ಸ್ವಪ್ರತಿಷ್ಠೆಯಿಂದ ಮಾತನಾಡು, ಬರೆ; ಮೀತಿಮೀರಿ ತನ್ನ ವಿಷಯವಾಗಿಯೇ ಪ್ರಸ್ತಾಪಮಾಡು.
egregious
ಗುಣವಾಚಕ
(ಪ್ರಾಚೀನ ಪ್ರಯೋಗ) (ವ್ಯಕ್ತಿ, ಶೀಲ, ಮೊದಲಾದವುಗಳ ವಿಷಯದಲ್ಲಿ) ಪ್ರಖ್ಯಾತ; ಪ್ರಸಿದ್ಧ; ಅತಿಶಯವಾದ; ಮಿಗಿಲಾದ; ಸರ್ವೋತ್ಕೃಷ್ಟ; ಅತ್ಯುತ್ತಮ; ಲೋಕೋತ್ತರ: Pitt looked upon Clive as a splendid and egregious youth ಕೈವ್ ಒಬ್ಬ ಅದ್ಭುತ ಹಾಗೂ ಲೋಕೋತ್ತರ ತರುಣನೆಂದು ಪಿಟ್ ಭಾವಿಸಿದ.
ಘೋರ(ವಾದ); ಮಹಾ; ತೀರಾ; ಭಾರಿ; ಅತಿದೊಡ್ಡ; ಪರಮ; ಶುದ್ಧ; ಪಕ್ಕಾ: egregious folly ಘೋರ ಅವಿವೇಕ. egregious blunder ಭಾರಿ ಪ್ರಮಾದ. egregious ass ಶುದ್ಧ — ಕತ್ತೆ, ದಡ್ಡ.
egregiously
ಕ್ರಿಯಾವಿಶೇಷಣ
ಘೋರವಾಗಿ; ಅತಿಯಾಗಿ; ಶುದ್ಧಾಂಗವಾಗಿ.
egregiousness
ನಾಮವಾಚಕ
ಅತಿಯಾಗಿರುವಿಕೆ.
egress
ನಾಮವಾಚಕ
ನಿರ್ಗಮನ; ಬಹಿರ್ಗಮನ; ಹೊರಕ್ಕೆ ಹೋಗುವುದು.
ನಿರ್ಗಮನ ಸ್ವಾತಂತ್ರ್ಯ; ಹೊರಕ್ಕೆ ಹೋಗುವ ಹಕ್ಕು.
(ಖಗೋಳ ವಿಜ್ಞಾನ) ಮೋಕ್ಷ; ಬಿಡುಗಡೆ; ಮುಕ್ತಿ; ಗ್ರಹಣದಿಂದ ಯಾ ಸಂಕ್ರಮಣದಿಂದ ಆಕಾಶಕಾಯ ಹೊರಬರುವುದು.
ಹೊರಹಾದಿ; ಹೊರಕ್ಕೆ ಹಾದಿ; ನಿರ್ಗಮನ ಯಾ ಬಹಿರ್ಗಮನ ಮಾರ್ಗ (ರೂಪಕವಾಗಿ ಸಹ).
egression
ನಾಮವಾಚಕ
ನಿರ್ಗಮನ; ಬಹಿರ್ಗಮನ; ಹೊರಕ್ಕೆ ಹೋಗುವಿಕೆ; ಹೊರಬೀಳುವುದು; ಹೊರ ಹೊರಡುವುದು.
egret
ನಾಮವಾಚಕ
ಬೆಳ್ಳಕ್ಕಿ; ಬಿಳಿ ಹೆರನ್ ಪಕ್ಷಿ; ಸಣ್ಣ ಕೊಕ್ಕರೆ; ನಾರಾಯಣ ಪಕ್ಷಿ.
(ಕೆಲವು ಜಾತಿಯ ಹೂಗಿಡಗಳ ಬೀಜಗಳ ಮೇಲಿನ) ತುಪ್ಪುಳಗೂದಲು.
Egyptian
ಗುಣವಾಚಕ
ಈಜಿಪ್ಟಿನ.
Egyptian
ನಾಮವಾಚಕ
ಐಗುಪ್ತ; ಈಜಿಪ್ಟಿನವನು; ಈಜಿಪ್ಟಿನಲ್ಲಿ ಹುಟ್ಟಿದವನು(ಳು) ಯಾ ಅಲ್ಲಿಯ ನಿವಾಸಿ.
(ಪ್ರಾಚೀನ ಪ್ರಯೋಗ) ‘ಜಿಪ್ಸಿ’ ಜನಾಂಗದವನು.
ಮೂರನೆಯ ಶತಮಾನದವರಗೆ ಈಜಿಪ್ಟಿನಲ್ಲಿ ಬಳಸುತ್ತಿದ್ದ ಹ್ಯಾಮಿಟಿಕ್ ಭಾಷೆ.
Egyptianize
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಈಜಿಪ್ಟೀಕರಿಸು; ಈಜಿಪ್ಟಿನದಾಗಿಸು; ಈಜಿಪ್ಟಿನ ಮೂಲ ಯಾ ಲಕ್ಷಣಗಳನ್ನು ಕೊಡು. ಈಜಿಪ್ಟಿನದಾಗು.