logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

langlauf
ನಾಮವಾಚಕ
ಲ್ಯಾಂಗ್‍ಲೌಹ್‍; ಹಳ್ಳಿಗಾಡು ಸ್ಕೀಯಿಂಗ್‍; ಅಂಗಾಲಿಗೆ ಜಾರು ಹಾವುಗೆ ಬಿಗಿದುಕೊಂಡು ಕಾಡುಮೇಡುಗಳ ಮೂಲಕ ಜಾರುವುದು ಯಾ ಹೀಗೆ ಜಾರುವ ಪಂದ್ಯ.

langouste
ನಾಮವಾಚಕ
ಮುಳ್ಳುನಳ್ಳಿ; ಕಂಟಕನಳ್ಳಿ; ಮೈಮೇಲೆ ಮುಳ್ಳುಗಳಿರುವ ನಳ್ಳಿ.

langoustine
ನಾಮವಾಚಕ
ಒಂದು ಬಗೆಯ ನಾರ್ವೆ ನಳ್ಳಿ.

language
ನಾಮವಾಚಕ ಪದಗುಚ್ಛ ನುಡಿಗಟ್ಟು
speak the same language ಒಂದೇ ದೃಷ್ಟಿ, ಅಭಿಪ್ರಾಯ, ಅಭಿವ್ಯಕ್ತಿ ಶೈಲಿ, ಮೊದಲಾದವನ್ನು ಹೊಂದಿರು.
  • ಭಾಷೆ; ಅಂಗೀಕೃತ ರೀತಿಯಲ್ಲಿ ಪದಗಳನ್ನು ಬಳಸುವ, ಆಡುವ ಯಾ ಬರೆಯುವ ರೂಪದ, ಮಾನವ ಸಂವಹನದ ವಿಧಾನ; ಅರ್ಥನೀಡುವ, ವಾಗಿಂದ್ರಿಯಜನ್ಯನಾದಗಳ ಒಂದು ವ್ಯವಸ್ಥೆ.
  • (ಒಂದು ದೇಶ, ಜನಾಂಗ, ಮೊದಲಾದವುಗಳ) ಭಾಷೆ; ನುಡಿ: speaks several languages ಹಲವಾರು ಭಾಷೆಗಳನ್ನು ಆಡುತ್ತಾನೆ.
  • ವಾಕ್‍ಶಕ್ತಿ; ಮಾತನಾಡುವ ಶಕ್ತಿ.
  • ಭಾಷೆ:
    1. (ವ್ಯಕ್ತಿಯ) ಭಾಷಾಶೈಲಿ; ಮಾತಿನ ವರಸೆ; ಅಭಿವ್ಯಕ್ತಿಯ ಶೈಲಿ; ಭಾಷೆಯ ಯಾ ಮಾತಿನ ಬಳಕೆ, ಪ್ರಯೋಗ: his language was poetic ಅವನ ಭಾಷೆ ಕಾವ್ಯಮಯವಾಗಿತ್ತು. hasn’t the language to express it ಅದನ್ನು ವ್ಯಕ್ತಪಡಿಸಲು ಅವನಲ್ಲಿ ಮಾತಿಲ್ಲ.
    2. (ಕಂಪ್ಯೂಟರ್‍) ‘ಪ್ರೋಗ್ರಾಂ’ಗಳನ್ನು ಬರೆಯಲು ಬೇಕಾದ ಸಂಕೇತಗಳ ಮತ್ತು ನಿಯಮಗಳ ವ್ಯವಸ್ಥೆ.
    3. (ಯಾವುದೇ) ಅಭಿವ್ಯಕ್ತಿ ವಿಧಾನ: sign language ಸಂಜ್ಞಾಭಾಷೆ.
  • ಸಾಹಿತ್ಯ ಶೈಲಿ; ಸಾಹಿತ್ಯಕ ಪದಪ್ರಯೋಗ.
  • (ಒಂದು ವೃತ್ತಿ, ವರ್ಗ, ಮೊದಲಾದವುಗಳ) ವಿಶಿಷ್ಟಭಾಷೆ; ಪರಿಭಾಷೆ.
  • ಪದಗಳು ಮತ್ತು ಪದಪ್ರಯೋಗ; ಶಬ್ದಗಳು ಮತ್ತು ಅವುಗಳ ಬಳಕೆ.
  • ಕೆಟ್ಟಭಾಷೆ; ದುರ್ಭಾಷೆ; ಆಣೆ, ಬೈಗುಳ, ನಿಂದೆ, ಶಾಪ, ಮೊದಲಾದವು ತುಂಬಿದ ಮಾತು: didn’t like his language ಅವನ ಕೆಟ್ಟ ಭಾಷೆ ಹಿಡಿಸಲಿಲ್ಲ.

