾಕಿದ) ಒಳಕುಪ್ಪಸ; ಬಾಡಿ.

    camlet
    ನಾಮವಾಚಕ
    (ಪ್ರಾಚೀನ ಪ್ರಯೋಗ) ಗೌನುಬಟ್ಟೆ; ಮೇಲಂಗಿ ಬಟ್ಟೆ; ಗೌನು ಮೊದಲಾದವುಗಳಿಗೆ ಬಳಸುವ ಅನೇಕ ಬಗೆಯ ಹಗುರ ಬಟ್ಟೆ.


    logo