logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dyspnoea
ನಾಮವಾಚಕ
(ರೋಗಶಾಸ್ತ್ರ) ಕಟ್ಟುಸಿರು; ಕಷ್ಟಶ್ವಾಸ; ಶ್ವಾಸಾವರೋಧ; ಉಸಿರಾಟದ ತೊಂದರೆ.

dyspnoeic
ಗುಣವಾಚಕ
(ರೋಗಶಾಸ್ತ್ರ) ಕಟ್ಟುಸಿರಿನ; ಕಷ್ಟಶ್ವಾಸದ; ಶ್ವಾಸಾವರೋಧದ.

dysprosium
ನಾಮವಾಚಕ
(ರಸಾಯನವಿಜ್ಞಾನ) ಡಿಸ್ಪ್ರೋಸಿಯಮ್‍; ಪರಮಾಣು ಸಂಖ್ಯೆ 66, ಪರಮಾಣು ತೂಕ $162.50$ ಉಳ್ಳ, ವಿರಳಭಸ್ಮ ಗುಂಪಿಗೆ ಸೇರಿದ ಧಾತು.

dystopia
ನಾಮವಾಚಕ
ನರಕರೂಪ; ಅತಿಕೆಟ್ಟ ಸ್ಥಳ ಯಾ ಪರಿಸ್ಥಿತಿ; ಪ್ರತಿಯೊಂದೂ ಎಷ್ಟು ಕೆಟ್ಟದಾಗಿರಲು ಸಾಧ್ಯವೋ ಅಷ್ಟು ಕೆಟ್ಟದಾಗಿರುವ ಕಾಲ್ಪನಿಕ ಸ್ಥಳ ಯಾ ಪರಿಸ್ಥಿತಿ.

dystrophy
ನಾಮವಾಚಕ ಪದಗುಚ್ಛ
ದೋಷಪೂರಿತ ಯಾ ಅಪರಿಪೂರ್ಣ – ಪೋಷಣೆ. muscular dystrophy ಸ್ನಾಯುಕ್ಷಯ; ಸ್ನಾಯುಗಳು ಕ್ರಮೇಣ ದುರ್ಬಲವಾಗುವ, ಕ್ಷಯಿಸುವ, ಒಂದು ಆನುವಂಶಿಕ ರೋಗ.

dysuria
ನಾಮವಾಚಕ
ಉರಿಮೂತ್ರ; ಮೂತ್ರಬಾಧೆ; ನೋವಿನಿಂದೊಡಗೂಡಿದ ಮೂತ್ರ ವಿಸರ್ಜನೆ.

dzho
ನಾಮವಾಚಕ
ಗೋಚಮರಿ; ಚಮರೀಗ ಹಾಗೂ ಹಸುಗಳ ಕೂಡಿಕೆಯಿಂದ ಹುಟ್ಟಿದ ಮಿಶ್ರತಳಿ.

dziggetai
ನಾಮವಾಚಕ
= kiang.

dzo
ನಾಮವಾಚಕ
= dzho.


logo