logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dead spit
ನಾಮವಾಚಕ
(ಆಡುಮಾತು) ಪಡಿಯಚ್ಚು; ತದ್ರೂಪ.

dead time
ನಾಮವಾಚಕ
(ಭೌತವಿಜ್ಞಾನ) ಸ್ತಬ್ಧಕಾಲ; ಮಿಡಿತ ಮೊದಲಾದವನ್ನು ದಾಖಲು ಮಾಡಿಕೊಂಡಾದ ಮೇಲೆ ಸೂಚಕಸಾಧನವು ಸೂಕ್ಷ್ಮಗ್ರಾಹಿತ್ವವನ್ನು ಪುನಃ ಗಳಿಸಬೇಕಾಗಿರುವುದರಿಂದ ಮತ್ತೊಂದು ಮಿಡಿತ ಮೊದಲಾದವನ್ನು ದಾಖಲುಮಾಡಿಕೊಳ್ಳಲು ಸಾಧ್ಯವಿಲ್ಲ ದಿರುವ ಅಲ್ಪಾವಧಿ.

dead water
ನಾಮವಾಚಕ
  • ನಿಂತ ನೀರು; ನಿಶ್ಚಲಜಲ; ಹರಿಯದ ನೀರು.
  • ಜಲಾವರ್ತ; ನೀರು ಸುಳಿ; ಹಡಗು ಚಲಿಸುವಾಗ ಅದರ ಎರಡು ಪಕ್ಕಗಳಲ್ಲೂ ಏಳುವ ಸುಳಿನೀರು.
  • ಇಳಿನೀರು; ಉಬ್ಬರ ಹರಿವಿಲ್ಲದ ಯಾ ಅತ್ಯಂತ ಕೆಳಮಟ್ಟದಲ್ಲಿರುವ ಭರತದ ನೀರು.

  • dead weight
    ನಾಮವಾಚಕ
  • ಜಡತೂಕ; ಹೆಣಭಾರ; ಜಡ ಪದಾರ್ಥವೊಂದರ ಭಾರಿ ತೂಕ.
  • (ರೂಪಕವಾಗಿ) ನಿರಾಧಾರ ಸಾಲ; ಆಸ್ತಿಗಿಂತಲೂ ಹೆಚ್ಚಾಗಿರುವ ಸಾಲ.
  • ಒಟ್ಟು ತೂಕ; ಒತ್ಟು ಭಾರ; ಸಗಟು ತೂಕ; ಸರಕು, ಇಂಧನ, ಚಾಲಕರು ಮತ್ತು ಪ್ರಯಾಣಿಕರು ಇಷ್ಟನ್ನೂ ಒಳಗೊಂಡಂತೆ ಹಡಗಿನ ಒಟ್ಟು ತೂಕ.

  • dead wire
    ನಾಮವಾಚಕ
    ಸತ್ತ ತಂತಿ; ವಿದ್ಯುತ್ತು ಹರಿಯದಿರುವ ತಂತಿ; ಜಡ ತಂತಿ.

    dead wood
    ನಾಮವಾಚಕ
  • ಒಣಗಿದ ಮರ; ಮರದ ಸತ್ತಭಾಗ; ಮರದ ಮೇಲೆ ಒಣಗಿ ನಿಂತಿರುವ ಕೊಂಬೆ ಮೊದಲಾದ ಭಾಗ.
  • (ರೂಪಕವಾಗಿ) ಅಪ್ರಯೋಜಕ; ನಿಷ್ಪ್ರಯೋಜಕ; ನಿರುಪಯುಕ್ತ ವ್ಯಕ್ತಿ(ಗಳು) ಯಾ ವಸ್ತು(ಗಳು).
  • (ನೌಕಾಯಾನ) ಹಡಗಿನ ಎರಡು ತುದಿಗಳಿಗೂ ಬಿಗಿಸಿದ ಮರದ ಅಡ್ಡತೊಲೆಗಳು.

  • dead's part
    ನಾಮವಾಚಕ
    (ಸ್ಕಾಟ್ಲಂಡ್‍ ನ್ಯಾಯಶಾಸ್ತ್ರ) ಮೃತನ ಭಾಗ; ಉಯಿಲುದಾರನ ಭಾಗ; ಯಾರಿಗೆ ಸೇರಬೇಕೆನ್ನುವುದನ್ನು ಉಯಿಲು ಬರೆಯುವವನು ನಿರ್ಧರಿಸಬಹುದಾದ ಅವನ ಆಸ್ತಿಯಲ್ಲಿನ ಭಾಗ.

    dead-alive
    ಗುಣವಾಚಕ
  • (ವ್ಯಕ್ತಿಯ ವಿಷಯದಲ್ಲಿ) ಜೀವಚ್ಚವವಾದ; ಬದುಕಿದ್ದರೂ ಸತ್ತಂತಿರುವ.
  • (ವ್ಯಕ್ತಿಯ ವಿಷಯದಲ್ಲಿ) ಉತ್ಸಾಹಶೂನ್ಯ; ಗೆಲುವಿಲ್ಲದ; ಚಟುವಟಿಕೆಯಿಲ್ಲದ.
  • (ಸ್ಥಳ, ಉದ್ಯೋಗ, ಮೊದಲಾದವುಗಳ ವಿಷಯದಲ್ಲಿ) ಸಪ್ಪೆ; ನೀರಸ; ಜಡ; ಬೇಸರ – ಇರುವ, ಹಿಡಿಸುವ.

  • dead-and-alive
    ಗುಣವಾಚಕ
    = dead-alive.

    dead-beat
    ನಾಮವಾಚಕ
  • ಪೂರಾ ಸುಸ್ತಾದವ; ಪೂರ್ತಿ ಬಳಲಿದವ; ಬಹಳ ಆಯಾಸ ಗೊಂಡವ.
  • ಹಣವಿಲ್ಲದವ; ದುಡ್ಡಿಲ್ಲದವ; ಕಾಸಿಲ್ಲದವ.
  • (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಸದಾ ಸಾಲದಲ್ಲಿ ಮುಳುಗಿರುವವ; ಸದಾ ಸಾಲಿಗ.


  • logo