logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unclear
ಗುಣವಾಚಕ
  • ಅಸ್ಪಷ್ಟ; ಸಂದಿಗ್ಧ; ಮಸುಕಾದ; ತಿಳಿದುಕೊಳ್ಳಲು ಸ್ಪಷ್ಟವಾಗಿಲ್ಲದ ಯಾ ಸುಲಭವಾಗಿಲ್ಲದ.
  • (ವ್ಯಕ್ತಿಯ ವಿಷಯದಲ್ಲಿ) ಅನಿಶ್ಚಿತ; ಸಂದೇಹಾಸ್ಪದ; ಸಂದಿಗ್ಧ: I’m unclear as to what you mean ನಿನ್ನ ಮನಸ್ಸಿನಲ್ಲಿ ಏನಿದೆ ಎಂಬಉದು ನನಗೆ ಸಂದಿಗ್ಧವಾಗಿದೆ.

  • unclearly
    ಕ್ರಿಯಾವಿಶೇಷಣ
    ಅಸ್ಪಷ್ಟವಾಗಿ; ಸಂದಿಗ್ಧವಾಗಿ.

    unclearness
    ನಾಮವಾಚಕ
    ಅಸ್ಪಷ್ಟತೆ; ಸಂದಿಗ್ಧತೆ.

    unclench
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಮುಷ್ಟಿ, ಮುಖಭಾವ, ಹಲ್ಲು, ಮೊದಲಾದವುಗಳ ವಿಷಯದಲ್ಲಿ) ಸಡಿಲಿಸು; ಬಿಡಿಸು; ತೆರೆ. ಬಿಗಿಹಿಡಿದ ಮುಷ್ಟಿಯನ್ನು ಸಡಿಲಿಸು; ಬಿಗಿ ಸಡಲಿಸು.

    unclinch
    ಕ್ರಿಯಾಪದ
    = unclench.

    uncloak
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಸಾಮಾನ್ಯವಾಗಿ ಮೇಲಂಗಿ ಮೊದಲಾದವನ್ನು) ಕಳಚು; ತೆಗೆದುಬಿಡು.
  • ನಿಲುವಂಗಿ ತೆಗೆ, ಕಳಚು.
  • ತೆರೆದು ತೋರಿಸು; ಬಯಲುಮಾಡು.

  • unclog
    ಸಕರ್ಮಕ ಕ್ರಿಯಾಪದ
  • ತಡೆ, ಅಡಚಣೆ, ಮೊದಲಾದವನ್ನು ತೆಗೆದುಹಾಕು.
  • (ಕಟ್ಟಿಕೊಂಡ ಚರಂಡಿ, ಮೋರಿ, ಮೊದಲಾದವಲ್ಲಿ) ನೀರು ಸಲೀಸಾಗಿ ಕೊಚ್ಚಿ ಹೋಗುವಂತೆ, ಹರಿಯುವಂತೆ ಮಾಡು.

  • uncloister
    ಸಕರ್ಮಕ ಕ್ರಿಯಾಪದ
    (ಒಳಗೆ ಕೂಡಿರುವುದನ್ನು) ಬಂಧನದಿಂದ ಬಿಡಿಸು; ಹೊರತೆಗೆ; ಬಿಡುಗಡೆಮಾಡು.

    unclose
    ಸಕರ್ಮಕ ಕ್ರಿಯಾಪದ
  • (ಮುಚ್ಚಿಟ್ಟಿರುವುದನ್ನು) ತೆರೆ; ಹೊರತೆಗೆ; ತೆರೆದಿಡು ( ಅಕರ್ಮಕ ಕ್ರಿಯಾಪದ ಸಹ).
  • ಹೊರಗೆಡವು; ಬಯಲು ಮಾಡು; ರಟ್ಟುಮಾಡು.

  • unclothe
    ಸಕರ್ಮಕ ಕ್ರಿಯಾಪದ
  • ಬೆತ್ತಲೆಮಾಡು; ಬಟ್ಟೆ ತೆಗೆ; ವಿವಸ್ತ್ರಗೊಳಿಸು.
  • ಹೊದಿಕೆ (ಮೊದಲಾದವನ್ನು) ತೆರೆ, ಕಳಚು; ತೆಗೆದುಹಾಕು.
  • ಎಲೆಗಳನ್ನು ಯಾ ಸಸ್ಯಗಳನ್ನು ತೆಗೆದುಹಾಕು, ಕಿತ್ತುಹಾಕು; ಕಿತ್ತು ಬೋಳುಮಾಡು: trees unclothed by the wind ಗಾಳಿಯಿಂದ ಬೋಳಾದ ಮರಗಳು.
  • ಹೊರಗೆಡವು; ಬಯಲುಮಾಡು.


  • logo