logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

camel-hair
ನಾಮವಾಚಕ
  • (ಬಟ್ಟೆ, ರಗ್ಗು, ಬಣ್ಣದ ಕುಂಚ ಮೊದಲಾದವುಗಳನ್ನು ತಯಾರಿಸಲು ಬಳಸುವ) ಒಂಟೆಯ ಕೂದಲು.
  • ಒಂಟೆಕೂದಲು ಬಟ್ಟೆ; ಒಂಟೆಯ ಕೂದಲಿನಿಂದ, ಕೆಲವೊಮ್ಮೆ ಉಣ್ಣೆಯನ್ನು ಸೇರಿಸಿ ತಯಾರಿಸಿದ, ಮುಟ್ಟಲು ರೇಷ್ಮೆಯಂತಿರುವ, ನಸುಕಂದುಬಣ್ಣದ, ಮೃದು ಬಟ್ಟೆ.
  • ಅಳಿಲಿನ ಬಾಲದ ಕೂದಲಿನಿಂದ ಮಾಡಿದ ಚಿತ್ರಕಾರನ ಕುಂಚ.

  • camel-hair
    ಗುಣವಾಚಕ
  • ಒಂಟೆ ಕೂದಲಿನಿಂದ ಮಾಡಿದ.
  • (ಚಿತ್ರಕಾರನ ಕುಂಚದ ವಿಷಯದಲ್ಲಿ) ಅಳಿಲಿನ ಬಾಲದ ಕೂದಲಿನಿಂದ ಮಾಡಿದ.

  • cameleer
    ನಾಮವಾಚಕ
  • ಒಂಟೆ ಮಾವುತ; ಒಂಟೆ ನಡೆಸುವವನು; ಒಂಟೆ ಸವಾರ.
  • ಒಂಟೆ ಸಿಪಾಯಿ; ಒಂಟೆಯ ಮೇಲೆ ಸವಾರಿ ಮಾಡುವ ಸೈನಿಕ.

  • camellia
    ನಾಮವಾಚಕ
    (ಸಸ್ಯವಿಜ್ಞಾನ) ಕಮೆಲಿಯ; ಥಿಯೇಸೀ ವಂಶಕ್ಕೆ ಸೇರಿದ, ಉಷ್ಣವಲಯ ಏಷ್ಯಾಖಂಡದ, ಮುಖ್ಯವಾಗಿ ಚೀನಾ, ಜಪಾನ್‍ ದೇಶಗಳ ಗುಲಾಬಿಯಂಥ ಹೂಗಳನ್ನು ಬಿಡುವ, ಒಂದು ನಿತ್ಯ ಹಸಿರು ಕುಲ ಯಾ ಈ ಕುಲದ ಗಿಡ.

    camelopard
    ನಾಮವಾಚಕ
  • (ಪ್ರಾಚೀನ ಪ್ರಯೋಗ) ಜಿರಾಹೆ.
  • (ಖಗೋಳ ವಿಜ್ಞಾನ) ಕರಭ (ನಕ್ಷತ್ರಪುಂಜ); ಉತ್ತರ ದಿಕ್ಕಿನಲ್ಲಿ ಸಪ್ತರ್ಷಿ ಮಂಡಲಕ್ಕೂ ಶರ್ಮಿಷ್ಠಾ ನಕ್ಷತ್ರಪುಂಜಕ್ಕೂ ಮಧ್ಯೆ ಇರುವ ನಕ್ಷತ್ರಪುಂಜ.

  • camelry
    ನಾಮವಾಚಕ
    ಒಂಟೆದಳ; ಒಂಟೆರಾವುತರು; ಉಷ್ಟ್ರಪಡೆ; ಒಂಟೆಯ ಮೇಲೆ ಹೋಗುವ ಸೈನಿಕ ದಳ.