  • language laboratory
    ನಾಮವಾಚಕ
    ಭಾಷಾ ಪ್ರಯೋಗಾಲಯ; ವಿದೇಶೀ ಭಾಷೆಯನ್ನು ಕಲಿಯಲು ಟೇಪ್‍ರೆಕಾರ್ಡರುಗಳು ಮೊದಲಾದ ಸಾಧನಗಳಿಂದ ಸಜ್ಜಿತವಾದ ಕೋಣೆ.

    language-master
    ನಾಮವಾಚಕ
    (ಸಾಮಾನ್ಯವಾಗಿ ಆಧುನಿಕ ಅನ್ಯಭಾಷೆಯ ವಿಷಯದಲ್ಲಿ) ಭಾಷಾ ಬೋಧಕ.

    langue d'oc
    ನಾಮವಾಚಕ
    (ಲ್ವಾರ್‍ ನದಿಯ ದಕ್ಷಿಣ ಪ್ರದೇಶದಲ್ಲಿ ಮಾತನಾಡುತ್ತಿದ್ದ, ಆಧುನಿಕ ಪ್ರೊವೆನ್ಸಾಲ್‍ ಭಾಷೆಯ ಮೂಲವಾದ) ಮಧ್ಯಯುಗದ ಹ್ರೆಂಚ್‍ಭಾಷೆ.

    langue d'oil
    ನಾಮವಾಚಕ
    (ಲ್ವಾರ್‍ ನದಿಯ ಉತ್ತರಪ್ರದೇಶದಲ್ಲಿ ಮಾತನಾಡುತ್ತಿದ್ದ, ಆಧುನಿಕ ಹ್ರೆಂಚ್‍ಭಾಷೆಯ ಮೂಲವಾದ) ಮಧ್ಯಯುಗದ ಹ್ರೆಂಚ್‍ಭಾಷೆ.

    langue de chat
    ನಾಮವಾಚಕ
    ಬೆರಳು – ಬಿಸ್ಕತ್ತು ಯಾ ಚಾಕಲೇಟು; ಬೆರಳಿನ ಆಕಾರದಲ್ಲಿರುವ, ತೆಳುವಾದ, ಗರಿಗರಿಯಾದ ಬಿಸ್ಕತ್ತು ಯಾ ಚಾಕಲೇಟ್‍ ತುಂಡು.

    languid
    ಗುಣವಾಚಕ
  • ಜಡ; ಮಂದ; ನಿಷ್ಕ್ರಿಯ; ಅಲಸ.
  • ಶಕ್ತಿಗುಂದಿದ; ನಿರ್ವೀರ್ಯ; ಉತ್ಸಾಹಶೂನ್ಯ; ಹುರುಪಿಲ್ಲದ; ಶಕ್ತಿ, ಉತ್ಸಾಹಗಳು ಕಡಿಮೆಯಾದ ಯಾ ಇಲ್ಲದ.
  • ಶ್ರಮ ವಹಿಸಲು ಯಾ ಶ್ರಮಿಸಲು ಇಚ್ಛೆಯಿಲ್ಲದ; ಕಷ್ಟಪಡಲು ಇಷ್ಟಪಡದ.
  • ಮಂದಸ್ವಭಾವದ; ಮಂಕುಬಡಿದಂತಿರುವ.
  • (ಭಾವನೆಗಳು ಮೊದಲಾದವುಗಳ ವಿಷಯದಲ್ಲಿ)
    1. ಸತ್ತ್ವವಿಲ್ಲದ; ಬಲವಿಲ್ಲದ.
    2. ಆಸಕ್ತಿರಹಿತ; ನಿರಾಸಕ್ತಿಯ.
  • (ವ್ಯಾಪಾರ ಮೊದಲಾದವುಗಳ ವಿಷಯದಲ್ಲಿ) ಭರಾಟೆಯಿಲ್ಲದ; ಲವಲವಿಕೆ ಇಲ್ಲದ; ಚಟುವಟಿಕೆ ಇಲ್ಲದ; ಚುರುಕಿಲ್ಲದ; ಚೈತನ್ಯಶೂನ್ಯ.
  • ಕ್ಷೀಣಬಲದ; ದುರ್ಬಲ; ಅಶಕ್ತ; ಶಕ್ತಿಹೀನ; ನಿಶ್ಯಕ್ತ.
  • ನೀರಸ; ಸ್ವಾರಸ್ಯವಿಲ್ಲದ; ಸಪ್ಪೆ(ಯಾದ).
  • ಮಂಕಾದ; ಮಬ್ಬಾದ; ಕಳೆಯಿಲ್ಲದ; ನಿಸ್ತೇಜ; ಮ್ಲಾನ.
  • ಅತಿ ನಿಧಾನವಾದ; ಪಟುತ್ವವಿಲ್ಲದ; ಚುರುಕಾಗಿರದ.


  • logo