(ಬ್ರಿಟಿಷ್ ಪ್ರಯೋಗ) (ಅಶಿಷ್ಟ) (bloody ಎಂಬುದರ ಸೌಮ್ಯೋಕ್ತಿ) (ಮನಸ್ಸಿಗೆ ತೀರ ಜುಗುಪ್ಸೆ, ವೇದನೆ ಉಂಟಾದಾಗ ಶಪಿಸುವ ಇಲ್ಲವೇ ಶಪಿಸಿಕೊಳ್ಳುವ ಮಾತು ಯಾ ಆಯಾಸ ಜುಗುಪ್ಸೆಗಳು ತೊಲಗಿದಾಗ ಹೃದಯದ ಹಗುರತೆಯನ್ನು ಸೂಚಿಸುವ ಉದ್ಗಾರ) ಹಾಳು; ಹಾಳಾದ; ಅನಿಷ್ಟ; ಶನಿ; ಪೀಡೆ; ಸುಡುಗಾಡು; ದರಿದ್ರ: I am stung by bally wasp ಯಾವುದೋ ಹಾಳು ಕಣಜ ಕುಟುಕಿಬಿಟ್ಟಿತಲ್ಲ! whose bally fault is that? ಆ ಹಾಳು ತಪ್ಪು ಯಾರದ್ದು? phew! I’ve at last got through the bally lot ಅಬ್ಬ! ಕೊನೆಗೂ ಆ ಸುಡುಗಾಡು ಕೆಲಸವನ್ನೆಲ್ಲ ಮುಗಿಸಿದಂತಾಯಿತು.
bally
ಕ್ರಿಯಾವಿಶೇಷಣ
(ಬ್ರಿಟಿಷ್ ಪ್ರಯೋಗ) (ಅಶಿಷ್ಟ) (bloody ಎಂಬುದರ ಸೌಮ್ಯೋಕ್ತಿ) ಬಹಳ; ವಿಪರೀತ; ಮಿತಿಈರಿ; ಉಸಿರುಹೋಗುವಷ್ಟು: I can do no more, I’m too bally tired ಇನ್ನೇನೂ ಮಾಡಲಾರೆ, ನನಗೆ ವಿಪರೀತ ಸುಸ್ತಾಗಿದೆ.
ballyhoo
ನಾಮವಾಚಕ
(ಅಸಭ್ಯವಾದ ಯಾ ತಪ್ಪು ಅಭಿಪ್ರಾಯ ಕೊಡುವ ರೀತಿಯ) ಬೊಬ್ಬೆಸಾರಿಕೆ; ಕಿರುಚು ಪ್ರಕಟಣೆ.
(ಅಂಗಡಿ, ಹರಾಜು, ಮೊದಲಾದವುಗಳಲ್ಲಿ) ಗಿರಾಕಿ ಹಿಡಿಯುವವನ ಯಾ ಕೂಗುವವನ ಕೂಗು.
ಆಡಂಬರದ, ಅಸಂಬದ್ಧ ಯಾ ಅರ್ಥಹೀನ – ಮಾತು.
ballyhoo
ಸಕರ್ಮಕ ಕ್ರಿಯಾಪದ
ಅರಚಿಕೊಂಡು ಮಾರು ಯಾ ಪ್ರಚಾರ ಮಾಡು; ಕಿರುಚಿ ಗಿರಾಕಿ ಸೆಳೆ ಯಾ ಪುಸಲಾಯಿಸು.