    Camembert
    ನಾಮವಾಚಕ
    ಕ್ಯಾಮಾಮ್‍ಬೇರ್‍ (ಚೀಸು, ಗಿಣ್ಣು); ಹಸುವಿನ ಹಾಲಿನಿಂದ ಮಾಡಿದ, ಮಧ್ಯಭಾಗದಲ್ಲಿ ಕೆನೆಯಂತಿರುವ, ಹೊಂಬಣ್ಣದ ಮೃದು ಚೀಸು.

    cameo
    ನಾಮವಾಚಕ
  • ರತ್ನ ಶಿಲಾಕೆತ್ತನೆ; ರತ್ನಗೆತ್ತನೆ; ಕಲ್ಲುಬ್ಬುಕೆತ್ತನೆ; ಬೇರೆ ಬೇರೆ ಬಣ್ಣದ ಪದರಗಳುಳ್ಳ ಪ್ರಶಸ್ತ ಶಿಲೆಯ ಮೇಲ್ಭಾಗದ ಪದರದಲ್ಲಿ ಉಬ್ಬುಚಿತ್ರ ಯಾ ಉಬ್ಬುಪ್ರತಿಮೆ ಕೆತ್ತಿ, ತಳಗಿನ ಪದರವನ್ನು ಹಿನ್ನೆಲೆಯಾಗಿ ಬಿಟ್ಟಿರುವ ಉಬ್ಬುಗೆತ್ತನೆ.
  • ರತ್ನಗೆತ್ತನೆಯಂಥ ಉಬ್ಬುಶಿಲ್ಪ.
  • (ವಸ್ತುವನ್ನು ಪ್ರಭಾವಪೂರ್ಣವಾಗಿ ನಿರೂಪಿಸುವ) ಕಿರು–ಸಾಹಿತ್ಯಕ ಚಿತ್ರ ಯಾ ನಾಟಕದ ದೃಶ್ಯ.

  • camera
    ನಾಮವಾಚಕ ನುಡಿಗಟ್ಟು
    ಕ್ಯಾಮರ; ಬಿಂಬಗ್ರಾಹಿ; ಛಾಯಾಚಿತ್ರಗ್ರಾಹಿ; ಛಾಯಾಚಿತ್ರಗಳನ್ನು ಯಾ ದೂರದರ್ಶನ ಚಿತ್ರಗಳನ್ನು ತೆಗೆಯುವ ಉಪಕರಣ.
  • in camera
    1. ಗುಪ್ತವಾಗಿ; ಗುಟ್ಟಾಗಿ; ರಹಸ್ಯವಾಗಿ; ಏಕಾಂತದಲ್ಲಿ; ಹೊರಗಿನವರಿಗೆ ಪ್ರವೇಶವಿಲ್ಲದೆ.
    2. (ನ್ಯಾಯಶಾಸ್ತ್ರ) ನ್ಯಾಯಾಧೀಶನ ಕೋಣೆಯಲ್ಲಿ.
  • on camera ಚಿತ್ರೀಕರಣವಾಗುವಾಗ; ಟೆಲಿವಿಷನ್‍ ಚಿತ್ರಗ್ರಾಹಿಯ ಯಾ ಛಾಯಾಚಿತ್ರಗ್ರಾಹಿಯ–ಮುಂದೆ, ಎದುರಿನಲ್ಲಿ.

  • camera lucida
    ನಾಮವಾಚಕ
    ದ್ಯುತಿಸಂಪುಟ; ಯಾವುದೇ ವಸ್ತುವಿನ ಆಕೃತಿಯನ್ನು ರೇಖಿಸಲು ಅನುಕೂಲವಾಗುವಂತೆ, ಅದರ ಬಿಂಬವನ್ನು ಹಾಳೆಯ ಮೇಲೆ ಮೂಡಿಸುವ ಒಂದು ಸಲಕರಣೆ (ಸಾಮಾನ್ಯವಾಗಿ ಸೂಕ್ಷ್ಮದರ್ಶಕದ ನೇತ್ರಕಕ್ಕೆ ಲಗತ್ತಿಸುವಂಥದು).


    logo