logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

immodest
ಗುಣವಾಚಕ
  • ಮರ್ಯಾದೆಗೆಟ್ಟ; ಲಜ್ಜೆಯಿಲ್ಲದ; ನಿರ್ಲಜ್ಜ.
  • ಅಸಭ್ಯ; ಅಶಿಷ್ಟ; ಅನುಚಿತ; ಅಯೋಗ್ಯ: immodest behaviour ಅಸಭ್ಯವರ್ತನೆ.
  • ಧೃಷ್ಟ; ನಿರ್ಭಿಡೆಯ; ಧೂರ್ತ; ಅವಿನೀತ; ಉದ್ಧಟತನದ; ಮುಂದೆಬಿದ್ದು ಹೋಗುವ: immodest boasts ಉದ್ಧಟತನದ ಬಡಾಯಿಗಳು.

  • immodestly
    ಕ್ರಿಯಾವಿಶೇಷಣ
  • ಲಜ್ಜೆಯಿಲ್ಲದೆ.
  • ಅಸಭ್ಯವಾಗಿ.
  • ಉದ್ಧಟತನದಿಂದ.

  • immodesty
    ನಾಮವಾಚಕ
  • ಧಾರ್ಷ್ಟ್ಯ; ನಿರ್ಭಿಡೆ; ಉದ್ಧಟತನ; ಧೂರ್ತತೆ.
  • ಅಸಭ್ಯತೆ.
  • ನಿರ್ಲಜ್ಜೆ.

  • immolate
    ಸಕರ್ಮಕ ಕ್ರಿಯಾಪದ
  • (ವ್ಯಕ್ತಿ ಯಾ ಪ್ರಾಣಿಯನ್ನು) ಬಲಿಯಾಗಿ, ಆಹುತಿಯಾಗಿ ಕೊಲ್ಲು, ವಧಿಸು.
  • (ರೂಪಕವಾಗಿ) (ವಸ್ತು ಮೊದಲಾದವನ್ನು ಯಾವುದೇ ಒಂದಕ್ಕಾಗಿ) ಬಲಿಕೊಡು; ತ್ಯಾಗಮಾಡು: she has immolated all her affections ಅವಳು ತನ್ನ ಪ್ರೀತಿ ಸರ್ವಸ್ವವನ್ನೂ ಬಲಿಕೊಟ್ಟಿದ್ದಾಳೆ.

  • immolation
    ನಾಮವಾಚಕ
  • ಬಲಿ ಕೊಡುವುದು; ಆಹುತಿಯಾಗಿ ಕೊಲ್ಲುವುದು.
  • ಆಹುತಿ; ಬಲಿ(ಯಾಗಿ ಅರ್ಪಿಸಿದ್ದು).
  • (ರೂಪಕವಾಗಿ) ತ್ಯಾಗ; ಅರ್ಪಣೆ; ಬಲಿದಾನ; ಯಾವುದೇ ವ್ಯಕ್ತಿಗಾಗಿ ಯಾ ಧ್ಯೇಯಕ್ಕಾಗಿ ತನ್ನ ಹಿತ, ಧನ, ಪ್ರಾಣ, ಮೊದಲಾದವನ್ನು ಬಲಿಯಾಗಿ ಅರ್ಪಿಸುವುದು.

  • immolator
    ನಾಮವಾಚಕ
  • (ಬಲಿ ಪಶುವನ್ನು) ಕೊಲ್ಲುವವನು; ಬಲಿಕೊಡುವವ.
  • (ರೂಪಕವಾಗಿ) ಬಲಿದಾನಿ.

  • immoral
    ಗುಣವಾಚಕ
  • ನೀತಿಗೆಟ್ಟ; ಅನೈತಿಕ; ನೀತಿವಿರುದ್ಧವಾದ.
  • ದುಷ್ಟ; ನೀಚ; ಪಾಪದ: immoral acts ಪಾಪಕೃತ್ಯಗಳು.
  • ನಡತೆಗೆಟ್ಟ; ಕೆಟ್ಟ ನಡತೆಯ; ದುಶ್ಯೀಲ, ಮುಖ್ಯವಾಗಿ ವಿಷಯಲಂಪಟತನದ, ವ್ಯಭಿಚಾರದ.

  • immorality
    ನಾಮವಾಚಕ
  • ಅನೈತಿಕತೆ; ನೀತಿಗೆಟ್ಟತನ.
  • ದುಷ್ಟತನ; ನೀಚತನ; ಪಾಪಿಷ್ಠತೆ.
  • ದುರಾಚಾರ; ವಿಷಯಲಂಪಟತೆ; ವ್ಯಭಿಚಾರ.

  • immorally
    ಕ್ರಿಯಾವಿಶೇಷಣ
  • ಅನೈತಿಕವಾಗಿ; ನೀತಿಗೆಟ್ಟ ರೀತಿಯಲ್ಲಿ; ನೀತಿವಿರುದ್ಧವಾಗಿ.
  • ದುಷ್ಟರೀತಿಯಲ್ಲಿ; ಪಾಪತನದಿಂದ.
  • ದುರಾಚಾರದಿಂದ; ಲಂಪಟತನದಿಂದ.

  • immortal
    ಗುಣವಾಚಕ
  • ಸಾವಿಲ್ಲದ; ಅಮರ್ತ್ಯ; ಅಮರ: immortal fame ಅಮರ ಕೀರ್ತಿ.
  • ದಿವ್ಯ; ದೈವೀ: immortal longings ದೈವೀಹಂಬಲಗಳು.
  • ಅಳಿಯದ; ಅಚ್ಚಳಿಯದ; ಕೆಟ್ಟುಹೋಗದ; ಶಾಶ್ವತವಾದ; ನಶ್ವರವಲ್ಲದ; ಎಂದೆಂದಿಗೂ ಇರುವ: the world itself is not immortal ಪ್ರಪಂಚವೇ ಶಾಶ್ವತವಲ್ಲ.
  • (ಕೀರ್ತಿ, ಪ್ರಸಿದ್ಧ ಕೃತಿಗಳು ಯಾ ಅವುಗಳ ಕರ್ತೃಗಳ ವಿಷಯದಲ್ಲಿ) ಅಳಿಯದ; ಮಾಸದ; ನಶಿಸದ; ಅಮರ; ಶಾಶ್ವತ: immortal poetry ಅಮರ ಕಾವ್ಯ.
  • (ಆಡುಮಾತು) ಸ್ಥಿರ; ನಿತ್ಯ; ಬಹುಕಾಲವಿರುವ; ಎಂದೆಂದಿಗೂ ಇರುವ: immortal thanks for your inestimable kindness ನಿಮ್ಮ ಅಪಾರ ದಯೆಗೆ ಎಂದೆಂದಿಗೂ ವಂದನೆಗಳು.


  • logo