logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

accommodation ladder
ನಾಮವಾಚಕ
ಸೌಕರ್ಯದ ಏಣಿ; ದೋಣಿ ಮೊದಲಾದವುಗಳಿಂದ ಹಡಗನ್ನು ಏರಲು ಬಳಸುವ, ಒಯ್ಯಬಹುದಾದ ಏಣಿ.

accommodation road
ನಾಮವಾಚಕ
ಸಹಾಯಕ ರಸ್ತೆ; ಸಾರ್ವಜನಿಕ ರಸ್ತೆಯ ಪಕ್ಕದಲ್ಲಿರದ ಖಾಸಗಿ ಜಮೀನು, ಮನೆ, ಮೊದಲಾದ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ.

accommodative
ಗುಣವಾಚಕ
  • ಸ್ಥಳವಿರುವ; ಅವಕಾಶವಿರುವ.
  • ಅನುಕೂಲತೆ, ಸೌಲಭ್ಯಗಳಿರುವ; ಸೌಕರ್ಯವಿರುವ.
  • ಹೊಂದಿಕೊಳ್ಳುವ; ಹೊಂದಿಕೆಯ; ಹೊಂದಾಣಿಕೆಯ.
  • ರಾಜಿಗೆ ಸಿದ್ಧವಿರುವ.

  • accompaniment
    ನಾಮವಾಚಕ
  • ಜೊತೆ; ಪರಿವಾರ; ಪರಿಕರ; ಅನುಬಂಧ; ಜೊತೆಯಲ್ಲಿರುವ ವಸ್ತು: epidemics are an accompaniment of famine ಸಾಂಕ್ರಾಮಿಕ ಜಾಡ್ಯಗಳು ಕ್ಷಾಮದ ಪರಿವಾರವಾಗಿಯೇ ಬರುತ್ತವೆ.
  • (ಸಂಗೀತ) ಹಿಮ್ಮೇಳ ಯಾ ಪಕ್ಕವಾದ್ಯ.

  • accompanist
    ನಾಮವಾಚಕ
  • ಜೊತೆ; ಜೊತೆಯಲ್ಲಿರುವ ವ್ಯಕ್ತಿ ಯಾ ವಸ್ತು.
  • ಹಿಮ್ಮೇಳದವನು ಯಾ ಪಕ್ಕವಾದ್ಯದವನು; ಉಪಗಾಯಕ ಯಾ ಉಪವಾದಕ.

  • accompany
    ಸಕರ್ಮಕ ಕ್ರಿಯಾಪದ
  • (ಯಾವುದೇ ಒಂದಕ್ಕೆ) ಹೆಚ್ಚಿಗೆ ಸೇರಿಸು; ಜೊತೆಗೆ ಸೇರಿಸು; ಜೊತೆಗೂಡಿಸು: accompany the word with a blow ಮಾತಿನ ಜೊತೆಗೆ ಏಟು ಸೇರಿಸು.
  • (ವಸ್ತುಗಳ ವಿಷಯದಲ್ಲಿ) ಒಂದಿಗಿರು; ಜೊತೆಯಲ್ಲಿರು; ಒಡಗೂಡಿರು; ಜೊತೆಯಲ್ಲಿ ಸಿಗು ಯಾ ದೊರಕು.
  • ಜೊತೆಗೆ ಹೋಗು.
  • ಪಕ್ಕವಾದ್ಯ ನುಡಿಸು ಯಾ ದನಿಗೂಡಿಸಿ ಹಾಡು.
  • (ಮರ್ಯಾದೆಗಾಗಿ ಯಾ ರಕ್ಷಣೆಗಾಗಿ) ಬೆಂಗಾವಲಾಗಿರು.

  • accompanyist
    ನಾಮವಾಚಕ
    = accompanist.

    accomplice
    ನಾಮವಾಚಕ
    ಶಾಮೀಲುದಾರ; ಶರೀಕುದಾರ; ಸಹಾಪರಾಧಿ; ಅಪರಾಧಕ್ಕೆ ನೆರವಾದವನು, ಸಹಾಯಕ.

    accomplish
    ಸಕರ್ಮಕ ಕ್ರಿಯಾಪದ
  • ಈಡೇರಿಸು; ನೆರವೇರಿಸು; ನಿರ್ವಹಿಸು; ಸಾಧಿಸು.
  • ಮುಗಿಸು; ಪೂರಯಿಸು; ಪೂರ್ಣಗೊಳಿಸು; ಸಾಂಗಗೊಳಿಸು: accomplish a task ಕೆಲಸವನ್ನು ಪೂರಯಿಸು.
  • ಸುಶಿಕ್ಷಿತನನ್ನಾಗಿ ಮಾಡು; ಸುಸಂಸ್ಕೃತನನ್ನಾಗಿ ಮಾಡು: qualities accomplishing a proper lady ಸುಶಿಕ್ಷಿತಳನ್ನಾಗಿ ಮಾಡಲು ಆವಶ್ಯಕವಾದ ಗುಣಗಳು.

  • accomplished
    ಗುಣವಾಚಕ
  • ಈಡೇರಿಸಿದ; ನೆರವೇರಿಸಿದ; ಸಾಧಿಸಿದ; ನಿರ್ವಹಿಸಿದ: an accomplished fact ನಿರ್ವಹಿಸಿದ ಸಂಗತಿ.
  • ಮುಗಿಸಿದ; ಪೂರಯಿಸಿದ.
  • ನಿಪುಣ; ನೈಪುಣ್ಯ ಪಡೆದ; ಕುಶಲ; ತಜ್ಞ; ಚತುರ: an accomplished dancer ನಿಪುಣ ನರ್ತಕ.
  • ಸುಶಿಕ್ಷಿತ; ಸುಸಂಸ್ಕೃತ; ಸಂಭಾಷಣೆ, ಕಲೆ, ಸಂಗೀತ, ಸಭ್ಯ ಸಮಾಜದ ರೀತಿನೀತಿಗಳು, ಮೊದಲಾದವುಗಳಲ್ಲಿ ಶಿಕ್ಷಣ ಪಡೆದ.


  • logo