logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

balloonist
ನಾಮವಾಚಕ
= ballooner.

ballot
ನಾಮವಾಚಕ
  • (ಚಿಕ್ಕಗೋಲಿ, ಟಿಕೀಟು, ಕಾಗದಗಳನ್ನು ಉಪಯೋಗಿಸಿ ಮಾಡುವ ಸಾಮಾನ್ಯವಾಗಿ ರಹಸ್ಯವಾದ) ಮತದಾನ.
  • ಓಟಿನ ಚೀಟಿ ಯಾ ಗೋಲಿ; ಮತದಾನದಲ್ಲಿ ಬಳಸುವ ಚಿಕ್ಕಗೋಲಿ, ಟಿಕೀಟು, ಕಾಗದಗಳು.
  • (ಹಾಗೆ ಚಲಾಯಿಸಿದ) ಒಟ್ಟು ಓಟು; ಓಟುಗಳ ಮೊತ್ತ ಯಾ ಒಟ್ಟು ಸಂಖ್ಯೆ.
  • ಚೀಟಿ ಆಯ್ಕೆ; ಚೀಟಿ ಎತ್ತುವುದು; ಚೀಟಿ ಹಾಕಿ ಆಯುವುದು.
  • ಓಟಿನ, ಮತದಾನದ – ಹಕ್ಕು.
  • (ಮತದಾನದ) ಉಮೇದುವಾರರ ಪಟ್ಟಿ.

  • ballot
    ಅಕರ್ಮಕ ಕ್ರಿಯಾಪದ ಸಕರ್ಮಕ ಕ್ರಿಯಾಪದ ಪದಗುಚ್ಛ
    ಓಟಿನ ಮೂಲಕ ಮತ – ತೆಗೆದುಕೊ, ಪಡೆ; ಓಟು ಹಾಕುವ ಮೂಲಕ ಮತ ಪ್ರದರ್ಶಿಸು. ballot for (ಅಧಿಕಾರಿ ಮೊದಲಾದವರನ್ನು ಸಾಮಾನ್ಯವಾಗಿ ರಹಸ್ಯ) ಮತದಾನದಿಂದ ಚುನಾಯಿಸು.
  • (ಸಾಮಾನ್ಯವಾಗಿ ಗುಟ್ಟಾಗಿ) ಓಟು – ಕೊಡು, ಮಾಡು; ಮತನೀಡು.
  • ಚೀಟಿ ಎತ್ತು; (ಅಗ್ರಸ್ಥಾನಕ್ಕಾಗಿ ಮುಖ್ಯವಾಗಿ ಹೌಸ್‍ ಆಹ್‍ ಕಾಮನ್ಸ್‍ನಲ್ಲಿ ಮಸೂದೆಗಳನ್ನು ಮಂಡಿಸುವ ಹಕ್ಕಿಗಾಗಿ, ಚೀಟಿಯ ಮೂಲಕ) ಆಯ್ಕೆ ಮಾಡು; ಆರಿಸು; ಚುನಾಯಿಸು.

  • ballot-box
    ನಾಮವಾಚಕ
    (ಮುಖ್ಯವಾಗಿ ಓಟುಗಾರರು ಗುರುತುಮಾಡಿರುವ ಓಟುಚೀಟಿಗಳನ್ನು ಹಾಕಲು ಬಳಸುವ) ಓಟು ಪೆಟ್ಟಿಗೆ; ಮತ(ಗಳ) ಪೆಟ್ಟಿಗೆ; ಆಯ್ಕೆ ಚೀಟಿ ಪೆಟ್ಟಿಗೆ; ಮತದಾನದ ಪೆಟ್ಟಿಗೆ.

    ballot-paper
    ನಾಮವಾಚಕ
    ಓಟು, ಮತ – ಚೀಟಿ; ಮತಪತ್ರ; ಓಟು ಮಾಡಲು ಬಳಸುವ ಕಾಗದ.

    ballottement
    ನಾಮವಾಚಕ
    (ವೈದ್ಯಶಾಸ್ತ್ರ) ಬಸಿರು ಪರೀಕ್ಷೆ; ಗರ್ಭಧಾರಣ ಪರೀಕ್ಷೆಯ ಒಂದು ರೀತಿ; ಬೆರಳಿಂದ ಅವುಕಿ ಗರ್ಭದೊಳಗೆ ಪಿಂಡಗೂಸು ಪುಟವೇಳುವುದನ್ನು ಗ್ರಹಿಸುವ ಮೂಲಕ ಬಸಿರನ್ನು ಪರೀಕ್ಷಿಸುವ ಕ್ರಮ.

    ballpark
    ನಾಮವಾಚಕ ನುಡಿಗಟ್ಟು
    (ಅಮೆರಿಕನ್‍ ಪ್ರಯೋಗ) ಬೇಸ್‍ಬಾಲ್‍ (ಆಟದ) ಮೈದಾನ. not in the right ballpark (ಅಮೆರಿಕನ್‍ ಪ್ರಯೋಗ) ಉದ್ದೇಶಕ್ಕೆ – ದೂರವಾಗಿ, ದೂರದಲ್ಲಿ, ಸ್ವಲ್ಪವೂ ಹತ್ತಿರದಲ್ಲಿಲ್ಲದೆ.

    ballroom
    ನಾಮವಾಚಕ
    ಕುಣಿತದ ಕೋಣೆ; ನೃತ್ಯಮಂದಿರ; ನೃತ್ಯಾಗಾರ; ನರ್ತನಶಾಲೆ.

    ballroom dancing
    ನಾಮವಾಚಕ
    (ಸಾಮಾಜಿಕ ಮನರಂಜನೆಗಾಗಿ ಏರ್ಪಡಿಸುವ ಯಾ ಭಾಗವಹಿಸುವ) ನರ್ತನ; ನೃತ್ಯ.

    balls-up
    ನಾಮವಾಚಕ
    ಗೊಂದಲ; ಗಲಿಬಿಲಿ; ಗಲಭೆ; ಅವ್ಯವಸ್ಥೆ.


    logo